ಬೆಂಗಳೂರಿನಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಸಲಹೆಗಾರ ರಾಮಾನಂಜಪ್ಪ ಆಲ್ದಳ್ಳಿ, ವಿಶ್ರಾಂತ ಕುಲಪತಿ 
ಜಿಲ್ಲಾ ಸುದ್ದಿ

ಜಿಎಸ್‍ಟಿ ಜಾರಿಯಲ್ಲಿ ಇಬ್ಬಗೆಯ ನೀತಿ: ಸಂತೋಷ ಹೆಗ್ಡೆ

ಯುಪಿಎ ಸರ್ಕಾರವಿದ್ದಾಗ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್‍ಟಿ) ಜಾರಿಗೆ ಎನ್‍ಡಿಎವಿರೋಧಿಸಿತ್ತು. ಈಗ ಎನ್‍ಡಿಎ...

ಬೆಂಗಳೂರು: ಯುಪಿಎ ಸರ್ಕಾರವಿದ್ದಾಗ ಸರಕು ಮತ್ತು ಸೇವಾ ತೆರಿಗೆ ಮಸೂದೆ(ಜಿಎಸ್‍ಟಿ)  ಜಾರಿಗೆ ಎನ್‍ಡಿಎ ವಿರೋಧಿಸಿತ್ತು. ಈಗ ಎನ್‍ಡಿಎ ಅದನ್ನು ಜಾರಿಗೆ  ಹೊರಟಾಗ ಯುಪಿಎ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್  ಸಂತೋಷ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಯುವಿಸಿಇ ಅಲೂಮ್ನಿ ಅಸೋಸಿಯೇಷನ್  ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯೋಗಾಕಾಂಕ್ಷಿಗಳ  ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಎಸ್‍ಟಿ ವಿಚಾರದಲ್ಲಿ ರಾಜಕೀಯ ಪಕ್ಷಗಳು  ಅನುಸರಿಸುತ್ತಿರುವ ಇಬ್ಬಗೆಯ ನೀತಿಯನ್ನು ವಿರೋಧಿಸಿದರು.``ಒಂದು ದಿನದ   ಅಧಿವೇಶನಕ್ಕೆ 5 ಕೋಟಿ ಖರ್ಚಾಗುತ್ತದೆ. ಜಿಎಸ್‍ಟಿಗಾಗಿ 5 ದಿನದ ಅಧಿವೇಶನ ಬಲಿಯಾಗಿದೆ.  ಅಂದರೆ ದೇಶದ 25 ಕೋಟಿ ನಷ್ಟವಾಗಿದೆ. ಶ್ರೀಮಂತಿಕೆಯನ್ನು ಮತ್ತು ಅಧಿಕಾರದಲ್ಲಿರುವವರನ್ನು ಪೂಜಿಸುವುದರಿಂದಲೇ ಇಂತಹ ವ್ಯವಸ್ಥೆ ಸೃಷ್ಟಿಯಾಗಿದೆ. ಕೆಲವೇ ಕೆಲವು  ಪ್ರಾಮಾಣಿಕರಿಂದ ಏನು ಆಗುವುದಿಲ್ಲ. ಹೋರಾಟದಿಂದ ಬದಲಾವಣೆಯಾಗದಿರಬಹುದು,  ಆದರೆ ಹೋರಾಟ ಮಾಡದಿರುವುದು ದೊಡ್ಡ ತಪ್ಪು,'' ಎಂದು ಹೇಳಿದರು. 

`ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಎಂಬುದು ಈಗ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಎಂಬಂತಾಗಿದೆ. ಶಾಸನ ಸಭೆಯು ಲೋಕಸೇವಾ ಆಯೋಗದ  ಅಗತ್ಯವನ್ನು  ಒತ್ತಿ ಹೇಳಿತು. ಈ ಆಯೋಗಕ್ಕೆ ನೇಮಕ ಮಾಡುವ ಅಧಿಕಾರವನ್ನು ಶಾಸಕಾಂಗಕ್ಕೆ ನೀಡಬಾರದು ಎಂಬ ವಾದವೂ ಇತ್ತು. ಆದರೆ  ಸಾಕಾರವಾಗಲಿಲ್ಲ. ಹೀಗಾಗಿಯೇ  ಇಂದು ಯುಪಿಎಸ್ಸಿ, ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರವಿದೆ. ಕೆಲವೇ ಮಂದಿ ಈ ಸಂಸ್ಥೆಗಳನ್ನು ತಮ್ಮ ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೆಗ್ಡೆ ವಿಷಾದಿಸಿದರು.

ಉದ್ಯೋಗಾಂಕ್ಷಿಗಳು ಒಟ್ಟಿಗೆ   ಸೇರಿ ಕರಡು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಅಗತ್ಯ ಸಲಹೆ-ಸಹಕಾರವನ್ನು ನಾವು  ನೀಡುತ್ತೇವೆ. ಆದರೆ ಹೋರಾಟಗಾರರು ಕೊನೆಯವರೆಗೂ ಬದ್ದತೆಯಿಂದ  ನಡೆದುಕೊಳ್ಳಬೇಕು.   
ಜೆ.ಎಸ್.ಪಾಟೀಲ
ವಿಶ್ರಾಂತ ಕುಲಪತಿ, ಕಾನೂನು ವಿವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ