ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾಘವೇಶ್ವರ ಶ್ರೀ ಪ್ರಕರಣ ತೀರ್ಪು ನಾಳೆ

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧ ದಾಖಲಾಗಿರುವ ದೂರು ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿ...

ರಾಘವೇಶ್ವರ ಶ್ರೀ
Mainashree
Updated On : 8 Feb 2015, 8:45 am

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧ ದಾಖಲಾಗಿರುವ ದೂರು ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿ ಮೇಲಿನ ತೀರ್ಪನ್ನು ಹೈಕೋರ್ಟ್ ಸೋಮವಾರ ಪ್ರಕಟಿಸಲಿದೆ.

ಸೋಮವಾರ ಮಧ್ಯಾಹ್ನ 2.30ರ ವೇಳೆಗೆ ಕೋರ್ಟ್ ಕೊಠಡಿ 12ರಲ್ಲಿ ನಾ.ಆನಂದ್ ಬೈರಾರೆಡ್ಡಿ ಮತ್ತು ನ್ಯಾ.ಎನ್.ಆನಂದ್ ಅವರ ವಿಭಾಗೀಯ ಪೀಠ ತೀರ್ಪು ಪ್ರಕಟಿಸಲಿದೆ.

ಶ್ರೀಗಳ ವಿರುದ್ಧ ದಾಖಲಾಗಿದ್ದ ದೂರನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯಿಂದ ಈ ಹಿಂದೆ ಐವರು ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದರು. ತದನಂತರ ಅರ್ಜಿ ವಿಚಾರಣೆಗೆ ನ್ಯಾ.ಆನಂದ್ ಬೈರಾರೆಡ್ಡಿ ಮತ್ತು ನ್ಯಾ.ಎನ್.ಆನಂದ್ ಅವರ ಹೊಸ ಪೀಠ ರಚನೆ ಮಾಡಲಾಗಿತ್ತು.

ವೈದ್ಯ ಪರೀಕ್ಷೆ ರದ್ದು ಕೋರಿ ಮೇಲ್ಮನವಿ: ಈ ಮಧ್ಯೆ, ವೈದ್ಯಕೀಯ ಪರೀಕ್ಷೆ ರದ್ದು ಕೋರಿ ಶ್ರೀಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಶ್ರೀಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ದಾಖಲಿಸಿದ್ದಾರೆ.

ಈ ಹಿಂದೆ ಸಿಆರ್‌ಪಿಸಿ 53 ಮತ್ತು 53(ಎ) ಅನ್ನು ಪ್ರಶ್ನಿಸಿ ಶ್ರೀಗಳು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾ.ಎ.ಎನ್ ವೇಣುಗೊಪಾಲಗೌಡ ಅವರಿದ್ದ ಏಕಸದಸ್ಯ ಪೀಠ, 2014ರ ಡಿ.3ರಂದು ಅರ್ಜಿ ವಜಾಗೊಳಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement