ಬಿಬಿಎಂಪಿ ಚುನಾವಣೆ ನಿಮಿತ್ತ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್. (ಫೋಟೋ ಕೃಪೆ: ಕೆಪಿಎನ್) 
ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ: 1,358 ಪ್ರಕರಣ ಆದರೂ ಶಾಂತ

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು ಚುನಾವಣೆ ಸಂಬಂಧ ಶುಕ್ರವಾರದಿಂದ 1,358 ಪ್ರಕರಣ ದಾಖಲಿಸಿ 234 ಮಂದಿಯನ್ನು ಮುಂಜಾಗೃತ ಕ್ರಮವಾಗಿ...

ಬೆಂಗಳೂರು: ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು ಚುನಾವಣೆ ಸಂಬಂಧ ಶುಕ್ರವಾರದಿಂದ 1,358 ಪ್ರಕರಣ ದಾಖಲಿಸಿ 234 ಮಂದಿಯನ್ನು ಮುಂಜಾಗೃತ ಕ್ರಮವಾಗಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಎಸ್. ಮೇಘರಿಖ್ ಹೇಳಿದರು.

ಸಿಆರ್‍ಪಿಸಿ ಕಾಯ್ದೆ ಅನ್ವಯ 1320 ಪ್ರಕರಣ ದಾಖಲಿಸಲಾಗಿದ್ದು ಐಪಿಸಿ ಕಲಂ ಅನ್ವಯ 24 ಪ್ರಕರಣಗಳು ದಾಖಲಾಗಿವೆ. ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ 12 ಹಾಗೂ ಗಂಭೀರವಲ್ಲದ 2 ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ರು.3,23,720 ನಗದು ವಶಪಡಿಸಿಕೊಳ್ಳಲಾಗಿದೆ. ಬಿಜೆಪಿ ವಿರುದ್ಧ 11, ಕಾಂಗ್ರೆಸ್ ವಿರುದ್ಧ 9, ಜೆಡಿಎಸ್ ವಿರುದ್ಧ 7 ಹಾಗೂ ಸ್ವಾತಂತ್ರ್ಯ ಅಭ್ಯರ್ಥಿಗಳ ವಿರುದಟಛಿ 9 ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಭದ್ರತೆಗಾಗಿ ನನ್ನ ಜೊತೆ ಹೆಚ್ಚುವರಿ ಆಯುಕ್ತರು ಸೇರಿ ನಗರದ ಅತಿ ಸೂಕ್ಷ್ಮ ಎಂದು ಗುರುತಿಸಲ್ಪಟ್ಟಿರುವ 57 ಪ್ರದೇಶಗಳಲ್ಲಿ ಸಿಬ್ಬಂದಿ ಜೊತೆ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಯಾವ ಪಕ್ಷದ ವಿರುದ್ಧ ಎಷ್ಟು ಕೇಸ್

  • ಬಿಜೆಪಿ 11
  • ಕಾಂಗ್ರೆಸ್ 09
  • ಜೆಡಿಎಸ್ 07
  • ಸ್ವತಂತ್ರ ಅಭ್ಯರ್ಥಿಗಳು 09
  • ಒಟ್ಟು ಪ್ರಕರಣ 1,358
  • ಮುಂಜಾಗ್ರತಾ ಬಂಧನ 234

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!