ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಬೈಕ್ ಅಪಘಾತ: ಓರ್ವ ಸಾವು

ಯಶವಂತಪುರ ಮೇಲ್ಸೇತುವೆಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್‍ವೊಂದು ಮುಂದಿನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ...

ಬೆಂಗಳೂರು: ಯಶವಂತಪುರ ಮೇಲ್ಸೇತುವೆಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ  ಬೈಕ್‍ವೊಂದು ಮುಂದಿನ ಬೈಕ್‍ಗೆ  ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟು,   ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ  ತಡರಾತ್ರಿ ನಡೆದಿದೆ.

ಹಾವೇರಿ ಮೂಲದ ಅಕ್ಷಯ್ ನಾಯರಿ (21) ಮೃತಪಟ್ಟವರು. ಆಸೀಫ್ ಖಾನ್ (21) ಮತ್ತು  ಮುದ್ದುಕೃಷ್ಣ (21) ಗಾಯಗೊಂಡವರು. ಮೂವರು ಸ್ನೇಹಿತರು ರಾತ್ರಿ ಹೆಬ್ಬಾಳದ  ಆಲ್‍ಬೇಕ್‍ನಲ್ಲಿ ಊಟ ಮುಗಿಸಿ ಮನೆಗೆ ವಾಪಸ್ ಬರುವಾಗ ಈ ಘಟನೆ ಜರುಗಿದೆ.
 ವೈದ್ಯಕೀಯ  ಪುಸ್ತಕಗಳ ವ್ಯಾಪಾರಿ ಅಕ್ಷಯ್ ನಾಯರಿ ಮತ್ತು ಡ್ರೈ ಫ್ರೂಟ್ಸ್ ವ್ಯಾಪಾರಿ ಆಸೀಫ್   ಖಾನ್ ರಾಜಾಜಿನಗರದ ಪಿಜಿವೊಂದರಲ್ಲಿ ನೆಲೆಸಿದ್ದಾರೆ. ಹಾವೇರಿಯ ಮುದ್ದುಕೃಷ್ಣ, ಸ್ನೇಹಿತರನ್ನು  ನೋಡಲು ಸೋಮವಾರ ಬೆಂಗಳೂರಿಗೆ ಬಂದಿದ್ದ. ಬಹಳ ದಿನಗಳ  ನಂತರ ಸ್ನೇಹಿತ ಬಂದಿದ್ದರಿಂದ  ಮೂವರು ಸ್ನೇಹಿತರು ರಾತ್ರಿ ಎರಡು ಬೈಕ್‍ಗಳಲ್ಲಿ ಹೆಬ್ಬಾಳದ ಆಲ್‍ಬೇಕ್  ಹೊಟೇಲ್ ಗೆ  ಊಟಕ್ಕೆ ಹೋಗಿದ್ದರು.

ಊಟದ ಬಳಿಕ ರಾಜಾಜಿನಗರದ ಪಿಜಿಗೆ ವಾಪಸಾಗಲು ಬೈಕ್ ಏರಿದ್ದಾರೆ. ಮುದ್ದುಕೃಷ್ಣ    ಪಲ್ಸರ್  ಬೈಕ್‍ನಲ್ಲಿ ಮುಂದೆ ಬಂದರೆ, ಆಸೀಫ್ ಖಾನ್ ಮತ್ತು ಅಕ್ಷಯ್  ನಾಯರಿ ಯಮಹಾ  ಎಫ್ 2  ಬೈಕ್‍ನಲ್ಲಿ ಹಿಂದೆ ಬಂದಿದ್ದಾರೆ. ರಾತ್ರಿ 12.30ರ ಸುಮಾರಿನಲ್ಲಿ ಯಶವಂತಪುರ   ಮೇಲ್ಸೇತುವೆಯಲ್ಲಿ ತಿರುವು ಎದುರಾಗಿ ಮುದ್ದುಕೃಷ್ಣ ತಮ್ಮ ಬೈಕ್ ವೇಗ ಕಡಿಮೆ ಮಾಡಿದ್ದಾರೆ. ಆದರೆ ಹಿಂದಿನ ಬೈಕ್‍ನಲ್ಲಿ ವೇಗವಾಗಿ ಬರುತ್ತಿದ್ದ ಆಸೀಫ್ ಖಾನ್ ನಿಯಂತ್ರಣ   ಕಳೆದುಕೊಂಡು ಮುದ್ದುಕೃಷ್ಣ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಎರಡು ಬೈಕ್‍ಗಳ   ಸವಾರರು ಗಾಯಗೊಂಡಿದ್ದು, ಹಿಂಬದಿ ಸವಾರ ಅಕ್ಷಯ್ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ    ಸ್ಥಳೀಯರು ಮೂವರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಕ್ಷಯ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯಸಿರೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ