ಬೆಂಗಳೂರು: ಬಿಬಿಎಂಪಿ ಹೈಡ್ರಾಮ ಒಂದು ಕಡೆ ಕೇರಳದತ್ತ ಹೊರಳಿರುವಾಗಲೇ ಇನ್ನೊಂದು ಮಜಲಿನಲ್ಲಿ ದೆಹಲಿಯವರೆಗೂ ವ್ಯಾಪಿಸಿದೆ. ಕಾಂಗ್ರೆಸ್‍ನ್ನು ಹೇಗಾದರೂ ಅಧಿಕಾರದಿಂದ ದೂರಇಡಲೇಬೇಕೆಂದು ಹಠತೊಟ್ಟಿರುವ ಬಿಜೆಪಿಯು ಜೆಡಿಎಸ್‍ನ ಒಲಿಸಿಕೊಳ್ಳಲು ಗಂಭೀರ ಪ್ರಯತ್ನ ನಡೆಸಿದೆ. ಶನಿವಾರ ಮಧ್ಯಾಹ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಕಾಂಗ್ರೆಸ್ ನ್ನು ಹೇಗಾದರೂ ಅಧಿಕಾರದಿಂದ ದೂರ ಇಡಲೇ ಬೇಕೆಂದು ಹಠಕೊಟ್ಟಿರುವ ಬಿಜೆಪಿಯು ಜೆಡಿಎಸ್ ನ ಒಲಿಸಿಕೊಳ್ಳಲು ಗಂಭೀರ ಪ್ರಯತ್ನ ನಡೆಸಿದೆ. ಶನಿವಾರ ಮಧ್ಯಾಹ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ನಮ್ಮ ಪಕ್ಷಕ್ಕೆ ಅತಿ ಹೆಚ್ಚಿನ ಸ್ಥಾನ ಬಂದಿದೆ. ಇಂತಹ ಸಂದರ್ಭದಲ್ಲಿ ಮೇಯರ್ ಗಿರಿಯಿಂದ ದೂರ ಉಳಿಸುವುದು ಸರಿಯಾಗಲಿಕ್ಕಿಲ್ಲ ಎಂದಿದ್ದಾರೆ. ದೇವೇಗೌಡರು ಮಾತ್ರ ಈವರೆಗೆ ಯಾವುದೇ ತೀರ್ಮಾನ ಮಾಡಿಲ್ಲ, ಎಲ್ಲರೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಸೆ.2 ರಂದು ಅಂತಿಮ ತೀರ್ಮಾನ ತಿಳಿಸುತ್ತೇವೆ ಎಂದು ರಾಜನಾಥ್ ಸಿಂಗ್ ಅವರಿಗೆ ಅಭಿಪ್ರಾಯ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಶನಿವಾರ ಬೆಳಿಗ್ಗೆಯಷ್ಟೇ ಕೇಂದ್ರ ಸಚಿವ ಸದಾನಂದ ಗೌಡ ಅವರು ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿದ್ದರು. ಇದಾದ ನಂತರದ ಬೆಳವಣಿಗೆಯಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ್ದ ಬಿಜೆಪಿ ಮುಖಂಡರು ರಾಜನಾಥ್ ಸಿಂಗ್ ಅವರಿಗೆ ವಿಷಯ ಮುಟ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ದೇವೇಗೌಡರಿಗೆ ಕರೆ ಮಾಡಿ ಮಾತನಾಡಿ ದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರಮೋದಿಯವರೇ ಈ ವಿಚಾರವಾಗಿ ದೇವೇಗೌಡರಿಗೆ ಕರೆ ಮಾಡಿ ಮಾತನಾಡುತ್ತಾರೆಂಬ ಉಹಾಪೂಹ ಖಚಿತವಾಗಿಲ್ಲ.