ಬೆಂಗಳೂರು: ನಾಲ್ವರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ ಹಣ ಸುಲಿದು ಪರಾರಿಯಾಗಿರುವ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಬೊಮ್ಮನಹಳ್ಳಿ ನಿವಾಸಿ ದೇವಪ್ಪ (27) ಹಲ್ಲೆಗೆ ಒಳಗಾಗಿ ಹಣ ಕಳೆದುಕೊಂಡವರು. ಟ್ರಾವೆಲ್ಸ್ ವೊಂದರಲ್ಲಿ ಚಾಲಕನಾಗಿರುವ ರಾತ್ರಿ 8 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಗೆ ಹೋಗಲು ರಿಂಗ್ ರಸ್ತೆ ಸಮೀಪದ ಮಾಳಗಾಲ ಸರ್ವಿಸ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಟೆಂಪೋ ಟ್ರಾವೆಲರ್ ವಾಹನದಲ್ಲಿ ಬಂದ ನಾಲ್ವರು, ವಿಳಾಸ ಕೇಳುವ ನೆಪದಲ್ಲಿ ದೇವಪ್ಪನ ಸಮೀಪ ಬಂದಿದ್ದಾರೆ. ಬಳಿಕ ಒಬ್ಬಾತ ಚೀಟಿವೊಂದನ್ನು ತೋರಿಸುತ್ತಿದ್ದಾಗ ಉಳಿದ ಮೂವರು ದೇವಪ್ಪನನ್ನ ವಾಹನದೊಳಗೆ ಎಳೆದು ಕೊಂಡಿದ್ದಾರೆ.
ಸ್ವಲ್ಪ ದೂರು ವಾಹನ ಚಲಾಯಿಸಿ, ದೇವಪ್ಪನ ಬಳಿಯಿದ್ದ ಸ್ವಲ್ಪ ಹಣ ಕಸಿದುಕೊಂಡು ಚಾಕುವಿನಿಂದ ಹಲ್ಲೆ ನಡೆಸಿ ವಾಹನದಿಂದ ಹೊರಕ್ಕೆ ತಳ್ಳಿದ್ದಾರೆ. ಈ ಕುರಿತು ದೇವಪ್ಪ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.