ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಹೆಲಿಕಾಫ್ಟರ್ ಆ್ಯಂಬುಲೆನ್ಸ್ ಸೇವೆ: ಏವಿಯೇಟರ್ ಯೋಜನೆ

ಭಾರತದಲ್ಲಿ ಹೆಲಿಕಾಫ್ಟರ್ ಆ್ಯಂಬುಲೆನ್ಸ್ ವ್ಯವಸ್ಥೆ ಆರಂಭಿಸಲು ಏವಿಯೇಟರ್ ಸಂಸ್ಥೆ ಮುಂದಾಗಿದೆ. ಭಾರತದ ಮಹಾನಗರಗಳ ಪ್ರತಿಷ್ಠಿತ ಆಸ್ಪತ್ರೆಗಳೊಂದಿಗೆ ಒಪ್ಪಂದ...

ಬೆಂಗಳೂರು: ಭಾರತದಲ್ಲಿ ಹೆಲಿಕಾಫ್ಟರ್ ಆ್ಯಂಬುಲೆನ್ಸ್ ವ್ಯವಸ್ಥೆ ಆರಂಭಿಸಲು ಏವಿಯೇಟರ್ ಸಂಸ್ಥೆ ಮುಂದಾಗಿದೆ. ಭಾರತದ ಮಹಾನಗರಗಳ ಪ್ರತಿಷ್ಠಿತ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು 'ಏವಿಯೇಟರ್ ಏರ್ ರೆಸ್ಕ್ಯೂ' ವ್ಯವಸ್ಥೆ ಆರಂಭಿಸಲು ಏವಿಯೇಟರ್ ಸಂಸ್ಥೆಯು 50 ಹೆಲಿಕಾಫ್ಟರ್‌ಗಳನ್ನು ಆರೋಗ್ಯ ಸೇವೆಗೆ ಬಿಡುತ್ತಿದೆ.

ಏರ್‌ಬಸ್ ಮೂಲಕ ಹೆಲಿಕಾಫ್ಟರ್ ಖರೀದಿಸಿಲಾಗುತ್ತಿದ್ದು, ಈ ಯೋಜನೆಗೆ ಜಿವಿಕೆ, ಮೆಡ್ ಟ್ರಾನ್ಸ್, ಸಫ್ರಾನ್ ನೆರವು ನೀಡುತ್ತಿದೆ. ಪ್ರಾಥಮಿಕ ಹಂತದಲ್ಲಿ 3 ಹೆಲಿಕಾಫ್ಟರ್‌ಗಳು ಬೆಂಗಳೂರು, ಚೈನ್ನೈ ಹಾಗೂ ಹೈದ್ರಾಬಾದನಲ್ಲಿ ಲಭ್ಯವಿರಲಿದ್ದು, 2016ರೊಳಗೆ ಈ ಸೇವೆ ಆರಂಭವಾಗುತ್ತದೆ.

ಇದರ ಯಶಸ್ಸು ನೋಡಿ ಭಾರತದ ಉಳಿದ ನಗರಗಳಿಗೆ ವಿಸ್ತರಿಸಲಾಗುತ್ತದೆ ಎಂದು ಏವಿಯೇಟರ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಭವಿಷ್ಯದಲ್ಲಿ ದೆಹಲಿ, ಭುವನೇಶ್ವರ, ದಿಸ್ಪುರ, ಗಾಂಧಿನಗರ ಹಾಗೂ ಮುಂಬಯಿನಲ್ಲೂ ಯೋಜನೆ ಆರಂಭಿಸಲಾಗುವುದು.

ಬೆಂಗಳೂರಿನಲ್ಲಿ ನಾರಾಯಣ ಹೃದಯಾಲಯ ಹಾಗೂ ಸಾಕ್ರಾ ಆಸ್ಪತ್ರೆಯಲ್ಲಿ ಹೆಲಿಕಾಫ್ಟರ್ ಆ್ಯಂಬುಲೆನ್ಸ್ ಸೇವೆ ಲಭ್ಯವಿರಲಿದೆ. ಯೋಜನೆಯ ಯಶಸ್ಸಿಗಾಗಿ ವಿಮಾ ಕಂಪನಿಗಳ ಜತೆಗೂ ಏವಿಯೇಟರ್ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರ ವೆಚ್ಚವನ್ನು ಭರಿಸಲಿವೆ ಎಂದು ಏವಿಯೇಟರ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!