ಬೆಂಗಳೂರು: ರಾಜ್ಯದಲ್ಲಿ ಇನ್ನುಮುಂದೆ ವೈದ್ಯರ ಮಾದರಿಯಲ್ಲಿ ಶಿಕ್ಷಕರಿಗೂ ಗ್ರಾಮೀಣ ಸೇವೆ ಕಡ್ಡಾಯವಾಗಲಿದೆ.
ರಾಜ್ಯ ಸರ್ಕಾರ ಶಿಕ್ಷಕರಿಗೂ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಲು ತೀರ್ಮಾನನಿಸಿದ್ದು, ಇದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಶಿಕ್ಷಕರ ವರ್ಗಾವಣೆ ಸಮಸ್ಯೆ ಹೆಚ್ಚಾಗಿರುವುದರಿಂದ ಇಲಾಖೆಯ 2007ರ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಅದರಲ್ಲಿ ಶಿಕ್ಷಕರು ಹಾಗೂ ಇಲಾಖೆಯ ಆಡಳಿತಾತ್ಮಕ ಅಧಿಕಾರಿಗಳ ಸೇವೆ ಬಗ್ಗೆ ನಿಯಮಗಳನ್ನು ರೂಪಿಸಬೇಕಿದೆ. ಇದಕ್ಕಾಗಿ ಈ ಹಿಂದೆಯೇ ಪ್ರಯತ್ನಿಸಿ, ರಾಜ್ಯಪಾಲ ವಿ.ಆರ್. ವಾಲಾ ಅವರೊಂದಿಗೆ ಚರ್ಚೆಯನ್ನೂ ನಡೆಸಲಾಗಿತ್ತು. ಇದಕ್ಕೆ ಅವರೂ ಸಮ್ಮತಿ ಸೂಚಿಸಿದ್ದರು. ಆದರೆ ಕಾನೂನು ಇಲಾಖೆಯ ಅನುಮತಿ ಸಿಗದೆ ವಿಳಂಬವಾಗಿತ್ತು. ಆದ್ದರಿಂದ ಈ ಬಾರಿ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯಪಾಲರೊಂದಿಗೆ ಮತ್ತೆ ಚರ್ಚೆ ನಡೆಸಿ ಸುಗ್ರೀವಾಜ್ಞೆ ಹೊರಡಿಸಲು ಯತ್ನಿಸಲಾಗುವುದು ಎಂದರು.
ಹೊಸ ನಿಯಮದ ಪ್ರಕಾರ ಶಿಕ್ಷಕರು ಒಮ್ಮೆ ನೇಮಕವಾದರೆ ಕಡ್ಡಾಯವಾಗಿ 10 ವರ್ಷಗಳ ವರೆಗೆ ಗ್ರಾಮೀಣ ಸೇವೆ ಮಾಡಬೇಕು. ಯಾವುದೇ ಕಾರಣಕ್ಕೂ ತವರು ಜಿಲ್ಲೆಗಳಲ್ಲಿ ಇರುವಂತಿಲ್ಲ. ಅಷ್ಟೇ ಏಕೆ, ತವರು ಕಂದಾಯ ವಿಭಾಗದಲ್ಲೂ ಸೇವೆ ಸಲ್ಲಿಸುವಂತಿಲ್ಲ. ಇನ್ನು ಡಿಡಿಪಿಐ, ಬಿಇಒಗಳಂಥ ಆಡಳಿತಾತ್ಮಕ ಹುದ್ದೆಯಲ್ಲಿರುವವರು ಯಾವುದೇ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇರುವಂತಿಲ್ಲ. ಶಿಕ್ಷಕರಿಗೆ 10 ವರ್ಷ ಗ್ರಾಮೀಣ ಸೇವೆ ಮೊದಲ ಪುಟದಿಂದ ಒಂದು ಸ್ಥಳದಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಇರುವಂತಿಲ್ಲ. ಇಂಥ ಹತ್ತು ಹಲವು ನಿಯಮಗಳನ್ನು ಜಾರಿಗೊಳಿಸಲು ಚಿಂತಿಸಲಾಗಿದ್ದು, ಸದ್ಯದಲ್ಲೇ ಈ ಬಗ್ಗೆ ಚರ್ಚೆ ನಡೆಸಿ ರಾಜ್ಯಪಾಲರ ಅನುಮತಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ವರ್ಗಾವಣೆ ವಂಚಿತ ದಂಪತಿ 17,000
ಇದಕ್ಕೂ ಮುನ್ನ ವಿಧಾನಪರಿಷತ್ತಿನಲ್ಲಿ ರಾಜ್ಯ ಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿದ ಕಾಂಗ್ಸೆಸ್ ನ ಮೋಟಮ್ಮ, ಶಿಕ್ಷಕರ ವರ್ಗಾವಣೆ ಸಮಸ್ಯೆಗಳನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 3 ಲಕ್ಷ ಶಿಕ್ಷಕರಿದ್ದಾರೆ. ಇವರಲ್ಲಿ 17,000 ಮಂದಿಯನ್ನು ಮಾತ್ರ ಸಿಇಟಿ ಮೂಲಕ ವರ್ಗಾವಣೆ ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ.ಆದರೆ ವರ್ಗಾವಣೆ ಕೋರಿ 83,000 ಅರ್ಜಿಗಳು ಬಂದಿವೆ. ಇದರಲ್ಲಿ 17,000 ದಂಪತಿಯೇ ಇದ್ದಾರೆ. ಇವರು ಒಟ್ಟಿಗೆ ಬದುಕಲಿ ಎಂದು ಇವರನ್ನು ವರ್ಗಾವಣೆ ಮಾಡಿದರೆ, ರಾಜ್ಯದಲ್ಲಿ ಒಟ್ಟು 5000 ಶಾಲೆಗಳನ್ನು ಶಿಕ್ಷಕರಿಲ್ಲದೆ ಮುಚ್ಚಬೇಕಾಗುತ್ತದೆ. ಅಂದರೆ ಗಡಿ ಜಿಲ್ಲೆಗಳಲ್ಲಿ ಬೇರೆ ಜಿಲ್ಲೆಗಳ ಅನೇಕ ಶಿಕ್ಷಕರಿದ್ದಾರೆ. ಅವರನ್ನು ತೆಗೆದರೆ ಆ ಶಾಲೆಗಳಲ್ಲಿ ಆ ಶಾಲೆಗಳಲ್ಲಿ ಶಿಕ್ಷಕರೇ ಇರುವುದಿಲ್ಲ. ಆದ್ದರಿಂದ ಈ ಬಗ್ಗೆ ಸಮಗ್ರ ನೀತಿರೂಪಿಸಲಾಗುತ್ತಿದೆ ಎಂದರು.