ಜಿಲ್ಲಾ ಸುದ್ದಿ

ಕೆಎಂಎಫ್ ಅಧ್ಯಕ್ಷ ನಾಗರಾಜ್ ಅನರ್ಹತೆ ಆದೇಶ ರದ್ದು

Srinivasamurthy VN

ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜ್ ಅವರ ಅನರ್ಹ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿದ್ದು, ನೋಟಿಸ್ ಗೆ ಉತ್ತರಿಸಲು ಸಮಯಾವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಹಿಂದೆ ಕೆಎಂಎಫ್ನಲ್ಲಿ ಅಕ್ರಮ ವೆಸಗಿದ ಆರೋಪದ ಮೇಲೆ ಪಿ. ನಾಗರಾಜ್ ಅವರನ್ನು ರಾಜ್ಯ ಸರ್ಕಾರ ಅನರ್ಹಗೊಳಿಸಿತ್ತು. ಸರ್ಕಾರದ ದಿಢೀರ್ ನಿರ್ಧಾರದ ವಿರುದ್ಧ ನಾಗರಾಜ್ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನೋಟಿಸ್ ನೀಡಿದ ಬಳಿಕ ಅದಕ್ಕೆ ಉತ್ತರಿಸಲು ಸರ್ಕಾರ ನೀಡಿದ್ದ ಕಾಲಾವಕಾಶ ಕಡಿಮೆಯಾಯಿತು. ಹೀಗಾಗಿ ಅವರ ವಿರುದ್ಧದ ಕ್ರಮಕ್ಕೂ ಮೊದಲು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ಎಂದು ಸೂಚಿಸಿದೆ.

ಇನ್ನು ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಅವರು, ಅನರ್ಹತೆ ಆದೇಶವನ್ನು ಹಿಂಪಡೆಯುವುದಾಗಿ ಹೇಳಿದರು. ಈ ಹಿಂದೆ ನಡೆದ ವಿಚಾರಣೆಯಲ್ಲಿಯೂ ಹೈಕೋರ್ಟ್ ಸರ್ಕಾರದ ವಿರುದ್ಧ ಚಾಟಿ ಬೀಸಿತ್ತು. ನೋಟಿಸ್ಗೆ ಉತ್ತರಿಸಲು ನೀಡಿದ್ದ ಕಾಲಾವಕಾಶ ತೀರ ಕಡಿಮೆಯಾಯಿತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಸ್ವತಃ ಸರ್ಕಾರದ ಪರ ವಕೀಲರಾದ ರವಿ ವರ್ಮಕುಮಾರ್ ಅವರು ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿ ನೀಡಿದ್ದರು.

ಅಂತಿಮವಾಗಿ ಇಂದು ನ್ಯಾಯಾಲಯ ನಾಗರಾಜ್ ಅನರ್ಹತೆಯನ್ನು ರದ್ದುಗೊಳಿಸಿದೆ.

SCROLL FOR NEXT