ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

42 ಜನರ ಜೀತದಾಳು ಪ್ರಕರಣ ಆರೋಪಿಗೆ ಏಳು ವರ್ಷ ಶಿಕ್ಷೆ

ಶಾಲೆಗೆ ತೆರಳಬೇಕಿದ್ದ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸಿ ಬಾಲ ಕಾರ್ಮಿಕ ಕೂಪಕ್ಕೆ ದೂಡಿದ್ದ ಚಿಕ್ಕಾಬಳ್ಳಾಪುರ ಮೂಲದ ಕೃಷ್ಣಾ ರೆಡ್ಡಿ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ...

Updated On : 17 Feb 2015, 1:47 am

ಬೆಂಗಳೂರು: ಶಾಲೆಗೆ ತೆರಳಬೇಕಿದ್ದ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸಿ ಬಾಲ ಕಾರ್ಮಿಕ ಕೂಪಕ್ಕೆ ದೂಡಿದ್ದ ಚಿಕ್ಕಾಬಳ್ಳಾಪುರ ಮೂಲದ ಕೃಷ್ಣಾ ರೆಡ್ಡಿ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಏಳು ವರ್ಷ ಕಾಲ ಸಜೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಚಿಕ್ಕಬಳ್ಳಾಪುರದ ಬಳಿ ಇರುವ ಮಲಕಚೆರುವಹಳ್ಳಿಯಲ್ಲಿ ಕಲ್ಲು ಕ್ವಾರಿ ವ್ಯವಹಾರ ನಡೆಸುತ್ತಿದ್ದ ಕೃಷ್ಣಾರೆಡ್ಡಿ ಎಂಬಾತ 42 ಜನರನ್ನು ಜೀತದಾಳಾಗಿ ಬಳಸಿಕೊಂಡಿದ್ದನು. ಇದನ್ನು ತಿಳಿದ ಜಿಲ್ಲಾಧಿಕಾರಿಗಳು ಬಾಗೇಪಲ್ಲಿಯ ತಹಸೀಲ್ದಾರ್ ಹನುಮಂತರಾಯ ಎಂಬುವರಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಸ್ಥಳಕ್ಕೆ ಧಾವಿಸಿದ್ದ ತಹಸೀಲ್ದಾರ್  2010ರ ಸೆ.1ರಂದು 42 ಜನರನ್ನು ರಕ್ಷಿಸುವಲ್ಲಿ ಸಫಲರಾಗಿದ್ದರು.

ನಂತರ ಕೃಷ್ಣಾರೆಡ್ಡಿ ವಿರುದ್ದ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಬಾಗೇಪಲ್ಲಿಯ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ 2014ರ ಏಪ್ರಿಲ್ 9ರಂದು ಆರೋಪಿಗೆ 7 ವರ್ಷ ಸಜೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದಾಗ ಷರತ್ತು ಬದ್ದ ಜಾಮೀನು ಮಂಜೂರು ಮಾಡಿತ್ತು. ತದನಂತರ ತನ್ನ ವಿರುದ್ದ ಪ್ರಕರಣ ರದ್ದುಪಡಿಸುವಂತೆ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದನು. ವಿಚಾರಣೆ ನಡೆಸಿದ ನ್ಯಾ.ಆರ್.ಬಿ.ಬೂದಿಹಾಳ್ ಅವರಿದ್ದ ಪೀಠ, ಅಧೀನ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ 7 ವರ್ಷ ಸಜೆಯನ್ನು ಎತ್ತಿ ಹಿಡಿದು, ಅರ್ಜಿದಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement