ಬೆಂಗಳೂರು: ತಮಿಳುನಾಡಿನಲ್ಲಿ ಉಂಟಾದ ಭೀಕರ ಪ್ರವಾಹ ಸಂತ್ರಸ್ತರಿಗೆ ಕರ್ನಾಟಕ ಹಾಲು ಮಹಾಮಂಡಳಿ ಯಿಂದ 26 ಲಕ್ಷ ಮೌಲ್ಯದ 10 ಸಾವಿರ ಲೀಟರ್ ಹಾಲು, 15 ಮೆಟ್ರಿಕ್ ಟನ್ ಹಾಲಿನ ಉತ್ಪನ್ನಗಳನ್ನು ಕಳುಹಿಸಿಕೊಡಲಾಯಿತು. ಕೆಎಂಎಫ್ ಕಚೇರಿಯಲ್ಲಿ ಶುಕ್ರವಾರ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರು ತಮಿಳುನಾಡಿಗೆ ಹಾಲು, ಹಾಲಿನ ಉತ್ಪನ್ನಗಳನ್ನು ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ರು. 5 ಕೋಟಿ ಪರಿಹಾರ ಧನ ಕಳುಹಿಸಿದ್ದಾರೆ. ಸಹಕಾರ ಇಲಾಖೆಯಿಂದಲೂ ಒಂದು ಕೋಟಿ ದೇಣಿಗೆಯನ್ನು ಕಳುಹಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಅದನ್ನು ರವಾನಿಸಲಾಗುವುದು ಎಂದು ತಿಳಿಸಿದರು. ಮೊದಲ ಹಂತದಲ್ಲಿ ಎಂಟು ಸಾವಿರ ಲೀಟರ್ ಹಾಲು ಹಾಗೂ 11 ಮೆಟ್ರಿಕ್ ಟನ್ ಹಾಲಿನ ಪುಡಿ ಕಳುಹಿಸಲಾಗಿದೆ. ಒಟ್ಟಾರೆ ಇದುವರೆಗೆ ರು. 50ಲಕ್ಷ ಮೌಲ್ಯದ ಉತ್ಪನ್ನಗಳನ್ನು ಕಳುಹಿಸಲಾಗಿದೆ. ತಮಿಳುನಾಡಿನ ಬೇಡಿಕೆಗೆ ಅನುಗುಣವಾಗಿ ಹಂತಹಂತವಾಗಿ ಇನ್ನೂ ರು. 2.5 ಕೋಟಿ ಮೌಲ್ಯದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು. ಕೆಎಂಎಫ್ ನಿಂದ ಕಳುಹಿಸಿದ ಪದಾರ್ಥಗಳು ಅಲ್ಲಿನ ಸರ್ಕಾರಕ್ಕೆ ಒಪ್ಪಿಸಲಾಗುತ್ತದೆ. ಸರ್ಕಾರದ ಪ್ರತಿನಿಧಿಗಳೇ ಸ್ಥಳೀಯವಾಗಿ ವಿತರಿಸಿದ್ದಾರೆ. ಸರ್ಕಾರಿಂದ ರೈತರಿಗೆ ಸಹಾಯಧನ ದೊರೆತ ನಂತರ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಪ್ರಸಕ್ತ 73ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ಅದಕ್ಕೆ ಬೇಕಾದ ಸಂಸ್ಕರಣಾ ಘಟಕ ಮತ್ತು ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ತೊಂದರೆಯಾಗಿದೆ. ಚಾಮರಾಜನಗರದಲ್ಲಿ ರು.95ಕೋಟಿ ವೆಚ್ಚದಲ್ಲಿ ಡೈರಿ, ಮೈಸೂರಿನಲ್ಲಿ ರು. 200 ಕೋಟಿ ವೆಚ್ಚದಲ್ಲಿ ಮೆಘಾ ಡೇರಿ,
ಹೊಸಕೋಟೆಯಲ್ಲಿ ರು.33ಕೋಟಿ ವೆಚ್ಚದಲ್ಲಿ ಹೊಸ ಘಟಕ ಹಾಗೂ ರು.180 ಕೋಟಿ ವೆಚ್ಚದಲ್ಲಿ ಕನಕಪುರ, ಚನ್ನಪಟ್ಟಣ, ರಾಮನಗರದಲ್ಲಿ ಹೊಸ ಘಟಕ ಸ್ಥಾಪಿಸಲಾಗುತ್ತದೆ ಎಂದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics