ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ನೂರಕ್ಕೆ ನಡೆದಿದೆ ಕಸರತ್ತು ಇಲ್ಲದಿದ್ದರೆ ಮಸಲತ್ತು

ಬಿಬಿಎಂಪಿಯ ಅಧಿಕಾರ ಗದ್ದುಗೆ ಹಿಡಿಯಬೇಕಾದರೆ ಕನಿಷ್ಟ ಎಷ್ಟು ಸೀಟುಗಳ ಗೆಲುವು ಬೇಕು? ಶತಕಗಳಿಸಿದರೆ ಸಾಕು, ಅದು ಸರಳ ಬಹುಮತ ಎಂಬ ಲೆಕ್ಕಾಚಾರವಿದೆ. ಆದರೆ, ಅದಷ್ಟೇ ಸಾಕಾಗುವುದಿಲ್ಲ ತೀರಾ ಸಂದಿಗ್ಧ ಸಂಖ್ಯಾಟವೇ ನಡೆದರೆ ಸಂಸದರು, ಶಾಸಕರು `ಕೈ' ಮೇಲೆತ್ತುವುದೇ...

ಬೆಂಗಳೂರು: ಬಿಬಿಎಂಪಿಯ ಅಧಿಕಾರ ಗದ್ದುಗೆ ಹಿಡಿಯಬೇಕಾದರೆ ಕನಿಷ್ಟ ಎಷ್ಟು ಸೀಟುಗಳ ಗೆಲುವು ಬೇಕು? ಶತಕಗಳಿಸಿದರೆ ಸಾಕು, ಅದು ಸರಳ ಬಹುಮತ ಎಂಬ ಲೆಕ್ಕಾಚಾರವಿದೆ. ಆದರೆ, ಅದಷ್ಟೇ ಸಾಕಾಗುವುದಿಲ್ಲ ತೀರಾ ಸಂದಿಗ್ಧ ಸಂಖ್ಯಾಟವೇ ನಡೆದರೆ ಸಂಸದರು, ಶಾಸಕರು `ಕೈ' ಮೇಲೆತ್ತುವುದೇ ಪ್ರಾಮುಖ್ಯ ಪಡೆಯುತ್ತದೆ. ಹೀಗಾಗಿ 100ರ ಸರಳ ಬಹುಮತಕ್ಕೆ ಯಾವಾಗ ಬೇಕಾದರೂ ಕುತ್ತು ಬರಬಹುದು. ಇನ್ನು 10 ಸೀಟು ಹೆಚ್ಚಾ ದರಷ್ಟೇ ನಿರಾಳ.

ಬಿಬಿಎಂಪಿಯ 198 ವಾರ್ಡ್‍ಗಳಲ್ಲಿ 100 ಕಡೆ ಗೆದ್ದರೆ ಬಹುಮತ. ಆ ಪಕ್ಷದವರೇ ಮೇಯರ್ ಉಪಮೇಯರ್ ಆಗಬಹುದು. ಆದರೆ, 100 ಕಾರ್ಪೊರೇಟರ್ ಗಳಿದ್ದರೆ ಉಳಿದವರು ಒಟ್ಟಾಗಿ ಸೇರಿಕೊಂಡರೆ ಎಲ್ಲವೂ ತಲೆಕೆಳಗು ಆಗುತ್ತದೆ. ಏಕೆಂದರೆ, ಅಧಿಕಾರ ಹಿಡಿಯುವ ಸಂದರ್ಭಕ್ಕೆ ಬೇಕಾಗುವ ಬಹುಮತದ ಸಾಬೀತಿನಲ್ಲಿ ನಗರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳ ಓಟಿಗೂ ಇಲ್ಲಿ ಕಿಮ್ಮತ್ತಿದೆ. ಜನಪ್ರತಿನಿಧಿಗಳಿಗೂ ಮತ ಹಕ್ಕು: ಬಿಬಿಎಂಪಿ ವ್ಯಾಪ್ತಿಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯಸಭೆಗೆ ಆಯ್ಕೆಯಾದವರೂ ಇಲ್ಲಿ ಆಡಳಿತದ ಚುಕ್ಕಾಣಿ ಅಥವಾ ಮೇಯರ್ ಉಪ ಮೇಯರ್ ಆಯ್ಕೆಯಲ್ಲಿ ತಮ್ಮ ಮತ ಚಲಾಯಿಸಬಹುದು.

100 ಕಾರ್ಪೊರೇಟರ್‍ಗಳಿದ್ದಾಗ ಇತರರೆಲ್ಲ ಒಂದಾದರೆ ಆಗ ಇವೆಲ್ಲ ಲೆಕ್ಕಾಚಾರ ಶುರುವಾ ಗುತ್ತದೆ. ಯಾವ ಪಕ್ಷದ ಶಾಸಕರು, ಸಂಸದರಿದ್ದಾರೆ ಎಂದು ಎಣಿಸಿಕೊಳ್ಳಬೇಕಾಗುತ್ತದೆ. ಅವರೆಲ್ಲ ಸೇರಿಕೊಂಡರೆ `ಮತಗಣತಿ' ಲೆಕ್ಕಾಚಾರಕ್ಕೆ ಪುರಭವನ ಸಾಕ್ಷಿಯಾಗಬೇಕಾಗುತ್ತದೆ. ಉದಾಹರಣೆಗೆ ಕಾಂಗ್ರೆಸ್‍ಗೆ 100 ಸ್ಥಾನಗಳು ಬಂದರೆ ಕಾಂಗ್ರೆಸ್ ಮೇಯರ್ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಉಳಿದ 98 ಕಾರ್ಪೊರೇಟರ್‍ಗಳು ಒಂದಾದರೆ ಲೆಕ್ಕಾಚಾರ ಬದಲಾಗುತ್ತದೆ. ಶಾಸಕರು-ಸಂಸದರನ್ನೆಲ್ಲ ಲೆಕ್ಕಾಚಾರ ಹಾಕಿದರೆ ಕಾಂಗ್ರೆಸ್‍ಗೆ 28 ಮತಗಳು ಲಭ್ಯ. ಇನ್ನು ಬಿಜೆಪಿ, ಜೆಡಿಎಸ್ ಶಾಸಕರ ಹಾಗೂ ಪಕ್ಷೇತರ ಸಂಸದರೂ ಸೇರಿದರೆ ಆ ಸಂಖ್ಯೆ 31 ಆಗುತ್ತದೆ. ಅಂದರೆ, 128/129 ಲೆಕ್ಕಾಚಾರವಾಗುತ್ತದೆ. ಆಗ ಕಾಂಗ್ರೆಸ್ ಪ್ರತಿಪಕ್ಷದಲ್ಲಿ ಕೂರಬೇಕಾಗುತ್ತದೆ.

ಇದರಲ್ಲಿ ಒಂದೆರಡು ಮತಗಳು ತಲೆಕೆಳಗಾದರೂ ಯಾವುದಾವುದೋ ಲೆಕ್ಕಾಚಾರವಾಗುತ್ತದೆ. ಹೀಗಾಗಿ 105ಕ್ಕಿಂತ ಇನ್ನಷ್ಟು ಹೆಚ್ಚು ವಾರ್ಡ್‍ಗಳನ್ನು ಒಂದು ಪಕ್ಷ ಅಥವಾ ಅದರ ಬೆಂಬಲಿತ ಪಕ್ಷ ಸೇರಿಕೊಂಡು ಗಳಿಸಿಕೊಂಡರೆ ಬಿಬಿಎಂಪಿ ಆಡಳಿತ ಚುಕ್ಕಾಣಿ ಹಿಡಿಯುವುದು ಸುಲಭ. ಈವರೆಗೆ ಸಂಸದರು ಹಾಗೂ ಶಾಸಕರು ಕಾರ್ಪೊರೇಷನ್ ಆಡಳಿತಕ್ಕಾಗಿ ಮತ ಹಾಕಿರುವ ಉದಾಹರಣೆಗಳೇ ಇಲ್ಲ. ಸ್ಪಷ್ಟಬಹುಮತ ಅಥವಾ ಎರಡು ಪಕ್ಷಗಳ ಮೈತ್ರಿಯಲ್ಲಿಯೇ ಆಡಳಿತ ನಡೆದಿತ್ತು. ಹೀಗಾಗಿ, ಶತಕ ದಾಟಲು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಕಸರತ್ತು ತೀವ್ರಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!