ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದಿದ್ದರೆ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಉತ್ತರ ಕರ್ನಾಟಕ ಶೈಕ್ಷಣಿಕ ಹೋರಾಟ ವೇದಿಕೆ ಎಚ್ಚರಿಸಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಎಂ.ಎಸ್. ಖೇಡ ಮಾತನಾಡಿ, ರಾಜ್ಯದಲ್ಲಿ 1987ರಿಂದ 1995ರೊಳಗೆ ಸ್ಥಾಪನೆಗೊಂಡ ಪರಿಶಿಷ್ಟ ವರ್ಗ, ಪಂಗಡದ ಆಡಳಿತ ಮಂಡಳಿಗಳು ನಡೆಸುತ್ತಿರುವ ಅನುದಾನರಹಿತ ಕಾಲೇಜುಗಳಿಗೆ ಅನು ದಾನ ನೀಡ ಲಾಗುತ್ತಿದೆ. ಆದರೆ, ಇದೇ ಅವಧಿಯಲ್ಲಿ ಸಾಮಾನ್ಯ ವರ್ಗ ಆಡಳಿತ ಮಂಡಳಿಗಳು ನಡೆಸುತ್ತಿರುವ 88 ಡಿಗ್ರಿ ಕಾಲೇಜುಗಳಿಗೆ ಅನುದಾನ ನೀಡದೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಸಿಬ್ಬಂದಿ ಅತಂತ್ರ: ಸಾಮಾನ್ಯ ವರ್ಗ ಆಡಳಿತ ಮಂಡಳಿಗಳು ನಡೆಸುತ್ತಿರುವ 88 ಪ್ರಥಮ ದರ್ಜೆ ಕಾಲೇಜುಗಳ ಪೈಕಿ 60 ಕಾಲೇಜುಗಳು ಉತ್ತರ ಕರ್ನಾಟಕದ ಹಿಂದುಳಿದ ಬರ ಪೀಡಿತ ತಾಲೂಕುಗಳಲ್ಲಿ ನೆಲೆಸಿವೆ. ಅನುದಾನ ವಿಳಂಬದಿಂದಾಗಿ ಕಾಲೇಜುಗಳನ್ನುಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 1,300 ಬೋಧಕರು ಮತ್ತು 700 ಬೋಧಕೇತರ ಸಿಬ್ಬಂದಿ
ಅತಂತ್ರವಾಗಿದ್ದಾರೆ ಎಂದು ತಿಳಿಸಿದರು. ಈ ವಿಳಂಬ ನೀತಿ ವಿರೋಧಿಸಿ ಉನ್ನತ ಶಿಕ್ಷಣ ಇಲಾಖೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಕೂಡಲೆ ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಂಚಾಲಕ ಪಿ.ಎಸ್. ಮಂಜೇ ಗೌಡ ಮಾತನಾಡಿ, ಅನುದಾನದ ಕೊರತೆಯಿಂದ ಸಮಾನ್ಯ ವರ್ಗ ಆಡಳಿತ ಮಂಡಳಿಗಳು ನಡೆಸುತ್ತಿರುವ ಕಾಲೇಜುಗಳಲ್ಲಿ ನೆಟ್, ಸ್ಲೆಟ್, ಪಿಎಚ್.ಡಿ ಅರ್ಹತೆಯನ್ನು ಪಡೆದ ಉಪನ್ಯಾಸಕರಿಗೆ ಅತ್ಯಂತ ಕಡಿಮೆ ವೇತನ ನೀಡ ಲಾಗುತ್ತಿದೆ. ಇದರ ಪರಿಣಾಮ ಉಪನ್ಯಾಸಕರು ಉದ್ಯೋಗತೊರೆಯುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics