ಬೆಂಗಳೂರು: ಸಾಲಬಾಧೆ, ಬೆಳೆ ನಷ್ಟದ ಹಿನ್ನಲೆಯಲ್ಲಿ ಬುಧವಾರ ರಾಜ್ಯದಲ್ಲಿ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್‍ನ ಪರಶುರಾಮ್ (24), ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ. ಸರಗೂರಿ ನ ಸಿದ್ದೇಗೌಡ (35) , ಲಿಂಗಸ್ಗೂರು ತಾಲೂಕಿನ ಕಡದರಗಡ್ಡಿ ಗ್ರಾಮದ ದುರಗಪ್ಪ (45) ಮತ್ತು ಶಹಾಪುರ ತಾಲೂಕಿನ ಹಸನಸಾಬ ಚೌದ್ರಿ (45) ಮೃತ ರೈತರು ಪರಶುರಾಮ್ ರು. 2 ಲಕ್ಷ ಸಾಲ ಹೊಂದಿದ್ದರು.
ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳೆಯೂ ಕೈಕೊಟ್ಟಿತ್ತು. ಸಾಲ ತೀರಿಸುವ ಮಾರ್ಗ ಕಾಣದಾದ ರೈತ ನೇಣು ಹಾಕಿಕೊಂಡಿದ್ದಾರೆ. ಸಿದ್ದೇಗೌಡ ಅವರು 2 ಎಕರೆ ಜಮೀನು ಹೊಂದಿದ್ದರು. ಇದರಲ್ಲಿ ಬೆಳೆ ಬೆಳೆಯಲು ರು. 2 ಲಕ್ಷ ಕೈ ಸಾಲ ಮಾಡಿ ಕೊಂಡಿದ್ದರು.
ಆದರೆ ಮಳೆ ಇಲ್ಲದೆ ಬೆಳೆದ ಬೆಳೆ ಒಣಗಲಾರಂ ಭಿಸಿತ್ತು. ಇದರಿಂದ ಮನನೊಂದ ಸಿದ್ದೇಗೌಡ ವಿಷ ಕುಡಿದಿದ್ದರು. ಬುಧವಾರ ಮೃತಪಟ್ಟಿದ್ದಾರೆ. ಇನ್ನು, ದುರಗಪ್ಪ 14 ಎಕರೆ ಜಮೀನಿನಲ್ಲಿ ಹತ್ತಿ, ಬತ್ತ, ಸೂರ್ಯಕಾಂತಿ ಬೆಳೆ ಬೆಳೆಯಲು ಹತ್ತು ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ಭೀತಿ ಹಿನ್ನೆಲೆಯಲ್ಲಿ ಅವರು ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ.