ಕೋಲಾರ: ಕೆರೆಯೊಂದರಲ್ಲಿ ಈಜಲು ಹೋದ ಐವರು ಬಾಲಕರು ನೀರು ಪಾಲಾದ ದಾರುಣ ಘಟನೆ ಗುರುವಾರ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಂಬಪಲ್ಲಿಯಲ್ಲಿ ನಡೆದಿದೆ.
ಮೃತರು ಕೆಜಿಎಫ್ ಪಟ್ಟಣದ ನಿವಾಸಿಗಳಾಗಿದ್ದು, ಸೈಯ್ಯದ್ ತೋಹಿದ್(16), ಸಿಲ್ವರ್ ಸ್ಟಾರ್, ವಸಂತ್ ಹಾಗೂ ನೀತಿಶ್ ಎಂದು ಗುರುತಿಸಲಾಗಿದೆ.
ಮೃತರಲ್ಲಿ ನಾಲ್ವರ ಶವ ಪತ್ತೆಯಾಗಿದ್ದು ,ಇನ್ನೋರ್ವನ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ಈ ಸಂಬಂಧ ಆ್ಯಂಡರ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.