ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಅಪ್ರಾಪ್ತೆ ಮೇಲೆ ಅತ್ಯಾಚಾರ

ಅಪ್ರಾಪ್ತೆಯೊಂದಿಗೆ ಪರಾರಿಯಾಗಿದ್ದಲ್ಲದೆ,ಆಕೆಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಿರುವ ಕಾಡುಗೋಡಿ...

ಬೆಂಗಳೂರು: ಅಪ್ರಾಪ್ತೆಯೊಂದಿಗೆ ಪರಾರಿಯಾಗಿದ್ದಲ್ಲದೆ, ಆಕೆಯನ್ನು ಅತ್ಯಾಚಾರ ಮಾಡಿದ  ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಿರುವ  ಕಾಡುಗೋಡಿ ಪೊಲೀಸರು,     ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಯಚೂರು ಮೂಲದ ಮುತ್ತುರಾಜ್  (22) ಬಂಧಿತ. ಕಾಡುಗೋಡಿಯಲ್ಲಿ ವಾಸವಿದ್ದ ಈತ  ಡಿ.2ರಂದು ಪಕ್ಕದ ಮನೆಯ ಸುಮಾರು 17 ವರ್ಷದ ಬಾಲಕಿಯನ್ನು ಪುಸಲಾಯಿಸಿ  ಮೈಸೂರಿಗೆ ಕರೆದುಕೊಂಡು ಹೋಗಿದ್ದ. ಮನೆಯಲ್ಲಿ ಬಾಲಕಿ ಇಲ್ಲದ್ದನ್ನು ಕಂಡ ಪೋಷಕರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಶೋಭ ಹ್ಯಾಬಿಟೆಕ್ ಎಂಬ ಲೇಬರ್ ಕಾಂಟ್ರಾಕ್ಟಿಂಗ್ ಕಂಪನಿಯಲ್ಲಿ ಲೇಬರ್ ಕಾಂಟ್ರಾಕ್ಟರ್  ಆಗಿ  ಕೆಲಸ ಮಾಡುತ್ತಿದ್ದ ಆರೋಪಿ ಮುತ್ತುರಾಜ್ ಬಾಲಕಿಯ ಅಣ್ಣನೊಂದಿಗೆ ಸ್ನೇಹ  ಬೆಳೆಸಿಕೊಂಡು ಮನೆಯ ಇತರೆ ಸದಸ್ಯರಿಗೆ ಪರಿಚಿತನಾಗಿದ್ದ. ಪರಿಚಯದ ಮೇಲೆ ಆಗಾಗ ಮನೆಗೆ ಹೋಗುತ್ತಿದ್ದ. ಈ ವೇಳೆ ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿ ಡಿ.2ರಂದು  ಯಾರಿಗೂ  ಗೊತ್ತಾಗದಂತೆ ಮನೆಯಿಂದ ಕರೆದುಕೊಂಡು ಮೈಸೂರಿಗೆ ತೆರಳಿದ್ದ.

ಲಾಡ್ಜ್ ನಲ್ಲಿ ಅತ್ಯಾಚಾರ: ಅಂದು ಮೈಸೂರು ನಗರ ಬಸ್ ನಿಲ್ದಾಣದ ಸಮೀಪದ ಲಾಡ್ಜ್ ನಲ್ಲಿ   ರೂಂ ಪಡೆದು ತಂಗಿದ್ದು, ರಾತ್ರಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದರಿಂದ  ಬಾಲಕಿಗೆ ರಕ್ತಸ್ರಾವ ಆರಂಭವಾಗಿದೆ. ಈ ವೇಳೆ ಗಾಬರಿಗೊಂಡ ಮುತ್ತುರಾಜ್, ನಸುಕಿನ 2.30ರಲ್ಲಿ ಆಕೆಯನ್ನು ಸಮೀಪದ ಚಲುವಾಂಬ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪರೀಕ್ಷಿಸಿದ  ವೈದ್ಯರಿಗೆ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಮುತ್ತುರಾಜ್ ಮೇಲೆ   ಅನುಮಾನಗೊಂಡ ವೈದ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ  ಧಾವಿಸಿದ ಲಷ್ಕರ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ  ನಡೆಸಿದ್ದಾರೆ. ಕೂಡಲೇ ಮೈಸೂರಿಗೆ ತೆರಳಿದ್ದ ಕಾಡುಗೋಡಿ ಪೊಲೀಸರು, ಆರೋಪಿಯನ್ನು   ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ  ವಿರುದ್ಧ ಅಪಹರಣ ಹಾಗೂ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ