ಬೆಂಗಳೂರು: `ಮಾನವ ಧರ್ಮ' ನಿರ್ಮಾಣಕ್ಕಾಗಿ `ಭಗವದ್ಗೀತೆ'ಯನ್ನಷ್ಟೇ ಅಲ್ಲ, ಸಮಾಜದಲ್ಲಿ ಅಸಮಾನತೆ ಬಿಂಬಿಸುವ ಎಲ್ಲ ಧರ್ಮ ಗ್ರಂಥಗಳನ್ನು ಸುಟ್ಟು ಬಿಡೋಣ ಎನ್ನುವ ವಿವಾದಾತ್ಮಕ ಹೇಳಿಕೆ ಯನ್ನು ಸಾಹಿತಿ ಪ್ರೊ. ಚಂದ್ರಶೇಖರಪಾಟೀಲರು ನೀಡಿದ್ದಾರೆ. ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವಿಶ್ವಮಾನವ ಕುವೆಂಪು ನೆನಪಿನಾರ್ಥ ಕನ್ನಡ ಸಾಹಿತ್ಯ ಪರಿಷತ್ತಿನಸಭಾಂಗಣದಲ್ಲಿ ಭಾನುವಾರ ಆಯೋ ಜಿಸಿದ್ದ ಗಾಯನೋತ್ಸವ ಹಾಗೂ `ವಿಶ್ವಚೇತನ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿಸಬೇಕೆಂಬ ಕೇಂದ್ರ ಸಚಿವರ ಹೇಳಿಕೆ ಹಾಗೂ ಭಗವದ್ಗೀತೆಯನ್ನು ಸುಡಬೇಕೆಂಬಸಾಹಿತಿಯೊಬ್ಬರ ಹೇಳಿಕೆ ಕುರಿತು ವ್ಯಾಪಕ
ಚರ್ಚೆ ನಡೆಯುತ್ತಿರುವ ವಿಷಯ ಪ್ರಸ್ತಾಪಿಸಿದ ಚಂದ್ರಶೇಖರ ಪಾಟೀಲರು, `ಯಾವುದೇ ಧರ್ಮ ಗ್ರಂಥ ದೇಶದ ರಾಷ್ಟ್ರೀಯ ಗ್ರಂಥವಾಗಲು ಸಾಧ್ಯವಿಲ್ಲ.
ಅಷ್ಟೇ ಏಕೆ, ಭಗವದ್ಗೀತೆಯನ್ನು ಸುಡಬೇಕೆನ್ನುವುದಾದರೆ, ಅದೊಂದನ್ನೇ ಅಲ್ಲ ಸಮಾಜದಲ್ಲಿ ಅಸಮಾನತೆ ಬಿಂಬಿಸುವ ಎಲ್ಲಾ ಧರ್ಮ ಗ್ರಂಥಗಳನ್ನು ಸುಟ್ಟು ಬಿಡೋಣ. ಅದರಿಂದ ಹೊಮ್ಮುವ ಬೂದಿಯಿಂದಲಾದರೂ ಫೀನಿಕ್ಸ್ ಪಕ್ಷಿಯಂತೆ ಹೊಸ `ಮಾನವ
ಧರ್ಮ' ಹುಟ್ಟಬಹುದು' ಎಂದು ಆಶಯ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಕನ್ನಡ ಪುಸ್ತಕ ಪ್ರಾ„ಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ವೈಷ್ಣವರಿಗೆ ಸೀಮಿತವಾ ಗಿರುವ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿಸಲು ಹೊರಟಿರುವುದು ಪಕ್ಷಪಾತದ ನಿಲುವು ಎಂದು ಅಸಮಾಧಾನ
ವ್ಯಕ್ತಪಡಿಸಿದರು. ಈ ಹಿಂದೆ ಮೈಸೂರಿನಲ್ಲಿ ನಡೆದ ವಿಚಾರ ಸಂಕಿರಣ ವೊಂದರಲ್ಲಿ`ಮನುಷ್ಯರ ನಡುವೆ ಅಸಮಾನತೆ ಸಾರುವ ಯಾವುದೇ ಗ್ರಂಥ ಧರ್ಮ ಗ್ರಂಥವಾಗದು ಎಂದು ಹೇಳಿದ್ದೆ'. ಅದಕ್ಕಾಗಿ ನನ್ನನ್ನೂ ಸೇರಿದಂತೆ ಆ ಕಾರ್ಯಕ್ರಮದಲ್ಲಿದ್ದ ನಾಲ್ವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿ
ದರು. ಬಂಜಗೆರೆ ಹೇಳಿಕೆಗಳಿಗೆ ಚಂಪಾ ಮೇಲಿನಂತೆ ಸಹಮತ ವ್ಯಕ್ತಪಡಿಸಿದರು. ಕುವೆಂಪು ಜೀವನ್ಮುಖಿ: ಕುವೆಂಪು ಕುರಿತಂತೆ ಮಾತನಾಡಿದ ಚಂದ್ರಶೇಖರ ಪಾಟೀಲರು, ಬಹು ದೊಡ್ಡ ಪರಂಪರೆಯ ಹಾದಿಯಲ್ಲಿ ಸಾಗಿದ ಕುವೆಂಪು ಜೀವನ್ಮುಖಿ ಸಾಹಿತಿ. ಅವರ ನಂತರ ಆ ಮಟ್ಟದ ವೈಚಾರಿಕ ಪ್ರಜ್ಞೆ ಹುಟ್ಟಿಲ್ಲ. ಕುವೆಂಪು ಸಾಹಿತ್ಯಕ್ಕೆ ಮಾತ್ರ ಸೀಮಿತಗೊಂಡವರಲ್ಲ ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಯೂ ಮಹತ್ವದ ಕವಿ ಎಂದು ಅಭಿಪ್ರಾಯಪಟ್ಟರು. ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಎನ್.ಎಸ್. ರೆಡ್ಡಿ (ಆಡಳಿತ), ಉದ್ಯಮಿ ಬಿ.ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ.ತಿಮ್ಮೇಶ್, ಮೂಳೆ ತಜ್ಞ ಡಾ. ಐ.ಸಿ.ಬೋಪಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯ ದರ್ಶಿ ಭಾ.ಮ. ಹರೀಶ್ ಅವರಿಗೆ `ವಿಶ್ವಚೇತನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆ ಅಧ್ಯಕ್ಷ ಟಿ. ಸುರೇಶ್, ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇ ಗೌಡ, ಚಿಂತಕ ಎಂ.ವಿ. ದೇವಶೆಟ್ಟಿಗೌಡ ಉಪಸ್ಥಿತರಿದ್ದರು.