ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜನೌಷಧಕ್ಕೆ ಪರ್ಯಾಯವಾಗಿ ಜನಸಂಜೀವಿನಿ ಕೇಂದ್ರ ಸ್ಥಾಪನೆ

ಜನೌಷಧ ಕೇಂದ್ರಗಳಿಗೆ ಪಯಾರ್ಯವಾಗಿ ರಾಜ್ಯದಲ್ಲಿ ಜನಸಂಜೀವಿನಿ ಔಷಧ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ..

ಯು.ಟಿ.ಖಾದರ್ .
Shilpa D
Updated On : 16 Dec 2015, 9:39 am

ಜನೌಷಧ ಕೇಂದ್ರಗಳಿಗೆ ಪಯಾರ್ಯವಾಗಿ ರಾಜ್ಯದಲ್ಲಿ ಜನಸಂಜೀವಿನಿ ಔಷಧ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಅವರು, ಜನೌಷಧ ಯೋಜನೆಯನ್ನು 2008ರಲ್ಲಿ ಯುಪಿಎ ಸರ್ಕಾರ ಆರಂಭಿಸಿತು. ಯಾವ ರಾಜ್ಯ ಸರ್ಕಾರಗಳು ಉಚಿತ ಔಷಧ ವಿತರಣೆ ಮಾಡುವುದಿಲ್ಲವೋ, ಅಂಥ ಕಡೆಗಳಲ್ಲಿ ಮಾತ್ರ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಷನ್ ವರದಿ ನೀಡಿದೆ. ಜನೌಷಧಕ್ಕೆ ಪರ್ಯಾಯವಾಗಿ ನಾವು ಜನಸಂಜೀವನಿ ಯೋಜನೆ ಜಾರಿಗೆ ತರುತ್ತಿದ್ದೇವೆ
ಎಂದು ಹೇಳಿದರು.

ಜನೌಷಧ ಕೇಂದ್ರಗಳಲ್ಲಿ ಸಾಮಾನ್ಯವಾಗಿ 361 ಔಷಧಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಜನಸಂಜೀವಿನಿ ಕೇಂದ್ರದಲ್ಲಿ 1000ಕ್ಕೂ ಹೆಚ್ಚು ಔಷಧಗಳನ್ನು ಶೇ.50ರಿಂದ ಶೇ.80ರಷ್ಟು ರಿಯಾಯಿತಿ ದರದಲ್ಲಿ ಮಾರಲಾಗುತ್ತದೆ. ಜನವರಿ ತಿಂಗಳ ಮಧ್ಯ ಭಾಗದಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಬೌರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನಸಂಜೀವಿನಿ ಕೇಂದ್ರ ತೆರೆಯಲಾಗುವುದು.

ಜೂನ್ ಅಂತ್ಯದ ವೇಳೆಗೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜನಸಂಜೀವಿನಿ ಯೋಜನೆ ಆರಂಭಿಸಲಾಗುವುದು ಎಂದು ಹೇಳಿದರು. ಜನೌಷಧ ಕೇಂದ್ರಗಳಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆಯೂ ಆರೋಪಗಳಿವೆ. ಆದರೆ ನಾವು ಇದರ ಜವಾಬ್ದಾರಿಯನ್ನು ಹಿಂದೂಸ್ತಾ ನ್ ಲೈವ್ ಲಿಮಿಟೆಡ್ ಸಂಸ್ಥೆಗೆ ನೀಡಿದ್ದೇವೆ. ಹೊರ ರೋಗಿ, ಒಳರೋಗಿಗಳಿಗೂ ಇಲ್ಲಿ ಔಷಧ ನೀಡಲಾಗುತ್ತದೆ. ಇದು ಕೇಂದ್ರಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ಅವರ ಮೇಲೂ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement