ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ 
ಜಿಲ್ಲಾ ಸುದ್ದಿ

ನಾನು ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ತನಿಖೆ ಆಗಲಿ

ಅರ್ಕಾ-ವತಿ ಅಷ್ಟೇ ಏಕೆ, ತಾವು ಮುಖ್ಯಮಂತ್ರಿ ಆಗಿದ್ದ ಕಾಲದಿಂದ ಈವರೆಗಿನ ಎಲ್ಲ ಡಿನೋಟಿಫಿಕೇಶನ್...

ದಾವಣಗೆರೆ: ಅರ್ಕಾ-ವತಿ ಅಷ್ಟೇ ಏಕೆ, ತಾವು ಮುಖ್ಯಮಂತ್ರಿ ಆಗಿದ್ದ ಕಾಲದಿಂದ ಈವರೆಗಿನ ಎಲ್ಲ ಡಿನೋಟಿಫಿಕೇಶನ್ ತನಖೆ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅರ್ಕಾ-ವತಿ ಡಿನೋಟಿಫಿಕೇಷನ್ ಪ್ರಕರಣ ಬಿಜೆಪಿಯ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದ್ದು. ಸದ್ಯ ಅರ್ಕಾವತಿ ವಿಚಾರದಲ್ಲಿ ಬಿಜೆಪಿ ಯಲ್ಲೇ ಎರಡು ಬಣಗಳಾಗಿವೆ. ಒಂದು ಬಣ ತನಿಖೆ ನಡೆಯಬೇಕೆಂದು ಒತ್ತಡ ಹೇರಿದರೆ, ಮತ್ತೊಂದು ಬಣ ಬೇಡ-ವೆಂದು ಪಟ್ಟು ಹಿಡಿ-ದಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರಕ್ಕೆ ನಿಜವಾ ದ ಕಳಕಳಿ ಇದ್ದರೆ, ದೇವೇಗೌಡ ಸಿಎಂ ಆಗಿದ್ದ ಕಾಲದಿಂದ ಈಗಿನ ಸಿದ್ದರಾಮಯ್ಯ ಕಾಲದವರೆಗಿನ ಎಲ್ಲ ಪ್ರಕರಣಗಳ ತನಿಖೆಗೂ ಮುಂದಾಗಲಿ ಎಂದು ಆಗ್ರಹಿಸಿದರು. ಯಾವುದೇ ಪಕ್ಷ, ಮತದಾರರನ್ನು ಹೈಜಾಕ್ ಮಾಡಲು ಸಾಧ್ಯವೇ? ಜೆಡಿಎಸ್‍ನ 34 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ತವಕಲಲ್ಲಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೂ ಬಂದಿದೆ. ಪಕ್ಷದಲ್ಲೇ ಇದ್ದು, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಲು ತಿಳಿಸಿದ್ದೇನೆ. ಆಗದಿದ್ದರೆ ನಿಮ್ಮ ಭವಿಷ್ಯವನ್ನು ಅಲ್ಲಿಯೇ ಹುಡುಕಿ ಕೊಳ್ಳುವುದಾದರೆ ಹೋಗಿ ಎಂಬ ಸಲಹೆ ನೀಡಿದ್ದೇನೆ.

ಎಚ್.ಡಿ. ದೇವೇಗೌಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!

ಅಸಮಾಧಾನ ತಣಿಸಲು CM ಡಿಕೆಶಿ ಆಪ್ತ ಶಾಸಕ ಆಸೀಫ್ ಸೇಠ್‌ಗೆ ‘ಬುಡಾ’ ಅಧ್ಯಕ್ಷ ಪಟ್ಟ

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!