ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 
ಜಿಲ್ಲಾ ಸುದ್ದಿ

ಬಿಜೆಪಿ ಬೆನ್ನಿಗೆ ನಿಂತ ಐಟಿ ಕಾರ್ಯಕರ್ತರು!

ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಎಂದಿಗೂ ಮುಂದೆ...

ಬೆಂಗಳೂರು: ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಎಂದಿಗೂ ಮುಂದೆ. ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲೂ ಬಿಜೆಪಿ ಐಟಿ ಕೋಶವನ್ನು ವಿಶೇಷವಾಗಿ ತೊಡಗಿಸಿಕೊಂಡಿದೆ. ಈ ಕೋಶದ ಸುಮಾರು 125ಕ್ಕೂ ಹೆಚ್ಚು ಮಂದಿ ಪ್ರತಿ ನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಮಾರು 10 ಮಂದಿ ಕೋರ್ ಟೀಮ್ ನಲ್ಲಿದ್ದಾರೆ. ಉಳಿದವರೆಲ್ಲಾ ತಮ್ಮ ದಿನದ ವೃತ್ತಿ ನಿರ್ವಹಣೆಯ ಜೊತೆಗೆ ಬಿಜೆಪಿ ಪರವಾಗಿ ತಾವಿದ್ದಲ್ಲಿಂದಲೇ ಸಮಯ ನೀಡುತ್ತಾರೆ, ಸಭೆಗಳಿದ್ದಾಗಲಷ್ಟೇ ಪಾಲ್ಗೊಳ್ಳುತ್ತಾರೆ. ಐಟಿ ಕ್ಷೇತ್ರದ ಹಿರಿ ಕಿರಿಯ ತಂತ್ರಜ್ಞರು ಈ ತಂಡದಲ್ಲಿದ್ದಾರೆ. ಫೇಸ್ ಬುಕ್ ನಲ್ಲಿ ಪ್ರಚಾರ ಕಾರ್ಯ ಮಾಡುವುದಕ್ಕಾಗಿಯೇ ಒಂದು ತಂಡವಿದ್ದರೆ, ಟ್ವಿಟ್ಟರ್ ನಲ್ಲಿ ಪ್ರಚಾರ ನಡೆಸಲು ಮತ್ತೊಂದು ತಂಡವಿದೆ. ಇನ್ನು ಕ್ರೌಡ್ ಸೋರ್ಸಿಂಗ್‍ಗೆ ಮತ್ತೊಂದು ತಂಡ ಕಾರ್ಯನಿರ್ವಹಿಸುತ್ತದೆ.

ಸಾಮಾಜಿಕ ತಾಣದ ಪ್ರಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಚುನಾವಣೆ ಡಿಜಿಟಲ್ ಇನ್‍ಚಾರ್ಜ್ ವಿನೋದ್ ಕೃಷ್ಣಮೂರ್ತಿ, `ಇಂಟರ್‍ನೆಟ್ ಬಳಕೆದಾರರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ಅದೇ ರೀತಿ ಇ-ಕಾಮರ್ಸ್ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಎಲ್ಲ ವಹಿವಾಟುಗಳು ಆನ್ಲೈನ್‍ಗೆ ತಿರುಗುತ್ತಿವೆ. ಇಂತಹ ಸಂದರ್ಭದಲ್ಲಿ ಜನರು ಸಾಗುತ್ತಿರುವ
ದಾರಿಯಲ್ಲೇ ಚುನಾವಣಾ ಪ್ರಚಾರ ನಡೆಸಿದರೆ ಅದು ಪ್ರಭಾವಶಾಲಿಯಾಗುತ್ತದೆ' ಎಂದರು.
ಸಾಫ್ಟ್ ವೇರ್ ಬಳಕೆ ಬಿಜೆಪಿ ಐಟಿ ಸೆಲ್ ತಂಡ ವಿಶೇಷ ಸಾಫ್ಟ್ ವೇರ್ ಒಂದನ್ನು ಸಿದ್ಧಪಡಿಸಿಕೊಂಡಿದೆ.

ಭವಿಷ್ಯದಲ್ಲಿ ಬೂತ್ ಕುರಿತು ಪೇಪರ್‍ಲೆಸ್ ಮಾಹಿತಿ ನೀಡುವ ಗುರಿ ತಂಡದ್ದು. ಈ ಬಾರಿ ಟಿಕೆಟ್ ಪ್ರಿಂಟಿಂಗ್ ಮಷೀನ್ ಬಳಕೆಗೆ ನಿರ್ಧರಿಸಿದ್ದು ಈಗಾಗಲೇ ಸಾಫ್ಟ್ ವೇರ್ ನಲ್ಲಿ ಮಾಹಿತಿಗಳನ್ನು ಕ್ರೋಢೀಕರಿಸಿದೆ. ಪ್ರತಿಯೊಬ್ಬ ಮತದಾರರ ಮಾಹಿತಿ ಇರುವ  ದಾಖಲೆಯನ್ನು ಪ್ರತಿ ವಾರ್ಡ್‍ಗೂ ವಿತರಿಸಲಾಗಿದ್ದು, ಇದನ್ನಾಧರಿಸಿ ಮತದಾರರನ್ನು ನೇರವಾಗಿ ತಲುಪುವ ಪ್ರಯತ್ನ ಮಾಡಲಾಗುತ್ತದೆ.

ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ಪ್ರಚಾರ; ಛಾಯಾಚಿತ್ರ ಸಹಿತ ಪ್ರಕಟಿಸುವ ಯತ್ನ:

 ಇತ್ತೀಚೆಗೆ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಿರುವುದರಿಂದ ಕಾಂಗ್ರೆಸ್ ಫೇಸ್ ಬುಕ್ ಸಂದೇಶಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದೆ. ಫೇಸ್ ಬುಕ್ ನಲ್ಲಿ Youth with congress ಹಾಗೂ `Cogress4BBMP ಪುಟ ರೂಪಿಸಿದ್ದು, ಇದರಲ್ಲೇ ಬಿಬಿಎಂಪಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ ಅವರ ನೇತೃತ್ವದಲ್ಲಿ ಐಟಿ ತಂಡ ರಚನೆಯಾಗಿದ್ದು, ಕಾಂಗ್ರೆಸ್‍ನ ಮುಖಂಡರು ನಿತ್ಯ
ಮಾಡುವ ಪ್ರಚಾರದ ವಿವರವನ್ನು ಪ್ರಕಟಿಸಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಮುಖಂಡರು ನಡೆಸುತ್ತಿರುವ ಅಭಿಯಾನವನ್ನು ಛಾಯಾಚಿತ್ರ ಸಮೇತ ಪ್ರಕಟಿಸಿ ಸಾಧ್ಯವಾದಷ್ಟು ಜನರಿಗೆ ಮುಟ್ಟಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ತೊಡಗಿದೆ.

`ಬಿಬಿಎಂಪಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಇರುವ ಸಮಯ ಬಹಳ ಕಡಿಮೆ. ಈ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಲು ಸಾಮಾಜಿಕ ಜಾಲತಾಣ ಬಳಸಲಾಗುತ್ತಿದೆ. ಜಿ-ಮೇಲ್ ಹಾಗೂ ಟ್ವಿಟ್ಟರ್ ಮೂಲಕವೂ ಪ್ರಚಾರ ಮಾಡಲಾಗುತ್ತಿದೆ.
 
ಆದರೆ, ನಗರದಲ್ಲಿ ಹೆಚ್ಚಿನವರು ಫೇಸ್‍ಬುಕ್ ಬಳಸುತ್ತಿರುವುದರಿಂದ, ಇದನ್ನೇ ಪ್ರಮುಖ ಪ್ರಚಾರ ಸಾಧನವಾಗಿರಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಸುಮಾರು
25 ಲಕ್ಷ ಮಂದಿಯನ್ನು ತಲುಪಲಾಗುತ್ತಿದೆ' ಎನ್ನುತ್ತಾರೆ ಶಾಸಕ ಡಾ.ಸುಧಾಕರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video