ಬೆಂಗಳೂರು: ಅಬಕಾರಿ ಜಾಗೃತ ದಳದ ಉಪ ಆಯುಕ್ತ ಭರತೇಶ್ ಮತ್ತು ಜಯನಗರ ಸಾರಿಗೆ ಇಲಾಖೆ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಎಂ. ಜಯರಾಮ್ ಮನೆ ಮತ್ತು ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಲೋಕಾಯುಕ್ತ ಎಸ್‍ಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಶೇಷಾದ್ರಿಪುರಂನಲ್ಲಿರುವ ಅಬಕಾರಿ ಉಪ ಆಯುಕ್ತ ಭರತೇಶ್ ಮನೆ ಹಾಗೂ ಕಚೇರಿ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ್ದ 1.76 ಕೋಟಿ ರೂಪಾಯಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
1995ರಲ್ಲಿ ಅಬಕಾರಿ ಇಲಾಖೆಗೆ ಸೇರಿದ ಭರತೇಶ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು. ಭರತೇಶ್ ಅಕ್ರಮವಾಗಿ ಸಂಪಾದಿಸಿದ ಸ್ಥಿರಾಸ್ತಿ 65 .99 ಲಕ್ಷ, ಚರಾಸ್ತಿ 60 .57 ಲಕ್ಷ ರೂಪಾಯಿ. ಇವರ ಆದಾಯಕ್ಕೂ ಆಸ್ತಿ ಸಂಪಾದನೆಗೂ ವ್ಯತ್ಯಾಸವಿದ್ದು, ಆದಾಯ ಮೀರಿ 1 .76 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಇವರ ಆದಾಯ, ಆಸ್ತಿಗೂ ಶೇ.102.76 ವ್ಯತ್ಯಾಸವಿದೆ.