ಬಿಎಂಟಿಸಿ 
ಜಿಲ್ಲಾ ಸುದ್ದಿ

ಬಿಎಂಟಿಸಿ ಬಸ್‍ಗಳಲ್ಲಿ ಸುರಕ್ಷಿತ ಅಲಾರಾಂ

ಮಹಿಳಾ ಪ್ರಯಾಣಿಕರ ಸುರಕ್ಷ ತೆಗಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿ ಬಸ್ ಗಳಲ್ಲಿ `ಸುರಕ್ಷತೆ ಅಲಾರಾಂ'...

ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷ ತೆಗಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿ ಬಸ್ ಗಳಲ್ಲಿ `ಸುರಕ್ಷತೆ ಅಲಾರಾಂ' ವ್ಯವಸ್ಥೆ ಅಳವಡಿಸಲಾಗಿದೆ. ಯಲಹಂಕದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಶನಿವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು `ಸುರಕ್ಷತಾ ಅಲಾರಾಂ' ಇರುವ ಬಸ್‍ಗಳಿಗೆ ಚಾಲನೆ ನೀಡಿದರು. ಇದೇ ವೇಳೆ 61ನೇ ಬಸ್ ದಿನವನ್ನು ಆಚರಿಸಲಾಯಿತು ಹಾಗೂ `ನೂತನ ಚಕ್ರ ಸಾರಿಗೆ' ಬಸ್ಸುಗಳ ಉದ್ಘಾಟನೆ ಮಾಡಲಾಯಿತು. ಶಾಸಕ ನಾಭಿರಾಜ ಜೈನ್, ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಹಿರಿಯ ಅಧಿಕಾರಿಗಳಾದ ಎಸ್.ಆರ್.ವಿಶ್ವನಾಥ್, ವಿ.ಎಸ್.ಆರಾಧ್ಯ, ಡಾ.ಏಕ್‍ರೂಪ್ ಕೌರ್, ನಟ ಚರಣ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಟಿ ನಿವೇದಿತಾ ಭಾಗವಹಿಸಿದ್ದರು.

ಅಲಾರಾಂ ವೈಶಿಷ್ಟ್ಯ
: ಬಿಎಂಟಿಸಿ ಹಾಗೂ ದುರ್ಗ ಸಂಸ್ಥೆ ಸಹಯೋಗದೊಂದಿಗೆ ಈ ನೂತನಸುರಕ್ಷತಾ ಉಪಕ್ರಮವನ್ನು ಆರಂಭಿಸಲಾಗಿದೆ. ತಾನು ಅಪಾಯದಲ್ಲಿದ್ದೇನೆಂದು ಇತರರ ಗಮನ ಸೆಳೆಯಲು ಹಾಗೂ ಯಾವುದೇ ಕಿರುಕುಳಕ್ಕೆ ಬಲಿಪಶುವಾಗುವ ಮೊದಲು, ಪರಿಸ್ಥಿತಿಯನ್ನು ನಿಭಾಯಿಸಲು ಈ ಅಲಾರಾಂನ ಗುಂಡಿಯನ್ನು ಒತ್ತಬಹುದಾಗಿದೆ. ಅಲಾರಾಂ ಗುಂಡಿಯನ್ನು ಒತ್ತಿದ ತಕ್ಷಣ 20 ಸೆಕೆಂಡ್‍ಗಳವರೆಗೆ ಶಬ್ದ ಮೊಳಗುತ್ತದೆ. ಬಸ್ಸಿನ ಒಳಭಾಗ ಮತ್ತು ಹೊರಭಾಗದಲ್ಲಿ ಕೆಲವು ದೀಪಗಳು ಮಿನುಗುತ್ತವೆ. ಆಗ ಚಾಲಕರು ಕಡ್ಡಾಯವಾಗಿ ವಾಹನವನ್ನು ನಿಲ್ಲಿಸಿ ಬಸ್‍ನ ಒಳಗೆ ಪರಿಸ್ಥಿತಿ ಸರಿಯಾಗಿದೆಯೇ  ಎಂದು ಖಚಿತಪಡಿಸಿಕೊಳ್ಳುತ್ತಾರೆ.
ಅಲ್ಲದೆ ವಾಹನದ ಹೊರಭಾಗದಲ್ಲಿ ಬೇರೆ ರೀತಿಯ ದೀಪಗಳು ಮಿನುಗುವುದರಿಂದ ಸಂಚಾರ ಪೋಲೀಸರು ಮತ್ತು ಸುತ್ತಮುತ್ತಲಿನ ಜನರಿಗೆ ವಾಹನದಲ್ಲಿ ತೊಂದರೆಯುಂಟಾಗಿದೆ ಎಂಬುದು ತಿಳಿಯುತ್ತದೆ. ವಾಹನದ ಒಳಗೆ ಮತ್ತು ಹೊರಗೆ ಇರುವ ಎಲ್ಲರನ್ನೂ ದೀಪವು ಎಚ್ಚರಿಸುತ್ತದೆ. ಇದರಿಂದ ಮುಂದಾಗ ಬಹುದಾದ ಅನಾಹುತ ತಪ್ಪಿಸಬಹುದು. ಮಹಿಳೆಯರ ಮೇಲಾಗುವ ಅಪರಾಧ ನಿಯಂತ್ರಣ ಮಾಡುವುದರ ಜತೆಗೆ ಬಸ್‍ಗಳಲ್ಲಿ ನಡೆಯುವ ಕಳ್ಳತನ ತಡೆಗೆ ಸಹಾಯಕವಾಗುತ್ತದೆ.



ಅಲಾರಾಂ ಅಳವಡಿಸಿರುವ ಬಸ್‍ಗಳ ಮಾರ್ಗ
ಮಾರ್ಗ ಸಂಖ್ಯೆ: 238ಯು(ಅಂಬೇಡ್ಕರ್ ಕಾಲೇಜಿನಿಂದ ಕೆಂ.ಬ.ನಿ), ಟಿಆರ್12(ಶ್ರಿ ೀನಗರದಿಂದ ಬಸವೇಶ್ವರನಗರ ಬಸ್ ನಿಲ್ದಾಣ), 18(9ನೇ ಬ್ಲಾಕ್ ಜಯನಗರದಿಂದ ಕೆಂ.ಬ.ನಿ), 401ಆರ್(ಬಿ.ಇ.ಎಂ.ಎಲ್ 5ನೇ ಹಂತದಿಂದ ಯಲಹಂಕ), 27ಇ(ಶಿವಾಜಿನಗರದಿಂದ ಜೆ.ಪಿ.ನಗರ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!