ಜಿಲ್ಲಾ ಸುದ್ದಿ

ಹೊಸ ವರ್ಷ ಪಾರ್ಟಿ: ಕುಡಿದ ಮತ್ತಿನಲ್ಲಿದ್ದ ಯುವಕ ಕಟ್ಟಡದಿಂದ ಬಿದ್ದು ಸಾವು

Vishwanath S

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ವೈಟ್ ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಯೋಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಶಿವಕೃಷ್ಣ(25) ಮೃತ ದುರ್ದೈವಿ. ಆಂಧ್ರಪ್ರದೇಶವನಾದ ಶಿವಕೃಷ್ಣ ಸ್ನೇಹಿತರ ಜತೆ ಸೇರಿ ವೈಟ್ ಫೀಲ್ಡ್ ನ ನಲ್ಲೂರಹಳ್ಳಿಯ ವೃತ್ತದಲ್ಲಿದ್ದ ಕಟ್ಟಡದಲ್ಲಿ ರೂಂ ಮಾಡಿಕೊಂಡಿದ್ದನು.

ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿ ಹೊಸ ವರ್ಷದ ಪಾರ್ಟಿ ಮಾಡಿದ್ದು, ರಾತ್ರಿ 1.30ರಲ್ಲಿ ಶಿವಕೃಷ್ಣ ಹೊರಗೆ ಬಂದಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಸ್ನೇಹಿತರು ಹೊರಗೆ ಬಂದು ನೋಡಿದಾಗ, ಆತ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವುದು ತಿಳಿದಿದೆ.

ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

SCROLL FOR NEXT