ಅತ್ಯಾಚಾರ ಆರೋಪಿ ರೇಖಾಚಿತ್ರ 
ಜಿಲ್ಲಾ ಸುದ್ದಿ

ಅತ್ಯಾಚಾರ ಆರೋಪಿ ರೇಖಾಚಿತ್ರ ಬಿಡುಗಡೆ

ಪಿಳಗುಂಪ ಕೈಗಾರಿಕಾ ಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿರುವ ಆರೋಪಿಯ ...

ಬೆಂಗಳೂರು: ಪಿಳಗುಂಪ ಕೈಗಾರಿಕಾ ಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿರುವ ಆರೋಪಿಯ ರೇಖಾಚಿತ್ರವನ್ನು ಬೆಂಗಳೂರು ಗ್ರಾಮಾಂತರ ಪೋಲೀಸರು ಬಿಡುಗಡೆ ಮಾಡಿದ್ದಾರೆ. ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಗ್ರಾಮಾಂತರ ಎಸ್ಪಿ ಬಿ.ರಮೇಶ್ ತಿಳಿಸಿದರು. ಆರೋಪಿ ಬಾಲಕಿಯನ್ನು ಶೆಡ್‍ವೊಂದಕ್ಕೆ ಕರೆದೊಯ್ಯುತ್ತಿರುವುದು, ಬಳಿಕ ಅಂಗಿಯನ್ನು ಹಾಕಿಕೊಂಡು ಹೊರಗೆ ಬರುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ  ಹಾಗೂ ಸ್ಥಳೀಯರು ನೀಡಿದ ಸುಳಿವಿನ ಆಧಾರದ ಮೇಲೆ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ ಎಂದು ಎಸ್ಪಿ ರಮೇಶ್ ತಿಳಿಸಿದರು. ಹೊಸಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಬಿsತ್ರಿಪತ್ರಗಳು,ಫಲಕಗಳನ್ನು ಅಂಟಿಸಲಾಗಿದೆ. ಸಿಸಿ ಕ್ಯಾಮೆರಾ ವಿಡಿಯೋ ಗಳು ಸ್ಪಷ್ಟವಾಗಿರದ ಕಾರಣ ರೇಖಾಚಿತ್ರ ಬಿಡಿಸಲಾಗಿದೆ.
ಆತನ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಬಹುದು ಎಂದು ಅವರು ಹೇಳಿದರು. ಕೃತ್ಯ ಎಸಗುವ ಮುನ್ನ್ನ ಆರೋಪಿ ಸ್ಥಳೀಯರೊಂದಿಗೆ ಮಾತನಾಡಿದ್ದ. ಎಲ್ಲಿ ಕೆಲಸ ಮಾಡು ತ್ತಿದ್ದಿಯಾ  ಎಂದು ಕೇಳಿದಾಗ ಸಮೀಪದಲ್ಲಿರುವ ಟೈಲ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ಹೀಗಾಗಿ, ಅಲ್ಲಿಗೂ ಹೋಗಿ ಪರಿಶೀಲನೆ ನಡೆಸಿದಾಗ ಅಂತಹ ಮಹತ್ವದ ಸುಳಿವು ಲಭ್ಯವಾಗಿಲ್ಲ ಎಂದು ಪೋ ಲೀಸರು ತಿಳಿಸಿದ್ದಾರೆ. ವಿಶೇಷ ತಂಡಗಳು ಸಮೀಪದ ಗ್ರಾಮಗಳಿಗೆ ತೆರಳಿ ಅನುಮಾನಾಸ್ಪದ ವ್ಯಕ್ತಿಗಳ ಹುಡುಕಾಟ ನಡೆಸುತ್ತಿವೆ. ಬೆರಳಚ್ಚು ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಪರಿಶೀಲನೆ ನಡೆಸುತ್ತಿರುವುದಾಗಿಹಿರಿಯ ಪೋಲೀಸ್ ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT