ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬೆಂಗಳೂರಿನಲ್ಲಿ ಕಸ ವಿಂಗಡಣೆ ಕಡ್ಡಾಯ, ಹೈಕೋರ್ಟ್‌ನಿಂದ ಹೊಸ ಸೂತ್ರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಈ ಸಂಬಂಧ ಹೊಸ ಸೂತ್ರ ರೂಪಿಸಿದೆ.

ಹೈಕೋರ್ಟ್
Lingaraj Badiger
Updated On : 17 Dec 2015, 6:45 am

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಈ ಸಂಬಂಧ ಹೊಸ ಸೂತ್ರ ರೂಪಿಸಿದೆ.

ಕಸ ವಿಂಗಡಣೆ ಹಾಗೂ ತ್ಯಾಜ್ಯ ನಿರ್ವಹಣೆ ಸಮಸ್ಯೆ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಧ್ಯಂತರ ಆದೇಶ ಹೊರಡಿಸಿದ್ದು, 2 ಇನ್ 1 ಬ್ಯಾಗ್ ಪದ್ದತಿ ಪಾಲಿಸುವಂತೆ ಸೂಚಿಸಿದೆ.

ಪ್ಲಾಸ್ಟಿಕ್ ಕವರ್‌ನಲ್ಲಿ ಕಸ ಸಂಗ್ರಹಿಸಬಾರದು ಎಂದು ಹೇಳಿರುವ ಕೋರ್ಟ್, ಪ್ರತ್ಯೇಕ ಡಬ್ಬಗಳಲ್ಲಿ ಕಸ ಸಂಗ್ರಹಿಸುವಂತೆ ಸೂಚಿಸಿದೆ. ಹಸಿರು ಬಣ್ಣದ ಬುಟ್ಟಿಯಲ್ಲಿ ಅಡುಗೆ ಮನೆ ತ್ಯಾಜ್ಯ ಹಾಗೂ ಕೆಂಪು ಬುಟ್ಟಿಯಲ್ಲಿ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸುವಂತೆ ಸೂಚಿಸಿದೆ. ಅಲ್ಲದೆ ತಪ್ಪಿದಲ್ಲಿ ಕೆಎಂಸಿ ಕಾಯ್ದೆ ಅನ್ವಯ ಶಿಕ್ಷಿಸಲು ಕೋರ್ಟ್ ಆದೇಶ ನೀಡಿದೆ.

ನಗರದ ಹೋಟೆಲ್, ಶಾಲೆ ಹಾಗೂ ಸರ್ಕಾರಿ ಕಚೇರಿಗಳೂ ಈ ಸೂತ್ರ ಅನ್ವಯವಾಗಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement