ಎರಡು ಕಡೆ ಲೈಂಗಿಕ ದೌರ್ಜನ್ಯ, ಒಬ್ಬನ ಬಂಧನ
ಏಳು ವರ್ಷದ ಬಾಲಕಿಗೆ ನೆರೆಮನೆಯ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಂದಿನಿ ಲೇಔಟ್‍ನಲ್ಲಿ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ...
ಬೆಂಗಳೂರು: ಏಳು ವರ್ಷದ ಬಾಲಕಿಗೆ ನೆರೆಮನೆಯ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಂದಿನಿ ಲೇಔಟ್‍ನಲ್ಲಿ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ. ಬಾಲಕಿ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ನಂದಿನಿ ಲೇಔಟ್ ನಿವಾಸಿ ಆರೋಪಿ ರಾಮು(60) ಎಂಬಾತನನ್ನು ಗುರುವಾರ ಬಂಧಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ಬಾಲಕಿ ಹಾಗೂ ಆರೋಪಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆಗಸ್ಟ್ 21ರಂದು ಬಾಲಕಿ ಮನೆಯಲ್ಲಿ ಒಂಟಿಯಾಗಿ ದ್ದಾಗ ಮನೆಯೊಳಗೆ ನುಗ್ಗಿದ ಆರೋಪಿ ರಾಮು, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ವನ್ನು ಯಾರಿಗೂ ಹೇಳಬೇಡ ಎಂದು ಹೆದ ರಿಸಿದ್ದ. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮತ್ತೊಂದು ಪ್ರಕರಣ: ಕೆ.ಆರ್ ಪುರದಲ್ಲಿ 8 ವರ್ಷದ ಬಾಲಕಿಗೆ ಚಾಕಲೇಟ್ ಕೊಡಿಸುವ ನೆಪದಲ್ಲಿ ದುಷ್ಕರ್ಮಿ ವೆಂಕಟರಮಣ (30) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಬಾಲಕಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಆಕೆಯ ತಂದೆ-ತಾಯಿ ಗಾರ್ಮೆಂಟ್ಸ್ ನೌಕರರು. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಆಮಿಷ ಒಡ್ಡಿ ಉದ್ಯಾನದೊಳಗೆ ಕರೆದೊಯ್ದು ವಿವಸuಉಗೊಳಿಸಿದ್ದ. ಈ ವೇಳೆ ಬಾಲಕಿ ಕಿರುಚಾಡಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೆ.ಆರ್. ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.