ಎಚ್. ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಭ್ರಷ್ಟಾಚಾರ ನಿರ್ಮೂಲಕರಿಗೆ ಬೆಂಬಲ: ಎಚ್. ಡಿ. ಕುಮಾರಸ್ವಾಮಿ

ಬಿಬಿಎಂಪಿಯಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಗ್ಯಾರಂಟಿ ನೀಡುವವರಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ...

ಚಿಕ್ಕಮಗಳೂರು: ಬಿಬಿಎಂಪಿಯಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಗ್ಯಾರಂಟಿ ನೀಡುವವರಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ವಿಲೇವಾರಿ ಹಾಗೂ ಕಾಮಗಾರಿಯಲ್ಲಿ ಕೋಟ್ಯಂತರ ರುಪಾಯಿ ಲೂಟಿ ಹೊಡೆದಿದ್ದಾರೆ. ರಾಜ್ಯದ
ಮತ್ತು ಬೆಂಗಳೂರು ಜನತೆ ನೀಡಿರುವ ಕಂದಾಯ ಸೋರಿಕೆಯಾಗಿದೆ. ಇದನ್ನು ತಡೆಗಟ್ಟಬೇಕಾದ ಅವಶ್ಯಕತೆ ಇದೆ. ಈ ಲೋಪ ಸರಿಪಡಿಸಲು ಮುಚ್ಚಳಿಕೆ ಕೊಡುವವರಿಗೆ, ಇದರ ಬಗ್ಗೆ ಗ್ಯಾರಂಟಿ ಕೊಟ್ಟರೆ, ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬರಲು ಎರಡು ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ನೀಡುವ ವಿಚಾರದಲ್ಲಿ ನನ್ನದಾಗಲಿ ಅಥವಾ ದೇವೇಗೌಡರದ್ದಾಗಲಿ ವೈಯಕ್ತಿಕ ತೀರ್ಮಾನಗಳಿಲ್ಲ. ಬಿಬಿಎಂಪಿಯ ನಮ್ಮ ಪಕ್ಷದ 14 ಸದಸ್ಯರು, ಜೆಡಿಎಸ್ ಶಾಸಕರು ಹಾಗೂ ನಮ್ಮ ಪಕ್ಷದ ಹಿರಿಯರು, ಪ್ರಮುಖರೊಂದಿಗೆ ಚರ್ಚಿಸಲಾಗುವುದು ಎಂದರು. ಶುಕ್ರವಾರ ಪಕ್ಷದ ಬಿಬಿಎಂಪಿ ಸದಸ್ಯರ ಸಭೆಯನ್ನು ನಡೆಸಿ, ಒಟ್ಟಾಗಿ ಇರಿ ಎಂದು ಹೇಳಿದ್ದೇನೆ. ಬೇರೆಯವರೊಂದಿಗೆ ಹೋಗಿ ಬಲಿಪಶು ಆಗುವುದು ಬೇಡ ಎಂದು ತಿಳಿಸಿದ್ದೇನೆ.

ಕುಟುಂಬದವರೊಂದಿಗೆ ವಿಶ್ರಾಂತಿಗಾಗಿ ಇಲ್ಲಿಗೆ ಬಂದಿದ್ದೇನೆ. ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿ ಇಟ್ಟಿದ್ದೇನೆ. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಪಕ್ಷದ ಪಾತ್ರವಿಲ್ಲ. ಈ ವಿಚಾರದಲ್ಲಿ ನಮ್ಮ ಪಕ್ಷವನ್ನು ದೂಷಿಸಬೇಡಿ ಎಂದು ಈ ರಾಜ್ಯದ ಹಾಗೂ ಬೆಂಗಳೂರಿನ ಜನರಿಗೆ ಮನವಿ ಮಾಡುತ್ತೇನೆ ಎಂದರು. ಬಿಬಿಎಂಪಿ ಆಡಳಿತ ಬಗ್ಗೆ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿವೆ. ಅವುಗಳನ್ನು ಗಮನಿಸಿದ್ದೇನೆ. ಈ ವಿಷಯಕ್ಕೆ
ಸಂಬಂಧಿಸಿದಂತೆ ಜೆಡಿಎಸ್ ಕುರಿತು ಅನೈತಿಕ, ಅಪವಿತ್ರ, ಅವಕಾಶವಾದಿ ರಾಜಕಾರಣ ಎಂಬ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಇವತ್ತಿನವರೆಗೆ ನಮ್ಮ ಪಕ್ಷ ಈ ವಿಷಯದಲ್ಲಿ ತಟಸ್ಥವಾಗಿದೆ. ನಾವು ಯಾರ ಮನೆ ಬಾಗಿ-ಲಿಗೂ ಹೋಗಿಲ್ಲ.

ಈಗ ಕಾಂಗ್ರೆಸ್ ಬೆಳವಣಿಗೆ, ಬಿಜೆಪಿಯ ಹೊಸ ಬೆಳವಣಿಗೆ ಗಮನಿಸಿದ್ದೇನೆ. ಆ ಪಕ್ಷಗಳ ಅವಕಾಶವಾದಿ ರಾಜಕಾರಣದ ದೋಷ ಜೆಡಿಎಸ್‍ಗೆ ಕೊಡಬೇಡಿ ಎಂದು ವಿಶ್ಲೇಷಕರಿಗೆ
ಮನವಿ ಮಾಡುತ್ತೇನೆ ಎಂದರು. ಚುನಾವಣೆಗೆ ಮೊದಲು ಬಿಜೆಪಿಯವರು ಮಧ್ಯವರ್ತಿಗಳ ಮೂಲಕ ಸಂಪರ್ಕಿಸಿದ್ದರು. ಆ ಪಕ್ಷಕ್ಕೆ 100 ಸ್ಥಾನ ಬರುತ್ತಿದ್ದಂತೆ ನಮ್ಮನ್ನು ಭೇಟಿ ಮಾಡಲು ಅವರಾಗಲಿ, ಅವರ ಮಧ್ಯವರ್ತಿಗಳಾಗಲೀ ಬರಲೇ ಇಲ್ಲ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿಗಳು ನಮ್ಮ ಹಿತೈಷಿಗಳಲ್ಲ. ಈ ಎರಡೂ ಪಕ್ಷಗಳು ನಮ್ಮನ್ನು ದುರುಪಯೋಗಪಡಿಸಿಕೊಂಡಿವೆ. ನಮ್ಮನ್ನು ಫುಟ್‍ಬಾಲ್ ನಂತೆ ನೋಡಿಕೊಂಡಿದ್ದಾರೆ ಎಂದರು.

ಕಾಂಗ್ರೆಸ್‍ನ ರಾಜ್ಯದ ನಾಯಕರು, ದೆಹಲಿ ನಾಯಕರ ಸೂಚನೆಯಂತೆ ನಡೆದುಕೊಳ್ಳುತ್ತಾರೆ. ಕಾಂಗ್ರೆಸ್‍ನೊಳಗೆ ವಲಸಿಗರು ಮತ್ತು ಮೂಲ ಕಾಂಗ್ರೆಸ್ಸಿಗರು ಎಂಬ ಎರಡು ಗುಂಪುಗಳಿವೆ. ಆ ಎರಡು ಗುಂಪಿನವರ ಭಾವನೆ ಏನಿದೆ ಎಂದು ಗೊತ್ತಿಲ್ಲ, ಅವರಲ್ಲಿ ಭಿನ್ನಾಭಿಪ್ರಾಯ ಬಂದು, ರಾಜಕೀಯವನ್ನು ಅಸ್ಥಿರ ಮಾಡಲು ನಮ್ಮ ಪಾತ್ರ ಬರಬಾರದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video