ಕೊಲೆ ಆರೋಪಿ ಪೋಲೀಸ್ ಅತಿಥಿ
ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸುರೇಶ್ (25) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು: ಚನ್ನಮ್ಮನಕೆರೆ ಅಚ್ಚು ಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸುರೇಶ್ (25) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತುಮಕೂರು ಮೂಲದ ಆರೋಪಿ ಸುರೇಶ್ ಲಗೇಜ್ ಆಟೋ ಚಾಲಕನಾಗಿದ್ದು, ಬನಶಂಕರಿ 3 ನೇ ಹಂತದ ಕತ್ರಿಗುಪ್ಪೆ ವಾಟರ್ ಟ್ಯಾಂಕ್ ರಸ್ತೆಯಲ್ಲಿರುವ ರಾಮಕೃಷ್ಣ ಟೆಂಟ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ.
ಡಿ.4ರಂದು ತಡರಾತ್ರಿ ಟೆಂಟ್ ಹೌಸ್ ನಲ್ಲಿ ಸ್ನೇಹಿತ ಅವಿನಾಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಅಂದು ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮೃತ ಅವಿನಾಶ್ ಹಾಗೂ ಆರೋಪಿ ಸುರೇಶ ಇಬ್ಬರು ಸ್ನೇಹಿತರಾಗಿದ್ದು ಟೆಂಟ್ ಹೌಸ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕಂಠ
ಪೂರ್ತಿ ಕುಡಿದಾಗ ಜಗಳ ವಿಕೋಪಕ್ಕೆ ಹೋಗಿದ್ದರಿಂದ ಕೊಲೆ ನಡೆದಿತ್ತು. ಎಂದು ಪೊಲೀಸರು ತಿಳಿಸಿದ್ದಾರೆ.