ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಮೋಜಿಗಾಗಿ ಕಳ್ಳತನ ಮಾಡುತ್ತಿದ್ದವನ ಸೆರೆ

ಮೋಜು ಮಸ್ತಿಗಾಗಿ ಮನೆಗಳವು ಮಾಡುತ್ತಿದ್ದ ಓರ್ವ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಯಲಹಂಕ ಪೊಲೀಸರು 1.50 ಲಕ್ಷ ಮೌಲ್ಯದ...

ಬೆಂಗಳೂರು: ಮೋಜು ಮಸ್ತಿಗಾಗಿ ಮನೆಗಳವು ಮಾಡುತ್ತಿದ್ದ ಓರ್ವ ಕುಖ್ಯಾತ ಕಳ್ಳನನ್ನು  ಬಂಧಿಸಿರುವ ಯಲಹಂಕ ಪೊಲೀಸರು 1.50 ಲಕ್ಷ ಮೌಲ್ಯದ ಚಿನ್ನಾಭರಣ  ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ ಅಂಬೇಡ್ಕರ್ ಕಾಲೋನಿ ನಿವಾಸಿ ಉಮೇಶ್ ಅಲಿಯಾಸ್ ಜೈಲ್‍ರಾಜ (38)  ಬಂಧಿತ ಆರೋಪಿ. ವೃತ್ತಿಪರ ಕಳ್ಳನಾಗಿರುವ ಆರೋಪಿ  ಉಮೇಶ್ ವಿರುದ್ಧ ನಗರದ ವಿವಿಧ  ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಶಿಕ್ಷೆ   ಅನುಭವಿಸಿರುವ ಈತ ಜಾಮೀನಿನ ಮೇಲೆ ಹೊರಬಂದಿದ್ದ. ನಂತರವೂ ತನ್ನ ಚಾಳಿ  ಮುಂದುವರಿಸಿದ್ದ. ಆರೋಪಿ ಬಂಧನದಿಂದ ಯಲಹಂಕ ಠಾಣೆಯಲ್ಲಿ ದಾಖಲಾಗಿದ್ದ ಮೂರು  ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.

ಇಬ್ಬರು ಕಳ್ಳರ ಬಂಧನ: ಮತ್ತೊಂದು ಪ್ರಕರಣದಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿರುವ  ಯಲಹಂಕ ಪೊಲೀಸರು 92 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಯಲಹಂಕದ ಭಾರತೀನಗರ ನಿವಾಸಿ ಲಕ್ಷ್ಮೀನಾರಾಯಣ (28) ಮತ್ತು ಚಂದ್ರಬಾಬು ಬುಡ್ಡ(19)  ಬಂಧಿತರು.

ಆರೋಪಿಗಳು ಪರಿಚಯಸ್ಥರ ಅಂಗಡಿಯಲ್ಲಿಟ್ಟಿದ್ದ ಹಣ ಕಳವು ಮಾಡಿದ್ದರು. ಈ ಸಂಬಂಧ  ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು  ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ  ಬಂದಿತು ಎಂದು ಪೊಲೀಸರು  ತಿಳಿಸಿದರು.

ಬೈಕ್ ಕದ್ದ ಐವರು ಅಪ್ರಾಪ್ತರ ಸೆರೆ: ಐವರು ಬೈಕ್ ಕಳ್ಳರನ್ನು ಬಂಧಿಸಿರುವ ಯಲಹಂಕ  ಪೊಲೀಸರು 5 ಲಕ್ಷ ಮೌಲ್ಯದ 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕದ  ಶ್ರೀನಿವಾಸಪುರ ನಿವಾಸಿ ಸುಹೇಲ್(16),    ರ ಲೇಔಟ್‍ನ ನದೀಂ (14), ಅಪ್‍ಷಾನ್  ಪಾಷ  12), ಚಿಂತಾಮಣಿಯ ಕಾರ್ಗಿಲ್ ಆಶ್ರಯ  ಬಡಾವಣೆಯ ಅಬ್‍ಜಲ್ (15) ಹಾಗೂ ಫಯಜ್  ಮಹಮ್ಮದ್ (15) ಬಂಧಿತರು.

ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ 5 ಲಕ್ಷ ಮೌಲ್ಯದ 10 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಐವರು  ಅಪ್ರಾಪ್ತ ಬಾಲಕರು ಶೋಕಿ ಹಾಗೂ ಬೈಕ್ ಓಡಿಸುವ ಆಸೆಯಿಂದ ನಕಲಿ ಕೀ ಬಳಸಿ ಬೈಕ್  ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!