ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನಿತ್ಯ ಪೂಜೆಗೆ ರಾಯರ ಮಠಕ್ಕೂ ಅವಕಾಶ: ಹೈಕೋರ್ಟ್ ಪೀಠದ ಆದೇಶ

ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ರಾಯರ ಮಠದವರೂ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿ ಧಾರವಾಡದ ಹೈಕೋರ್ಟ್ ಪೀಠ ....

ಕರ್ನಾಟಕ ಹೈಕೋರ್ಟ್
Shilpa D
Updated On : 17 Dec 2015, 11:45 am

ಧಾರವಾಡ: ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ರಾಯರ ಮಠದವರೂ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿ ಧಾರವಾಡದ ಹೈಕೋರ್ಟ್ ಪೀಠ ಆದೇಶ ನೀಡಿದೆ. ವಾರದ ಹಿಂದೆ ಉತ್ತರಾದಿ ಮಠಕ್ಕೆ ಆಸ್ತಿ ಹಾಗೂ ಪೂಜೆ ಹಕ್ಕು ಇದೆ ಎಂಬ ಸಿವಿಲ್ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಹೈಕೋರ್ಟ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ ರಾಯರ ಮಠಕ್ಕೂ ಪೂಜೆ, ಆರಾಧನೆಗೆ ಅವಕಾಶ ನೀಡಲು ಮನವಿ ಮಾಡಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಡಿ.16ರಂದು ನ್ಯಾ. ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ ವಾದ-ಪ್ರತಿವಾದ ಆಲಿಸಿ ರಾಯರ ಮಠಕ್ಕೆ ನಿತ್ಯಪೂಜೆಗೆ ಅನುಮತಿ ನೀಡಿ ಆದೇಶವಿತ್ತಿದ್ದಾರೆ. ಮೊದಲಿನಿಂದಲೂ ನಾವು ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದೆವು. ಆದರೆ ಉತ್ತರಾದಿ ಮಠದ ಪರ ಆದೇಶ ಬಂದಿತ್ತು, ಇದನ್ನೇ ಪ್ರಶ್ನಿಸಿ ಹೈಕೋರ್ಟ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರಿಂದ ನ್ಯಾಯಪೀಠ ಈ ಆದೇಶ ನೀಡಿದೆ ಎಂದು ರಾಯರ ಮಠದ ಪರ ವಾದ ಮಂಡಿಸಿದ ಕಾನೂನು ಸಲಹೆಗಾರ ಡಿ.ಕೆ. ಶ್ರೀನಿವಾಸ್ ಕನ್ನಡಪ್ರಭಕ್ಕೆ ತಿಳಿಸಿದರು. ಎರಡನೇ ಅಪೀಲು ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಗಂಗಾವತಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಭಕ್ತರು ಪಟಾಕಿ ಸಿಡಿಸಿ  ವಿಜಯೋತ್ಸವ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement