ಬೆಂಗಳೂರು: ರಾಜ್ಯದಲ್ಲಿ ಸಾಲಬಾಧೆಗೆ ಮತ್ತೆ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುನಗುಂದ ತಾಲೂಕಿನ ಕಮಲದಿನ್ನಿ ಗ್ರಾಮದ ಮನೋಹರ ಬಸಲಿಂಗಪ್ಪ ವಾಳದ(64), ಶ್ರೀರಂಗಪಟ್ಟಣ ತಾಲೂಕಿನ ಆಗನಹಳ್ಳಿಯ ನಾಗೇಶ್, ಭಾಲ್ಕಿ ತಾಲೂಕಿನ ಕೋಸಂ ಗ್ರಾಮದ ಕಂಟೆಪ್ಪ ಮಾರುತಿ ಮೇತ್ರೆ, ಔರಾದ್ ತಾಲೂಕಿನ ಉಜನಿ ಗ್ರಾಮದ ಭೀಮಾರೆಡ್ಡಿ ಕೃಷ್ಣಾ ರೆಡ್ಡಿ ಡೊಂಗಲೆ ಮೃತ ರೈತರು,
ಬಸಲಿಂಗಪ್ಪ ವಾಳದ 4 ಎಕರೆ ಭೂಮಿ ಅಡವಿಟ್ಟಿದ್ದರು. ರೂ. 50 ಸಾವಿರ ಸಾಲವಿದ್ದಿದ್ದರಿಂದ ನೇಣಿಗೆ ಶರಣಾಗಿದ್ದಾರೆ. ನಾಗೇಶ್ ಕೊಳವೆ ಬಾವಿಗಾಗಿ ರೂ.2.50 ಲಕ್ಷ ಸಾಲ ಮಾಡಿದ್ದರು. ಕಂಟೆಪ್ಪ ಮಾರುತಿ ಮೇತ್ರೆ ರೂ. 3ಲಕ್ಷ ಸಾಲಕ್ಕೆ ಹೆದರಿ ವಿಷ ಕುಡಿದಿದ್ದಾರೆ. ಭೀಮಾರೆಡ್ಡಿ ಕೃಷ್ಣಾ ರೆಡ್ಡಿ ರೂ. ಲಕ್ಷಕ್ಕೆ ಹೆದರಿ ಪ್ರಾಣ ಕಳೆದುಕೊಂಡಿದ್ದಾರೆ.