ಪೊಲೀಸ್ ಐಟಿಗೆ ಪ್ರಧಾನಿ ಖುಷ್
ಸ್ಮಾರ್ಟ್ ಪೊಲೀಸಿಂಗ್, ಪೊಲೀಸ್ ಐಟಿ, ಸಿಸಿಟಿಎನ್ ಎಸ್ ಬಳಕೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಇಲಾಖೆಗೆ...
ಬೆಂಗಳೂರು: ಸ್ಮಾರ್ಟ್ ಪೊಲೀಸಿಂಗ್, ಪೊಲೀಸ್ ಐಟಿ, ಸಿಸಿಟಿಎನ್ ಎಸ್ ಬಳಕೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಇಲಾಖೆಗೆ ಮತ್ತೊಂದು ಗರಿಮೆ ಸಿಕ್ಕಿದ್ದು, ತಂತ್ರಜ್ಞಾನ ಬಳಕೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣ ಅವರೊಂದಿಗೆ ವಿಡಿಯೋ ಕಾರೆನ್ಸ್ ಮೂಲಕ ಮಾಹಿತಿ ಪಡೆದರು.
ಪ್ರಧಾನಿಯೊಬ್ಬರು ಠಾಣೆ ಇನ್ಸ್‍ಪೆಕ್ಟರ್‍ವೊಬ್ಬರಿಂದ ವಿವರಣೆ ಪಡೆದಿದ್ದು ದೇಶದ ಇತಿಹಾಸದಲ್ಲೇ ಇದೇ ಮೊದಲು. ಬುಧವಾರ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ದೇಶದ ವಿವಿಧ ರಾಜ್ಯಗಳು `ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‍ವರ್ಕ್ ಆ್ಯಂಡ್ ಸಿಸ್ಟಮ್ಸ್' (ಸಿಸಿಟಿಎನ್ಎಸ್) ಸೇರಿದಂತೆ ಪೊಲೀಸ್ ಇಲಾಖೆ ಬಳಸಿಕೊಳ್ಳುತ್ತಿರುವ ತಾಂತ್ರಿಕ ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿದರು.
ಎಫ್ಐಆರ್ ಹೇಗೆ ದಾಖಲಿಸಿಕೊಳ್ಳುತ್ತೀರಾ? ಎಫ್ಐಆರ್ ಕಾಪಿಯನ್ನು ಕೋರ್ಟ್‍ಗೆ ಹೋಗಿಯೇ ನೀಡುತ್ತೀರಾ? ಅಪರಾಧಗಳ ಬೆರಳಚ್ಚು ಗುರುತುಗಳ ಪತ್ತೆಯನ್ನು ಡಿಜಿಟಲೈಸ್ ಮಾಡಿದ್ದೀರಾ? ತಂತ್ರಜ್ಞಾನ ಬಳಕೆಯಿಂದ ಪೊಲೀಸ್ ಕೆಲಸ ಎಷ್ಟು ಸುಲಭವಾಗುತ್ತಿದೆ? ಹಾಗೂ ಅಂತಿಮವಾಗಿ ಹಾಗೂ ಮುಖ್ಯವಾಗಿ ಸಾರ್ವಜನಿಕರಿಗೆ ಆಗುತ್ತಿರುವ ಅನುಕೂಲಗಳು ಏನು ಎನ್ನುವುದರ ಪ್ರಶ್ನೆಗಳನ್ನು ಕೇಳಿದರು.
ಈ ವೇಳೆ ಪ್ರಧಾನಿಗೆ 5 ನಿಮಿಷ ಮಾಹಿತಿ ನೀಡಿದ ಇನ್ಸ್‍ಪೆಕ್ಟರ್ ಬಾಲಕೃಷ್ಣ, ಸಿಸಿಟಿ-ಎನ್-ಎಸ್ ಯೋಜನೆ ಅಡಿಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆ ಅಭಿವೃದ್ಧಿ ಪಡಿಸಿರುವ `ಪೊಲೀಸ್ ಐಟಿ' ಬಗ್ಗೆ ವಿವರಿಸಿದರು.ವ್ಯಕ್ತಿಯೊಬ್ಬನ ವಿರುದ್ಧ ದಾಖಲಾದ ಅಪರಾಧದ ವಿವರ ಪೊಲೀಸ್ ಐಟಿಗೆ ಅಪ್‍ಲೋಡ್ ಆಗುತ್ತದೆ. ಆ ವ್ಯಕ್ತಿ ವಿರುದ್ಧ ರಾಜ್ಯದ ಬೇರೆ ಕಡೆ ಪ್ರಕರಣ ದಾಖಲಾದರೆ ಆತನ ಹಿನ್ನೆಲೆ ತಿಳಿದುಕೊಳ್ಳಲು, ಹೆಸರು, ವಯಸ್ಸು, ವಿಳಾಸ ಮುಂತಾದ ಮಾಹಿತಿಯನ್ನು ಪೊಲೀಸ್ ಐಟಿಗೆ ಅಪ್‍ಲೋಡ್ ಮಾಡಿದರೆ ಈ ಹಿಂದೆ ದಾಖಲಾದ ಪ್ರಕರಣದ ವಿವರವೂ ಸಿಗುತ್ತದೆ. ಪೊಲೀಸ್ ಐಟಿಯನ್ನು 2011ರಲ್ಲಿ ಸಿಸಿಟಿಎನ್‍ಎಸ್ ಜತೆ ವಿಲೀನಗೊಳಿಸಲಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಅಪರಾಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಕ್ಕ ಆರೋಪಿಯ ವಿವರವನ್ನು ಒದಗಿಸಿದರೆ ಆತನ ವಿರುದ್ಧ ದೇಶದ ಯಾವುದೇ ಮೂಲೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಆ ವಿವರವೂ ಲಭ್ಯವಾಗುತ್ತದೆ.
ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿನ ನೆಟ್‍ವರ್ಕ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ದೇಶದಲ್ಲಿ ಕರ್ನಾಟಕ ಸ್ಮಾರ್ಟ್ ಪೊಲೀಸಿಂಗ್ ವ್ಯವಸ್ಥೆಯಲ್ಲಿ ನಂಬರ್ 1 ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆಯಿಂದ ಸಿಸಿಟಿಎನ್‍ಎಸ್ ಹಾಗೂ ತಂತ್ರಜ್ಞಾನ ಬಳಕೆ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ, ಡಿಸಿಪಿ ಸಂದೀಪ್ ಪಾಟೀಲ್, ಎಸಿಪಿ ಶೋಭಾರಾಣಿ, ಇಬ್ಬರು ಎಸ್ಸೈಗಳು ಇಬ್ಬರು ಕಾನ್ಸ್‍ಟೇಬಲ್‍ಗಳು ಹಾಗೂ ರಾಜ್ಯ ಅಪರಾಧ ದಾಖಲಾತಿ ಘಟಕದ ಇಬ್ಬರು ಸಿಬ್ಬಂದಿ ಕೂಡ ಹಾಜರಿದ್ದರು.

- ಕೌಶಿಕ್ ಮುಖರ್ಜಿ ಮುಖ್ಯ ಕಾರ್ಯದರ್ಶಿ