ಸರಗಳ್ಳತನ: ಪಲ್ಸರ್ ಬೈಕ್ ಮತ್ತೆ ಕೈಚಳಕ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಸರಗಳ್ಳತನ: ಪಲ್ಸರ್ ಬೈಕ್ ಮತ್ತೆ ಕೈಚಳಕ

ನಗರದಲ್ಲಿ ಸರಗಳ್ಳತನ ಮುಂದುವರೆದಿದ್ದು, ಸೋಮವಾರ ವಿವಿಧ ಮೂರು ಬಡಾವಣೆಗಳಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೂರು ಕಡೆಯೂ ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬೆಳಗ್ಗೆಯೇ ದಾಳಿ ಮಾಡಿದ್ದಾರೆ...

ಬೆಂಗಳೂರು: ನಗರದಲ್ಲಿ ಸರಗಳ್ಳತನ ಮುಂದುವರೆದಿದ್ದು, ಸೋಮವಾರ ವಿವಿಧ ಮೂರು ಬಡಾವಣೆಗಳಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೂರು ಕಡೆಯೂ ಕಪ್ಪು
ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬೆಳಗ್ಗೆಯೇ ದಾಳಿ ಮಾಡಿದ್ದಾರೆ.

ಘಟನೆ 1: ಹಾಲು ತರಲು ಹೋಗುತ್ತಿದ್ದ ಮಹಿಳೆಯ 90 ಗ್ರಾಂ ಸರ ದೋಚಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಬೆಳಗ್ಗೆ ಸುಮಾರು 6.50ರಲ್ಲಿ ನಡೆದಿದೆ. ಕೆಂಪಾಪುರದ ಸಿಂಧಿ ಕಾಲೇಜು ಬಳಿ ಘಟನೆ ನಡೆದಿದ್ದು, ರೂಪಾ (45) ಸರ ಕಳೆದುಕೊಂಡವರು. ಅವರ ಪತಿ ಪ್ರಭಾಕರ್ ದೂರು ನೀಡಿದ್ದಾರೆ.

ಘಟನೆ 2: ವಾಯುವಿಹಾರದಲ್ಲಿದ್ದ ಮಹಿಳೆ ಸರ ದೋಚಿರುವ ಘಟನೆ ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ನಡೆದಿದೆ. ಶಶಿಕಲಾ (65)ಸರ ಕಳೆದುಕೊಂಡವರು. ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶಶಿಕಲಾ ಅವರ 30 ಗ್ರಾಂ. ಚಿನ್ನದ ಸರ ಕಸಿದಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ 3: ಮಗಳ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಕಳ್ಳರು ಅವರ ಸರ ಕಸಿದು ಪರಾರಿಯಾಗಿದ್ದಾರೆ. ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ನಡೆದಿದೆ. ಬಿಇಎಲ್ 1ನೇ ಬ್ಲಾಕ್ ನಿವಾಸಿ ಭದ್ರಕಾಳಮ್ಮ (75) ಅವರು ಮನೆ ಸಮೀಪದ ನಂಜಪ್ಪಲೇಔಟ್ ನಲ್ಲಿರುವ ಮಗಳ ಮನೆಗೆ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಇಬ್ಬರು ಅವರ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ದೋಚಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರಿಗೆ ಬೆಂಕಿ ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಜ್ಞಾನಭಾರತಿ 2ನೇ ಹಂತದ ನಿವಾಸಿ ಡಿಎಸ್‍ಎಸ್ ಮುಖಂಡ ಟಿ. ಮೂರ್ತಿ ಅವರಿಗೆ ಸೇರಿದ ಕಾರನ್ನು ಹೊರಗೆ ನಿಲ್ಲಿಸಲಾಗಿತ್ತು. ದುಷ್ಕರ್ಮಿಗಳು ತಡರಾತ್ರಿ 1.30ರ ವೇಳೆ ಪೆಟ್ರೋಲ್
ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟ ವಾಸನೆ ಬಂದ ಕಾರಣ ಮೂರ್ತಿ ಅವರು ಅನುಮಾನದಿಂದ ಹೊರಗೆ ಬಂದಾಗ ಕಾರಿಗೆ ಬೆಂಕಿ ಬಿದ್ದಿತ್ತು. ತಕ್ಷಣ ಸ್ಥಳೀಯರ ನೆರವಿನಿಂದ ಬೆಂಕಿ
ನಂದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!