ಬೆಂಗಳೂರು: ನಗರವನ್ನು ಹಸಿರಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಲು ಹಾಗೂ ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ, ಸ್ವಯಂ-ಚಾಲಿತ ಬಾಡಿಗೆ ಕಾರು ಕಂಪನಿ ‘ಝೂಂಕಾರ್, ಜನಾಗ್ರಹ (ichangemycity) ಹಾಗೂ ನಗರ ಪೊಲೀಸರ ಸಹಯೋಗದೊಂದಿಗೆ myCleanBangalore ಎಂಬ ವಿಶೇಷ ಅಭಿಯಾನಕ್ಕೆ ಚಾಲನೆ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ ವಿಭಾಗ) ಎಂ.ಎ. ಸಲೀಂ ಅವರು ಸೋಮವಾರ ಚಾಲನೆ ನೀಡಿದರು.
ಮಹೀಂದ್ರ ಇ20 ಕಾರಿನ ಮೇಲೆ ತಮ್ಮ ನಿರ್ಣಯಗಳನ್ನು ಬರೆಯುವ ಮೂಲಕ, ನಗರವನ್ನು ಸ್ವಚ್ಛಗೊಳಿಸಲು ಹಾಗೂ ಹಸಿರುಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ನಗರದ ಜನರು ಪ್ರತಿಜ್ಞೆ ಮಾಡುವಂತೆ ಆಹ್ವಾನಿಸುವುದು ಈ ಅಭಿಯಾನದ ಕಲ್ಪನೆಯಾಗಿದೆ. ಪರಿಸರ ಸಂಬಂಧಿತ ಸಂದೇಶವಿರುವ ಈ ಕಾರು, ನಗರದಾದ್ಯಂತ ಸಂಚರಿಸಿ, ಬೆಂಗಳೂರು ನಗರದ ಯುವಜನರಲ್ಲಿ ಅರಿವನ್ನು ಮೂಡಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಝೂಂಕಾರ್ನ ಸಿಇಒ ಗ್ರೆಗ್ ಮೊರನ್ ಅವರು, “ಸ್ವಚ್ಛ ಹಾಗೂ ಹಸಿರು ಬೆಂಗಳೂರಿಗಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡುವುದು ಹಾಗೂ ಕೊಡುಗೆ ನೀಡುವುದು ಬಹಳ ಅವಶ್ಯಕ ಹಾಗೂ ನಿರ್ಣಾಯಕ. ಝೂಂಕಾರ್ನಲ್ಲಿ ನಾವು ಈ ಕಾಳಜಿಗಾಗಿ ಬದ್ಧರಾಗಿದ್ದೇವೆ ಹಾಗೂ ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಸದಾ ತೊಡಗಿಸಿಕೊಳ್ಳುತ್ತೇವೆ. ಈ ಅಭಿಯಾನದ ಮೂಲಕ ನಾವು ಬೆಂಗಳೂರು ನಗರದ ಯುವ ಜನರನ್ನು ತಲುಪಿ, ನಗರದ ಸುಧಾರಣೆ ಹಾಗೂ ಮಾಲಿನ್ಯವನ್ನು ಕಡಿಮೆಗೊಳಿಸುವ ಸಂದೇಶವನ್ನು ಹರಡುವ ಗುರಿಯನ್ನು ಹೊಂದಿದ್ದೇವೆ ಎಂದರು.