ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಘಟಕಕ್ಕೆ ನಡೆಯುವ ಚುನಾವಣೆ ದಿನದಿನಕ್ಕೆ ರಂಗೇರುತ್ತಿದ್ದು ಹಾಸನ ಕಸಾಪ ಅಧ್ಯಕ್ಷ ಡಾ. ಜನಾರ್ದನ್ ಬಣದ ಸಭೆ ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಗುಪ್ತವಾಗಿ ನಡೆದ ಈ ಸಭೆಯಲ್ಲಿ ಬೆಂಗಳೂರು ನಗರ ಕಸಾಪ ಅಧ್ಯಕ್ಷ ಟಿ. ತಿಮ್ಮೇಶ್, ಚಿಕ್ಕಬಳ್ಳಾಪುರ ಅಧ್ಯಕ್ಷ ಹನುಮಂತರಾಯಪ್ಪ, ಕೊಡಗು ಅಧ್ಯಕ್ಷ ರಮೇಶ್ ಟಿ.ಪಿ., ಸಿ.ಕೆ. ಮೂರ್ತಿ, ಕಾರವಾರ ಅಧ್ಯಕ್ಷ ರೋಹಿ ತಾ ಸೇರಿದಂತೆ ಇನ್ನೂ ಮೂರು ನಾಲ್ಕು ಜಿಲ್ಲಾಧ್ಯಕ್ಷರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಸಭೆಯ ಲ್ಲಿ ಭಾಗವಹಿಸಿ ಬೆಂಬಲ ನೀಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.