ಜಿಲ್ಲಾ ಸುದ್ದಿ

ಪ್ಯಾರಾ ಅಥ್ಲೆಟಿಕ್ಸ್ ಪ್ರೋತ್ಸಾಹಕ್ಕೆ ಆದಿತ್ಯ ಮೆಹ್ತ ಪ್ರತಿಷ್ಠಾನದಿಂದ ರೈಡರ್ ಆಯ್ಕೆ

ವಿಶಿಷ್ಟ ಚೇತನ ತಮ್ಮ ಆಯ್ಕೆಯ ಕ್ರೀಡೆ ಮುಂದುವರೆಸಲು ಹಾಗು ಜೀವನದಲ್ಲಿ ಸ್ಚಾವಲಂಬನೆಯ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಜನರಿಗೆ ನೇರವು ನೀಡುತ್ತಿರುವ...

- ಮೂವರು ಪಾರಾ ಅಥ್ಲೀಟ್‍ಗಳಿಗೆ ನೆರವು ನೀಡಲು 900ಕ್ಕೂ ಹೆಚ್ಚು ಕಿಮೀ ಬೈಸಿಕಲ್ ತುಳಿಯಲಿರುವ ಗಂಗಾಧರ್ ಬಲಿಜ
- ಪಾರಾ ಅಥ್ಲೀಟ್ ಬೆಂಬಲ ಸೂಚಿಸಿ ಭಾರತದ ರೂಪದರ್ಶಿ, ನಟಿ ಸಂಜನಾ ಗಲ್‍ರಾಣಿ ಸಹ 5 ಕಿಮೀ ಬೈಸಿಕಲ್ ತುಳಿಯಲಿದ್ದಾರೆ
- ಉದ್ದೇಶಕ್ಕಾಗಿ ಒಂದು ಲಕ್ಷಕ್ಕೂ ಹೆಚ ಹಣ ನೀಡಲಿರುವ ಟ್ರೆಕ್ ಬೈಕ್ಸ್, ಟ್ರೆಕ್ ಕಾರ್ಬನ್ ಬೈಸಿಕಲ್ ತುಳಿಯಲಿರುವ ಚಾರಿಟಿ ರೈಡರ್

ಬೆಂಗಳೂರು, ಡಿಸೆಂಬರ್, 2015: ವಿಶಿಷ್ಟ ಚೇತನ ತಮ್ಮ ಆಯ್ಕೆಯ ಕ್ರೀಡೆ ಮುಂದುವರೆಸಲು ಹಾಗು ಜೀವನದಲ್ಲಿ ಸ್ಚಾವಲಂಬನೆಯ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಜನರಿಗೆ ನೇರವು ನೀಡುತ್ತಿರುವ ನಾನ್ ಪ್ರಾಫೀಟ್ ಸಂಸ್ಥೆ ಆದಿತ್ಯ ಮೆಹ್ತ ಪ್ರತಿಷ್ಠಾನ(ಎಎಂಫ್) ಈ ಬಾರಿ ಸಂಸ್ಥೆಯ ಟೆಕಿ ಮತ್ತು ಸೈಕ್ಲಿಂಗ್ ಉತ್ಸಾಹಿ ಗಂಗಾಧರ ಬಲಿಜ ಅವರನ್ನು ಚಾರಿಟಿ ರೈಡರ್ ಆಗಿ ಆಯ್ಕೆ ಆಗಿದ್ದಾರೆ. ಇವರು ಡಿಸೆಂಬರ್ 16 ರಿಂದ 23 ರವರೆಗೆ ಟೂರ್ ಆಫ್ ನೀಲಗಿರೀಸ್‍ನಲ್ಲಿ 900ಕ್ಕೂ ಅಧಿಕ ಕಿ.ಮೀ. ಬೈಸಿಕಲ್ ತುಳಿಯಲಿದ್ದಾರೆ.

ಸಹಾಯರ್ಥ ರೈಡ್ ಮೂಲಕ ಗಂಗಾಧರ ಬಲಿಜ ಅವರು ಕನಿಷ್ಠ ಮೂರು ಲಕ್ಷ ರೂ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಸಂಗ್ರಹವಾದ ಹಣವನ್ನು ಮೂವರು ಪಾರಾ ಅಥ್ಲೀಟ್‍ಗಳಾದ – ಆನಂದ್ ಕುಮಾರು ಗೌಡ (ವಿಶ್ವಪಾರಾ ಬ್ಯಾಡ್ಮಿಂಟನ್ ಚಾಂಪಿಯನ್), ಗಿರೀಶ್ ಕುಮಾರ್ (ರಾಷ್ಟೀಯ ಪಾರಾ ಬ್ಯಾಡ್ಮಿಂಟನ್ ಚಾಂಪಿಯನ್) ಹಾಗೂ ಮಧು ಬರ್ಗಿ (ರಾಷ್ಟೀಯ ಪಾರಾ ಲಾನ್ ಟೆನಿಸ್ ಚಾಂಪಿಯನ್) – ಅಂತಾರಾಷ್ಟೀಯ ಪಾರಾ ಸ್ವರ್ಧೆಗೆ ಪಾಲ್ಗೋಳ್ಳಲು ನೆರವಾಗುವ ಉದ್ದೇಶವಾಗಿದೆ.

ವಿಶ್ವದ ಶ್ರೇಷ್ಠ ಬೈಕ್ ಮತ್ತು ಸೈಕ್ಲಿಂಗ್ ಗೇರ್ ಪ್ರಮುಖರಾಗಿರುವ ಟ್ರೇಕ್ ಬೈಕ್ಸ್ ಒಂದು ಲಕ್ಷ ರೂ ಗಳನ್ನು ಎ ಎಂ ಎಫ್‍ಗೆ ಈ ಉದ್ದೇಶಕ್ಕಾಗಿ ನೀಡಲ್ಲು ಸಮ್ಮತಿಸಿದೆ. ಅಲ್ಲದೆ ಸಹಾಯಾರ್ಥ ರೈಡರ್ ಗಂಗಾಧರ ಬಲಿಜ ಟಿಎಫ್‍ಎನ್ 2015 ಸವಾರಿಗೆ ಟ್ರೇಕ್ ಕಾರ್ಬನ್ ಬೈಸಿಕಲ್ ನೀಡಲಿದೆ. ರೂಪದರ್ಶಿ ಮತ್ತು ಚಿತ್ರನಟಿ ಸಂಜನಾ ಗುಲ್‍ರಾಣಿ ಸಮ್ಮುಖದಲ್ಲಿ ಜಯನಗರದಲ್ಲಿ ನಡೆದ ಸಮಾರಂಭದಲ್ಲಿ ಟ್ರೇಕ್‍ಬೈಕ್ಸ್ ಒಂದು ಲಕ್ಷರೂ ಮೊತ್ತದ ಚೆಕ್ಕನ್ನು ಎಎಂಎಫ್‍ಗೆ ನೀಡಿತು. ಈ ಸಂದರ್ಭದಲ್ಲಿ ಸಂಜನಾ ಪಾರಾ ಅಥ್ಯೆಟಿಕ್ಸ್‍ಗಳ ಪರವಾಗಿ ಐದು ಕಿಮೀ ದೂರ ಸೈಕಲ್ ತುಳಿದರು.

ಸಮಾಜಕ್ಕೆ ಏನ್ನಾನ್ನಾದರೂ ಹಿಂತಿರುಗಿ ನೀಡಬೇಕು ಎಂಬ ಉದ್ದೇಶ, ಅಲೋಚನೆ ನನ್ನಲ್ಲಿ ತುಡಿಯುತ್ತಿತ್ತು. ಸೈಕ್ಲಿಂಗ್ ನನಗೆ ಇಷ್ಟ ಆಗಿರುವುದರಿಂದ ಸಹಾಯಾರ್ಥ ರೈಡರ್ ಆಗಿ ದೂರ ಪ್ರಯಾಣ ಮಾಡುವುದು ಸೂಕ್ತ ಎಂದು ಭಾವಿಸಿದೆ, ನಿರ್ದಿಷ್ಠ ಉದ್ದೇಶಕ್ಕಾಗಿ ನಿಧಿ ಸಂಗ್ರಹಿಸಲು ಇದು ಸರಿಯಾದ ಮಾರ್ಗ ಎಂದು ಗಂಗಾಧರ್ ಬಲಿಜ ಇದೇವೇಳೆ ತಿಳಿಸಿದರು. 2014 ರಲ್ಲಿ ಆಂದ್ರಪ್ರದೇಶದ ಹಿಂದೂಪುರದಲ್ಲಿ ಇರುವ ಅಂಧ ಮಕ್ಕಳ ಶಾಲೆಗೆ ಒಂದು ಲಕ್ಷ ರೂ ನಿಧಿ ಸಂಗ್ರಹಿಸಲು ನೀಲಗಿರಿಗೆ ಸುಮಾರು 900 ಅಧಿಕ ಕಿಮೀ ಸೈಕಲ್‍ನಲ್ಲಿ ಕ್ರಮಿಸಿದ್ದರು. ಅದೇರೀತಿ ಇವರು ಇತ್ತೀಚೆಗೆ ಬೆಂಗಳೂರಿನಿಂದ ಹೈದರಾಬಾದಿಗೆ 580 ಕಿಮೀ ಸೈಕಲ್‍ನಲ್ಲಿ ಕ್ರಮಿಸಿ 1.20 ಲಕ್ಷ ರೂಗಳನ್ನು ಎಎಂಎಫ್‍ನ ಪಾರಾ ಅಥ್ಲೆಟಿಕ್ಸ್ ತಂಡಕ್ಕೆ ಸಂಗ್ರಹಿಸಿದ್ದಾರೆ.

ಭಾರತದಲ್ಲಿ ಪ್ರಮುಖ ಕ್ರೀಡೆಗಳಿಗೆ ನಿಧಿ ಸಂಗ್ರಹಿಸುವುದು ಸವಾಲಿನ ಕೆಲಸ. ಪಾರಾ ಕ್ರೀಡೆಗೆ ಇದೂ ಮತ್ತಷ್ಟು ಕಷ್ಟದ ಕೆಲಸ ಎನ್ನುತ್ತಾರೆ ಆದಿತ್ಯ ಮೆಹ್ತ, ಸಂಸ್ಥಾಪಕರು, ಆದಿತ್ಯ ಮೆಹ್ತ ಪ್ರತಿಷ್ಠಾನ. ಈ ಹಿನ್ನೆಲೆಯಲ್ಲಿ ಸಂಸ್ಥೆ ಪಾರಾ ಅಥ್ಲೀಟ್‍ಗಳನ್ನು ಕೀಡೆ ಅಲ್ಲದೆ ಇತರ ವಿಷಯದಲ್ಲೂ ಪ್ರೋತ್ತಾಹಿಸಲು ಅವರಿಗೆ ತರಬೇತಿ , ತರಬೇತಿಗೆ ಅಗತ್ಯವಿರುವ ನೆರವು ನೀಡಲು ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಗಂಗಾಧರ ಬಲಿಜ ಹಾಗೂ ಟ್ರೇಕ್ ಬೈಕ್ಸ್ ತೊರುತ್ತಿರುವ ಅಭಿಮಾನ ಶ್ಲಾಘಿಸಬೇಕಾದದ್ದು. ಪಾರಾ ಅಥ್ಲೀಟ್‍ಗಳ ನೆರವಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗಳು ಹಾಗೂ ಸಂಘಟನೆಗಳೂ ಮುಂದೆ ಬರಬೇಕು ಎಂದೂ ಅವರು ಇದೇವೇಳೆ ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿ - http://adityamehtafoundation.org/donation/gangadhar-balija/

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್