ಲೋಕಾಯುಕ್ತಕ್ಕೆ ದೂರು ನೀಡುತ್ತಿರುವ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಮತ್ತು ಅಶ್ವತ್ಥ ನಾರಾಯಣ 
ಜಿಲ್ಲಾ ಸುದ್ದಿ

ತುಂಗಾ ನಾಲೆ ಆಧುನೀಕರಣ ಕಾಮಗಾರಿ ವಿರುದ್ಧ ಲೋಕಕ್ಕೆ ದೂರು ಕೊಟ್ಟ ಬಿಜೆಪಿ ನಿಯೋಗ

ಶಿವಮೊಗ್ಗದಲ್ಲಿ ನಡೆಯುತ್ತಿರುವ ತುಂಗಾ ಎಡ ಹಾಗೂ ಬಲದಂಡೆ ಆಧುನೀಕರಣ ಕಾಮಗಾರಿಯಲ್ಲಿ ನಡೆದ ಅಕ್ರಮ ಕುರಿತ ದೂರು ನೀಡಲು ಬಿಜೆಪಿ ನಿಯೋಗ...

ಬೆಂಗಳೂರು: ಶಿವಮೊಗ್ಗದಲ್ಲಿ ನಡೆಯುತ್ತಿರುವ ತುಂಗಾ ಎಡ ಹಾಗೂ ಬಲದಂಡೆ ಆಧುನೀಕರಣ ಕಾಮಗಾರಿಯಲ್ಲಿ ನಡೆದ ಅಕ್ರಮ ಕುರಿತ ದೂರು ನೀಡಲು ಬಿಜೆಪಿ ನಿಯೋಗ ಸತತ ಮೂರುವರೆ ತಾಸು ಲೋಕಾಯುಕ್ತ ಕಚೇರಿಯಲ್ಲೇ ಕಾದ ಪ್ರಸಂಗ ಸೋಮವಾರ ನಡೆಯಿತು.

ಸೋಮವಾರ ಬೆಳಗ್ಗೆ 12 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕ ಸುರೇಶ್ ಕುಮಾರ್ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಿಯೋಗ ದೂರು ನೀಡಲು ನೇರವಾಗಿ ರಿಜಿಸ್ಟ್ರಾರ್ ಕೊಠಡಿಗೆ ತೆರಳಿತು.

ಆದರೆ, ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತ ರಿಜಿಸ್ಟ್ರಾರ್ ನೇರವಾಗಿ ದೂರು ಸ್ವೀಕರಿಸುವಂತಿಲ್ಲ. ಜೊತೆಗೆ ಈಶ್ವರಪ್ಪ ಅವರ ಬಳಿ ಸೂಕ್ತ ದಾಖಲೆಗಳು ಇರಲಿಲ್ಲ. ಹಾಗಾಗಿ ಲೋಕಾಯುಕ್ತ ರಿಜಿಸ್ಟ್ರಾರ್ ಬಾಲಕೃಷ್ಣ ಅವರು ದೂರು ಸ್ವೀಕರಿಸಲು ಮೀನಾಮೇಷ ಎಣಿಸಿದರು. ನಂತರ ರಿಜಿಸ್ಟ್ರಾರ್ ಬಾಲಕೃಷ್ಣ ಅವರು, ಕಾನೂನು ತಜ್ಞರ ಜೊತೆ ಚರ್ಚೆ ಕೂಡ ನಡೆಸಿದರು.

ಕೊನೆಗೆ ನಿಯೋಗ ಮಧ್ಯಾಹ್ನ 3.30ಕ್ಕೆ ದೂರು ಸಲ್ಲಿಸಿತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಯೋಜನೆ ಕಾರ್ಯಪಾಲ ಅಭಿಯಂತರರ ವಿರುದ್ಧ ದೂರು ನೀಡಿದ್ದೇವೆ. ತುಂಗಾ ಎಡ ಮತ್ತು ಬಲ ದಂಡೆ ಆಧುನೀಕರಣ ಕಾಮಗಾರಿ ನಡೆಸಲು ರಾಮಲಿಂಗಂ ಕನ್‍ಸ್ಟ್ರಕ್ಷನ್ ಕಾರ್ಪೋರೇಷನ್ ಕಂಪನಿಗೆ ಟೆಂಡರ್ ನೀಡುವ ಉದ್ದೇಶದಿಂದ ಅಲ್ವಾವಧಿ ಟೆಂಡರ್ ಕರೆದಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಬೋರ್ಡ್ ಮೀಟಿಂಗ್ ನಲ್ಲಿ ಒಪ್ಪಿಗೆ ನೀಡದೆ, ರಾಜ್ಯ ಸರ್ಕಾರದೊಂದಿಗೆ ಗುತ್ತಿಗೆ  ಕರಾರು ಮಾಡಿಕೊಳ್ಳದೇ 127.30 ಕೋಟಿ ಟೆಂಡರ್ ವರ್ಕ್ ಆರ್ಡರ್ ಇಲ್ಲದೇ ಕಾಮಗಾರಿ ಆರಂಭಿಸಿದ್ದಾರೆ ಎಂದು ಆರೋಪಿ ಸಿದರು.

ಲೋಕಾಯುಕ್ತಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಕೊಟ್ಟಿದ್ದೇವೆ. ಪತ್ರಿಕಾ ಹೇಳಿಕೆಗಳು, ಫೋಟೋಗಳು ಮತ್ತಿತರ ಮಾಹಿತಿಗಳು, ದಾಖಲೆಗಳನ್ನು ಕೂಡ ನೀಡಿದ್ದೇವೆ. ಲೋಕಾಯುಕ್ತ ಕಚೇರಿಯಿಂದ ನೇರವಾಗಿ ಸಿಎಂ ಭೇಟಿ ಮಾಡಿದ ಈಶ್ವರಪ್ಪ ಪ್ರಕರಣದ ತನಿಖೆಯನ್ನು ಮಾಡುವಂತೆ ಮನವಿ ಸಲ್ಲಿಸಿದರು.

ಈಶ್ವರಪ್ಪ ಆರೋಪ ಏನು?

  •  ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ127.30 ಕೋಟಿಯ ಕಾಮಗಾರಿಗೆ ಅಲ್ಪಾವಧಿ ಟೆಂಡರ್
  • ಏಕೈಕ ಗುತ್ತಿಗೆದಾರ ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿ ಟೆಂಡರ್ ನೀಡಲಾಗಿದೆ
  •  ಕರ್ನಾಟಕ ನೀರಾವರಿ ನಿಗಮದ ಬೋರ್ಡ್ ಮೀಟಿಂಗ್‍ನಲ್ಲಿ ಕಾಮಗಾರಿಗೆ ಒಪ್ಪಿಗೆ ನೀಡಿಲ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ