ಜಿಲ್ಲಾ ಸುದ್ದಿ

ಇಬ್ಬರು ಕ್ರಿಕೆಟ್ ಬುಕ್ಕಿಗಳ ಬಂಧನ

Mainashree

ಬೆಂಗಳೂರು: ಸಿಸಿಬಿ ಪೊಲೀಸರು ಇಬ್ಬರು ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಿದ್ದು, ಅವರಿಂದ ನಗದು, ಮೊಬೈಲ್ ಗಳು, ಲ್ಯಾಪ್ಟಾಪ್ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿ.ಜೆ.ಹಳ್ಳಿ ನಿವಾಸಿ ಮುನೀರ್ ಪಾಷ ಹಾಗೂ ಸಿದ್ಧಿಕಿ ಬಂಧಿತರು. ಇವರು ಡಿ.ಜೆ.ಹಳ್ಳಿಯ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ರಾಜಸ್ಥಾನ ಮೂಲದ ಯೋಗೇಶ್ ಎಂಬಾತನ ಜತೆ ಸಂಪರ್ಕದಲ್ಲಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ಡಿ.ಜೆ.ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT