ಚಿಕ್ಕಬಳ್ಳಾಪುರ: ಇಲ್ಲಿನ ಗೌರಿಬಿದನೂರು ತಾಲೂಕಿನಲ್ಲಿರುವ ವ್ಯಾಚಕುರಹಳ್ಳಿ ಯನ್ನು ಭಾರತದ ಮೊತ್ತ ಮೊದಲ ಹೊಗೆರಹಿತ ಹಳ್ಳಿ ಎಂದು ಘೋಷಿಸಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 77 ಕಿ.ಮಿ ದೂರದಲ್ಲಿರುವ ಹಳ್ಳಿಯಲ್ಲೀಗ ಹೊಗೆ ಸೂಸುವ ಒಲೆಗಳ ಬದಲು ಎಲ್‌ಪಿಜಿ ಸ್ಟೌವ್ ಬಂದಿದೆ.
ಈ ಗ್ರಾಮದಲ್ಲಿರುವ 274 ಮನೆಗಳಿಗೆ ಎಲ್‌ಪಿಜಿ ಕನೆಕ್ಷನ್ ಸಿಕ್ಕಿದ್ದು ಹೊಗೆರಹಿತ ಹಳ್ಳಿ ಎಂಬ ಬಿರುದನ್ನು ಈ ಗ್ರಾಮ ತನ್ನದಾಗಿಸಿಕೊಂಡಿದೆ. ಇಂಡಿಯನ್ ಆಯಿಲ್ ಕಾರ್ಪರೇಷನ್‌ನ 'ಮಿಷನ್ ಸ್ಮೋಕ್ ಲೆಸ್ ವಿಲೇಜ್' ಯೋಜನೆಯಡಿಯಲ್ಲಿ ಈ ಗ್ರಾಮಕ್ಕೆ ಎಲ್‌ಪಿಜಿ ಸಂಪರ್ಕ ಲಭಿಸಿತ್ತು.
ಸೌದೆ ಉರಿಸಿ ಒಲೆಯಲ್ಲೇ ಅಡುಗೆ ಮಾಡುತ್ತಿದ್ದ ಗ್ರಾಮದಲ್ಲೀಗ ಎಲ್‌ಪಿಜಿ ಸ್ಟೌವ್ ಬಂದಿದೆ. ಹೊಗೆಯೂದುತ್ತಾ ಕಷ್ಟ ಅನುಭವಿಸುವ ಮಹಿಳೆಯರೀಗ ಆರಾಮವಾಗಿ ಅಡುಗೆ ಮಾಡುತ್ತಿದ್ದಾರೆ.