ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಡಿಟರ್ಜೆಂಟ್ ನಲ್ಲಿ ಪಾಸ್ಫೇಟ್ ಬಳಕೆ ನಿಷೇಧ: ಜಾವ್ಡೇಕರ್

ಜನ ಸಾಮಾನ್ಯರು ಬಳಸುವ ಡಿಟರ್ಜೆಂಟ್ ನಲ್ಲಿ ಪಾಸ್ಫೇಟ್ ಬಳಕೆ ನಿಷೇಧಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್
Srinivas Rao BV
Updated On : 1 Jan 2016, 12:30 pm

ಬೆಂಗಳೂರು: ಜನ ಸಾಮಾನ್ಯರು ಬಳಸುವ ಡಿಟರ್ಜೆಂಟ್ ನಲ್ಲಿ ಪಾಸ್ಫೇಟ್ ಬಳಕೆ ನಿಷೇಧಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

ಐಐಎಸ್ಸಿ ಎನರ್ಜಿ ಆಂಡ್ ವೆಟ್ ಲ್ಯಾಂಡ್ ರಿಸರ್ಚ್ ಗ್ರೂಪ್ ಹಾಗೂ ವರ್ಲ್ಡ್ ಆರ್ಗನೈಸೇಶನ್ ಆಫ್ ಸ್ಟೂಡೆಂಟ್ಸ್ ಆಂಡ್ ಯೂತ್ ಹಮ್ಮಿಕೊಂಡಿದ್ದ `ವಾತಾವರಣದಲ್ಲಿನ ಬದಲಾವಣೆ ಮತ್ತು ನಿಯಂತ್ರಣ' ಕುರಿತ ವಿಚಾರ ಸಂಕಿರಣದಲ್ಲಿ ಸಚಿವರು ಈ ವಿಚಾರ ಪ್ರಸ್ತಾಪಿಸಿದರು.

ಕಿರಿಯ ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ಡಿಟರ್ಜೆಂಟ್‍ನಲ್ಲಿ ಪಾಸ್ಫೇಟ್ ಬಳಕೆಯಿಂದಾಗುತ್ತಿರುವ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ, ಇದನ್ನು ನಿಷೇಧಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಸಚಿವರು ಐಐಎಸ್ಸಿ  ವಿಜ್ಞಾನಿಗಳ ತಂಡ ಡಿಟಜೆಂಟ್ ನಲ್ಲಿನ ಪಾಸ್ಫೇಟ್ ಅಂಶದಿಂದ ಆಗುತ್ತಿರುವ ಹಾನಿಯ ಬಗ್ಗೆ ವರದಿ ನೀಡಿದ್ದಾರೆ. ಇದರ ಆಧಾರದಲ್ಲಿ ನಾನು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಬಯಸುತ್ತೇನೆ. ನಂತರ  ಡಿಟಜೆಂಟ್ ನಲ್ಲಿನ ಪಾಸ್ಫೇಟ್  ಬಳಕೆ ನಿಷೇಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. 

ಈ ಮುನ್ನ ಸಮಾರೋಪ ಭಾಷಣ ಮಾಡಿದ ಜಾವ್ಡೇಕರ್, ಹವಾಮಾನ ವೈಪರೀತ್ಯದಲ್ಲಿ ಮುಂದುವರಿದ ದೇಶಗಳ ಪಾಲು ದೊಡ್ಡದಿದೆ. ಆದರೆ, ಅತಿ ಹೆಚ್ಚು ಮಾಲಿನ್ಯಗೊಳ್ಳುತ್ತಿರುವ ದೇಶ ಎಂದು ಭಾರತದತ್ತ ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಇಂದು ಭಾರತ ಸಹ ಹವಾಮಾನ್ಯ ವೈಪರೀತ್ಯಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಎಲ್ಲರೊಂದಿಗೆ ಕೈ ಜೋಡಿಸುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement