ಜಿಲ್ಲಾ ಸುದ್ದಿ

ಡಾ. ಮಹೇಶ್ವರಯ್ಯ, ಡಾ. ಜಯಲಕ್ಷ್ಮಿ ಸೇರಿ 32 ಕಲಾವಿದರಿಗೆ ಜಾನಪದ ಪ್ರಶಸ್ತಿ

Sumana Upadhyaya

ವಿಜಯಪುರ: ಜಾನಪದ ತಜ್ಞರು, ವಿದ್ವಾಂಸರಾದ ಧಾರವಾಡ ದ ಡಾ.ಎಚ್.ಎಂ.  ಮಹೇಶ್ವರಯ್ಯ ಹಾಗೂ ಮೈಸೂರಿನ ಡಾ. ಜಯಲಕ್ಷ್ಮಿ  ಸೀತಾಪುರ ಹಾಗೂ 30  ಕಲಾವಿದರು    14ನೇ ಸಾಲಿನ ಜಾನಪದ ಅಕಾಡೆಮಿ  ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಹೊರತುಪಡಿಸಿ ವಿಜಯಪುರದಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದೆ. ಈ  ಹಿಂದೆ ಕಲಬುರಗಿಯಲ್ಲಿ ಡಿಸೆಂಬರ್ 27ರಂದು  ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪರಿಷತ್ ಚುನಾವಣೆ ನೀತಿ ಸಂಹಿತೆ  ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವ ನ್ನು ಜನವರಿ ಮೊದಲ ವಾರಕ್ಕೆ  ದೂಡಲಾಗಿದೆ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಪ್ರಕಟಿಸಿದರು.

ಇದೇ ಸಂದರ್ಭದಲ್ಲಿ ಜಾನಪದ ಕ್ಷೇತ್ರದ ಇಬ್ಬರು ವಿದ್ವಾಂಸರಿಗೆ 10,000 ನಗದು ಪ್ರಶಸ್ತಿ  ನೀಡಲಾಗುವುದು. ರಾಜ್ಯದ ಪ್ರತಿ ಜಿಲ್ಲೆಗೆ ಒಬ್ಬ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ  ಮಾಡಲಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತರ ವಿವರ: ವಿಜಯಪುರ ಜಿಲ್ಲೆಯ ಮಲಕಾರಿ ಸಂಗಪ್ಪ ಕಟಗೇರಿ(ಕರಡಿ ಮಜಲು), ಮೈಸೂರು- ಸಣ್ಣಮ್ಮ (ಸಂಪ್ರದಾ-  ಯದ ಪದ), ಬಾಗಲಕೋಟೆ-ಗಣಪತಿ   ಪ್ಪ  ಕಾಳೆ (ಗೊಂದಲಿಗರ ಪದ),  ಬೆಂಗಳೂರು ನಗರ- ಡಿವಿಜನ್ (ಹಕ್ಕಿಪಿಕ್ಕಿ ಕಥೆ ಹೇಳುವವರು),  ಮಂಡ್ಯ-ಆರ್. ಶಿವಣ್ಣೇ ಡ(ಪಟಾ ಕುಣಿತ), ಕೊಪ್ಪಳ-ಕಕ್ಷ್ಮವ್ವ ಅಡೂರ ಚಲವಾದಿ(ಗೀ ಗೀ     ),  ಹಾವೇರಿ-ಬಸವಣ್ಣೆಪ್ಪ ವಿ. ಅಟವಾಳಗಿ (ಪುರವಂತಿಕೆ), ರಾಮನಗರ-ಮಾಯಮ್ಮ   (ಬೀಸುವ ಪದ), ಚಿಕ್ಕ ಬಳ್ಳಾಪುರ-ಲಕ್ಷ್ಮಮ್ಮ(ವೀರಗಾಸೆ), ತುಮಕೂರು-ಗಂಗ ಹುಚ್ಚಮ್ಮ     (ಸೋಬಾನೆ ಹಾಗೂ ಸಂಪ್ರದಾಯ ಪದ), ಬೆಳಗಾವಿ-ಗುಲಚಾರ ಅಹ್ಮದ್ (ಫಕೀರರ ಹಾಡು),   ದರ್-ಸುಭಾಷ್ ಸೈಬಣ್ಣ ಪೂಜಾರಿ (ಹಂತಿಪದ), ರಾಯಚೂರು--  ಸಂಗನಗೌಡ  (ಭಜನೆ ಪದ), ದಾವಣಗೆರೆ-ಎಂ.  ವೀರಪ್ಪ (ನಾಟಿ ಪಶು ವೈದ್ಯ ), ಯಾದಗಿರಿ- ಮೈಲಾರಪ್ಪ     ಸಗರ (ಡೊಳ್ಳಿನ  ಪದ), ಶಿವಮೊಗ್ಗ-ಪುಷ್ಪ (ಮಹಿಳಾ ಡೊಳ್ಳು ಕುಣಿತ),  ಕೋಲಾರ- ತೋಟಿ ಮುನಿಯಮ್ಮ (ಕಥನ ಗೀತೆಗಳು), ಧಾರವಾಡ-ಈರಪ್ಪ   ಗಂಗಪ್ಪ ಕತ್ತಿ (ಹೆಜ್ಜೆ ಮೇಳ), ದಕ್ಷಿಣ  ಕನ್ನಡ-ಪದ್ಮ ಪಂಬದ (ಭೂತ ನರ್ತನ),  ಚಿಕ್ಕಮಗಳೂರು-  ದಾಕ್ಷಾಯಣಮ್ಮ (ಲಾವಣಿ  ಪದ), ಕೊಡಗು-ಕುಡಿಯರ ಶಾರದ (ದುಡಿ ಕುಣಿತ),  ಹಾಸನ-ಲಕ್ಷ್ಮಮ್ಮ (ತಂಬೂರಿ ಪದ ) , ಚಿತ್ರದುರ್ಗ-ಮೈಲಾರಪ್ಪ (ಜನಪದ ಆಚರಣೆ,        ಗದಗ-ಯಲ್ಲಪ್ಪ ಗುಡಾರದ (ಜಗ್ಗ  ಗೆ),  ಉತ್ತರ ಕನ್ನಡ-ಸುಮಿತ್ರ (ಜನಪದ ವೈದ್ಯೆ), ಕಲಬುರಗಿ-ದೌಲತಬಾಯ್ ಬಸಣ್ಣ(ಬೀಸು ಕಲ್ಲಿನ ಪದ), ಚಾಮರಾಜನಗರ-ತಾಯಮ್ಮ      (ಸಂಪ್ರದಾಯದ ಪದ )  ಬಳ್ಳಾರಿ-ರಾಮವ್ವ ಜೋಗತಿ (ಜೋಗತಿ) ಹಾಗೂ ಉಡುಪಿ ಜಿಲ್ಲೆಯ   ದು ಕೊರಗ(ಕೊರಗರ ಡೋಲು) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  

ದಲ್ಲದೆ ಜಾನಪದ ಕ್ಷೇತ್ರದ ವಿದ್ವಾಂಸರಾದ ಧಾರವಾಡ ಜಿಲ್ಲೆಯ ಡಾ.ಎಚ್.ಎಂ.  ಮಹೇಶ್ವರಯ್ಯ ಹಾಗೂ ಮೈಸೂರು ಜಿಲ್ಲೆಯ ಡಾ.ಜಯಲಕ್ಷ್ಮಿ ಸೀತಾಪುರ ಅವರ ನ್ ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

SCROLL FOR NEXT