ಬೆಂಗಳೂರು: ``ಕರ್ನಾಟಕಕ್ಕೆ ಟಿಪ್ಪು ಸುಲ್ತಾನ ಕೊಡುಗೆ ಅಪಾರ. ನಂಜನಗೂಡು, ಶೃಂಗೇರಿ ದೇವಸ್ಥಾನಗಳಿಗೆ ಕೊಡುಗೆ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ದಲ್ಲಿ ಪ್ರತಿ ಸಂಜೆ ಸಲಾಂ ಮಂಗಳಾರತಿ ಇವೆಲ್ಲ ಟಿಪ್ಪುವಿನ ವ್ಯಕ್ತಿತ್ವಕ್ಕೆ ಜ್ವಲಂತ ಉದಾಹರಣೆಯಾಗಿವೆ''.
ಇದು ಟಿಪ್ಪು ಕುರಿತಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ ಮಾತುಗಳು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ `ಟಿಪ್ಪು ಮತ್ತು ಅವನ ಕೊಡುಗೆ' ಎಂಬ ವಿಷಯವಾಗಿ ಹಮ್ಮಿಕೊಂಡಿದ್ದ ಚರ್ಚೆ ಯಲ್ಲಿ ಮಾತನಾಡಿದ ಅವರು, ``ಕರ್ನಾಟಕವ ನ್ನು ಆಳಿದ ರಾಜರಲ್ಲಿ ಆತ ಒಬ್ಬ ಮಹಾನ್ ನಾಯಕ. ಹಿಂದಿನಿಂದಲೂ ಪ್ರತಿ ವರ್ಷ ಟಿಪ್ಪು ಜಯಂತಿಯನ್ನು ರಾಜ್ಯದಲ್ಲಿ ಚರಿಸುತ್ತ ಬಂದಿದ್ದೇವೆ. ಈ ವರ್ಷ ಸರ್ಕಾರದಿಂದ ಅಧಿಕೃತವಾಗಿ ಆಚರಿಸಲಾಯಿತು. ಆದರೆ ಇತಿಹಾಸದ ಕೆಲವೊಂದು ಘಟನೆಗಳನ್ನು ಮುಂದಿಟ್ಟುಕೊಂಡು ಆರ್‍ಎಸ್‍ಎಸ್ ಮತ್ತು ಭಜರಂಗ ದಳಗಳು ಮಾತ್ರ ಟಿಪ್ಪು ಒಬ್ಬ ಹಿಂದೂ ವಿರೋಧಿ ಎಂದು ದ್ವೇಷಿಸುತ್ತಿವೆ'' ಎಂದು ಅವರು ಟೀಕಿಸಿದರು.
``ಇತಿಹಾಸದಲ್ಲಿ ಸಾಂದರ್ಭಿಕವಾಗಿ ಯುದ್ಧಗಳು ಸಂಭವಿಸಿರಬಹುದು. ಕರ್ನಾಟಕದ ಲಬಾರ್ ಭಾಗದಲ್ಲಿ, ಕೊಡಗಿನಲ್ಲಿ ಟಿಪ್ಪು ಬಗ್ಗೆ ಹೆಚ್ಚಾಗಿ ಒಳ್ಳೆ ಅಭಿಪ್ರಾಯವಿಲ್ಲ. ಆದರೆ ಟಿಪ್ಪುವಿನ ಆಸ್ಥಾನದ ಕೆಲವೊಂದು ಪ್ರಮುಖ ಹುದ್ದೆ ಗಳಲ್ಲಿದ್ದವರು ಹಿಂದೂಗಳೇ ಅಲ್ಲವೇ'' ಎಂದು ಸಚಿವ ದಿನೇಶ ಗುಂಡು ರಾವ್ ಹೇಳಿದರು.
``ಟಿಪ್ಪು ಮುಸ್ಲಿಂ ಧರ್ಮದವ ನಾಗಿದ್ದರಿಂದ ದ್ವೇಷಿಸಲಾಗುತ್ತಿದೆ. ಈ ಪರ-ವಿರೋಧ ಸೃಷ್ಟಿಸುತ್ತಿರುವವರು ಬೆರಳೆಣಿಕೆಯಷ್ಟು ಇತಿಹಾಸಕಾರರು. ಆತ ಮುಸ್ಲಿಮನಾಗಿರದಿದ್ದರೆ ಅವನೊಬ್ಬ ದೇಶದ ಮಹಾನ್ ವ್ಯಕ್ತಿ ಆಗುತ್ತಿದ್ದ'' ಎಂದರು.
``ನಾನೂ ಟಿಪ್ಪುವನ್ನು ಪರಿಪೂರ್ಣ ಎಂದು ಹೇಳುವುದಿಲ್ಲ. ಮಹಾತ್ಮ ಗಾಂಧಿಯನ್ನೊಳಗೊಂಡಂತೆ ಯಾರೊಬ್ಬರೂ ಪರಿಪೂರ್ಣರಲ್ಲ. ಆದರೆ ಕರ್ನಾಟಕದ ಪಾಲಿಗೆ ಉತ್ತಮ ರಾಜ ಮತ್ತು ಆಡಳಿತಗಾರರಲ್ಲಿ ಟಿಪ್ಪು ಒಬ್ಬ'' ಎಂದು ಹೇಳಲು ಅವರು ಹೇಳಲು ಮರೆಯಲಿಲ್ಲ.
ಇನ್ನು ಈ ವಿಷಯವಾಗಿ ಮಾತನಾಡಿದ ವಕೀಲ ತೇಜಸ್ವಿ ಸೂರ್ಯ, `ಟಿಪ್ಪು ಒಬ್ಬ ದೇಶದ್ರೋಹಿ' ಎಂದು ದಿನೇಶ್ ಗುಂಡೂರಾವ್‍ಗೆ ತಿರುಗೇಟು ನೀಡಿದರು. ``ಹಿಂದೂಗಳನ್ನು ಮತಾಂತರ ಮಾಡಿದ್ದು, 8 ಸಾವಿರ ಹಿಂದೂ ದೇವಾಲಯಗಳನ್ನು ನಿರ್ನಾಮ ಮಾಡಿರು ವುದು ಇತಿಹಾಸದಲ್ಲಿ ಸ್ಪಷ್ಟವಾಗಿವೆ'' ಎಂದರು. ಅಫ್ಘಾನಿಸ್ತಾನ ರಾಜ ಜಮನ್ ಪಾಷಾಗೆ ಪತ್ರ ಬರೆದಿದ್ದ ಟಿಪ್ಪು ಭಾರತಕ್ಕೆ ಬಂದು ಇಸ್ಲಾಂ ರಾಜ್ಯವನ್ನು ವಿಸ್ತರಿಸು ಎಂದು ಬೇಡಿಕೊಂಡಿದ್ದ. ಈ ವಿಷಯಗಳನ್ನು ಆರ್‍ಎಸ್‍ಎಸ್, ಭಜರಂಗದಳದವರು ಹೇಳುತ್ತಿಲ್ಲ. ಬದಲಾಗಿ ಇತಿಹಾಸ ತಜ್ಞರು ಹೇಳಿದ್ದಾರೆಂದು ತೇಜಸ್ವಿ ಸೂರ್ಯ ಹೇಳಿದರು.
ಟಿಪ್ಪು ಸುಲ್ತಾನನ ಕಾಲದಲ್ಲಿ ದೇಶಕ್ಕೆ ಸ್ವತಂತ್ರ ಎಂಬ ಕಲ್ಪನೆ ಇದ್ದಿದ್ದಿಲ್ಲ. ಆದರೆ ರಾಣಿ ಕಿತ್ತೂರು ಚೆನ್ನಮ್ಮನ ಅವರ ಕಾಲದಲ್ಲಿ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟಗಳು ಪ್ರಾರಂಭವಾ ಗಿದ್ದವು. ಟಿಪ್ಪು ಮತ್ತು ಚೆನ್ನಮ್ಮನ ಕಾಲಘಟ್ಟಗಳೇ ಬೇರೆಯದ್ದಾಗಿವೆ. ಅಬ್ದುಲ್ ಕಲಾಂ ಜಯಂತಿ, ಸಂತ ಶಿಶುನಾಳರ ಜಯಂತಿ ಮಾಡಿದರೆ ಕರ್ನಾಟಕದ ಜನರು ಸ್ವಾಗತಿಸುತ್ತಾರೆ. ಆದರೆ ಟಿಪ್ಪು ಜಯಂತಿ ದಿನದಂದೂ ಸರ್ಕಾರವೇ 144 ಸೆಕ್ಷನ್ ಜಾರಿ ಮಾಡಿತ್ತು. ಅದರಿಂದಲೇ ಟಿಪ್ಪು ಜಯಂತಿಗೆ ರಾಜ್ಯದಲ್ಲಿ ವಿರೋಧವಿದೆ ಎಂದೂ ಗೊತ್ತಾಗುತ್ತದೆ ಎಂದು ತೇಜಸ್ವಿ ನುಡಿದರು. ಈ ಚರ್ಚಾಕೂಟದಲ್ಲಿ ಸಾಹಿತಿ ಕೃಷ್ಣ ಮೂರ್ತಿ ಹನೂರು ಮತ್ತು ಬೆಂಗಳೂರು ಸಾಹಿತ್ಯ ಉತ್ಸವದ ಸಂಘಟಕ ವಿಕ್ರಮ್ ಸಂಪತ್ ಭಾಗವಹಿಸಿದ್ದರು. ಚರ್ಚಾಕೂ ಟವನ್ನು ಎನ್‍ಡಿಟಿವಿಯ ಹಿರಿಯ ಪತ್ರಕರ್ತೆ ಮಾಯಾ ಮಿರ್‍ಚಂದಾನಿ ನಿರೂಪಿಸಿದರು.