ಬೆಂಗಳೂರು: ರಾಜ್ಯದಲ್ಲಿ ಸಾಲಬಾಧೆ ಶುಕ್ರವಾರ ಮತ್ತೆ ಎಂಟು ರೈತರ ಪ್ರಾಣ ಕಸಿದುಕೊಂಡಿದೆ. ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿಯ ಹನಮಂತಪ್ಪ ನಾವಿ (55), ಹಿರೇಕೆರೂರು ತಾಲೂಕಿನ ಪರ್ವತಸಿದ್ದಿಗೇರಿಯ ರೈತ ರಮೇಶ ನಾಯಕ (60), ಹರಪನಹಳ್ಳಿ ತಾಲೂಕಿನ ಲೋಲೇಶ್ವರದ ಬೈರಾಪುರ ಬಸಪ್ಪ (65),ಇಂಡಿ ತಾಲೂಕಿನ ತಡವಲಗಾ ಗ್ರಾಮದ ಮಳಸಿದ್ದಪ್ಪ ಹತ್ತರಕಿ (58) ಮತ್ತು ಪಡಗಾನೂರ
ಗ್ರಾಮದ ಶಮ್ಮದ ಕರೀಮಸಾಬ ಶೇಖ್ (45), ಸಿಂಧನೂರು ತಾಲೂಕು ಜಾಲಿಹಾಳದ ಗುಡದಪ್ಪ ಶಿವಪ್ಪ (28), ರಾಯಭಾಗ ತಾಲೂಕು ರಾಮಪ್ಪ ಪುಂಡಲಿಕ ನಾಯಿಕ (32) ಬೈಲಹೊಲಂಗಲ ತಾಲೂಕಿನ ಲಿಂಗಪ್ಪ ಮಲ್ಲಪ್ಪ ಕಳ್ಯಾನಳ್ಳಿ (58) ಮೃತರು. ಹನುಮಂತಪ್ಪ ನಾವಿ ಗುರುವಾರ ರಾತ್ರಿಯೇ ವಿಷ ಕುಡಿದಿದ್ದಾರೆ. ರು.3 ಲಕ್ಷ ಸಾಲ ಹೊಂದಿದ್ದರು. ರಮೇಶ ನಾಯಕ ಅವರೂ ರು.3 ಲಕ್ಷ ಸಾಲ ಮಾಡಿಕೊಂಡಿದ್ದರು. ಬೈರಾಪುರ ಬಸಪ್ಪ ರು. 70
ಸಾವಿರ ಸಾಲ ಹೊಂದಿದ್ದರು. ಅವರು ವಿಷ ಕುಡಿದು ಪ್ರಾಣ ಬಿಟ್ಟಿದ್ದಾರೆ.