ದೆಹಲಿ ಹೈಕೋರ್ಟ್ 
ಜಿಲ್ಲಾ ಸುದ್ದಿ

ಕಾಲ್ ಡ್ರಾಪ್ ಸಮಸ್ಯೆಗೆ ಪರಿಹಾರ ನಿಯಮ: ಟ್ರಾಯ್ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್ ಸೂಚಿಸಿದ್ದ ಪರಿಹಾರ ನಿಯಮಗಳನ್ನು ಟೆಲಿಕಾಂ ಆಪರೇಟರ್ ಗಳು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಟ್ರಾಯ್ ನಿಂದ ಪ್ರತಿಕ್ರಿಯೆ ಕೇಳಿದೆ.

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್ ಸೂಚಿಸಿದ್ದ ಪರಿಹಾರ ನಿಯಮಗಳನ್ನು ಟೆಲಿಕಾಂ ಆಪರೇಟರ್ ಗಳು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಡಿ.14 ರಂದು ಕೇಂದ್ರ ಸರ್ಕಾರ ಹಾಗೂ ಟ್ರಾಯ್ ನಿಂದ ಪ್ರತಿಕ್ರಿಯೆ ಕೇಳಿದೆ.
2016 ರ ಜನವರಿಯಿಂದ ಟ್ರಾಯ್ ಸೂಚಿಸಿರುವ ಕಾಲ್ ಡ್ರಾಪ್ ಪರಿಹಾರ ನಿಯಮಗಳು ಜಾರಿಗೆ ಬರಲಿದ್ದು, ಪ್ರತಿ ಬಾರಿ ಕಾಲ್ ಡ್ರಾಪ್ ಸಮಸ್ಯೆ ಎದುರಿಸಿದ್ದ ಗ್ರಾಹಕರಿಗೆ 1 ರೂಪಾಯಿ ಪರಿಹಾರ ಧನ ನೀಡಬೇಕಾಗುತ್ತದೆ. ಈ ಪರಿಹಾರ ಮೂರು ಕಾಲ್ ಡ್ರಾಪ್ ಗಳಿಗೆ ಮಾತ್ರ ಅನ್ವಯವಾಗಲಿದೆ.
ಟ್ರಾಯ್ ವಿಧಿಸಿರುವ ನಿಯಮಗಳನ್ನು ವಿರೋಧಿಸಿ ಟೆಲಿಕಾಂ ಸಂಸ್ಥೆಗಳು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಟೆಲಿಕಾಂ ಸಂಸ್ಥೆಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಡಿ.22 ರೊಳಗೆ ಪ್ರತಿಕ್ರಿಯೆ ನೀಡುವಂತೆ ಟ್ರಾಯ್ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 
ನಿಯಮಗಳ ಪ್ರಕಾರ ನೆಟ್ವರ್ಕ್ ಸೌಲಭ್ಯ ಒದಗಿಸಲು ಟೆಲಿಕಾಮ್ ಆಪರೇಟರ್ ಗಳು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಾಲ್ ಡ್ರಾಪ್ ಸಮಸ್ಯೆ ಎದುರಾಗುವುದಕ್ಕೆ ಕಾರಣವನ್ನು ಟ್ರಾಯ್ ಸರಿಯಾಗಿ ವಿವರಿಸಿಲ್ಲ, ಅಲ್ಲದೇ ಗ್ರಾಹಕರಿಗೆ ಪರಿಹಾರ ನೀಡಲು ಟ್ರಾಯ್ ಕಾಯ್ದೆಯಲ್ಲಿ ಟ್ರಾಯ್ ಗೆ ಅಧಿಕಾರವಿಲ್ಲ. ಎಂದು ಟೆಲಿಕಾಮ್ ಆಪರೇಟರ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದು ಅಕ್ಟೋಬರ್ 16 ರಂದು ಟ್ರಾಯ್ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ಸೆಲ್ಯೂಲರ್ ಆಪರೇಟರ್ ಗಳು ಕೋರ್ಟ್ ಗೆ ಮನವಿ ಮಾಡಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT