ಜಿಲ್ಲಾ ಸುದ್ದಿ

ಬೆಂಗಳೂರಲ್ಲಿ ಮತ್ತೆ ಕಸದ ಹಾವಳಿ

ಬೆಂಗಳೂರು ಮಹಾ ನಗರದಲ್ಲಿ ಮತ್ತೆ ಕಸದ ಸಮಸ್ಯೆ ಆರಂಭವಾಗಿದೆ. ಕಳೆದ ಐದು ದಿನಗಳಿಂದ ನಗರದ ಅರ್ಧಕ್ಕಿಂತಲೂ ಹೆಚ್ಚಿನ ಪ್ರದೇಶಗಳಲ್ಲಿ ಮನೆ ಮುಂದೆ ಕಸದ ಗುಡ್ಡೆ ಶೇಖರಣೆಗೊಳ್ಳುತ್ತಿದ್ದು, ಕಸಕ್ಕೆ ಮೋಕ್ಷ ಕಾಣಿಸುವ ಯಾವುದೇ ಪ್ರಯತ್ನ ಸರ್ಕಾರ ಮತ್ತು ಬಿಬಿಎಂಪಿ ಕಡೆಯಿಂದ ನಡೆದಿಲ್ಲ...

ಬೆಂಗಳೂರು: ಬೆಂಗಳೂರು ಮಹಾ ನಗರದಲ್ಲಿ ಮತ್ತೆ ಕಸದ ಸಮಸ್ಯೆ ಆರಂಭವಾಗಿದೆ. ಕಳೆದ ಐದು ದಿನಗಳಿಂದ ನಗರದ ಅರ್ಧಕ್ಕಿಂತಲೂ ಹೆಚ್ಚಿನ ಪ್ರದೇಶಗಳಲ್ಲಿ ಮನೆ ಮುಂದೆ ಕಸದ ಗುಡ್ಡೆ ಶೇಖರಣೆಗೊಳ್ಳುತ್ತಿದ್ದು, ಕಸಕ್ಕೆ ಮೋಕ್ಷ ಕಾಣಿಸುವ ಯಾವುದೇ ಪ್ರಯತ್ನ ಸರ್ಕಾರ ಮತ್ತು ಬಿಬಿಎಂಪಿ ಕಡೆಯಿಂದ ನಡೆದಿಲ್ಲ.

ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಕಸದ ಹಾವಳಿ ತೀವ್ರವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಭಾಗದಲ್ಲಿ ಕಸ ವಿಲೇವಾರಿ ಗುತ್ತಿಗೆ ಪಡೆದಿದ್ದ ಬೆಂಗಳೂರು ವಿಕ್ಟರಿ ಗ್ರೂಪ್ (ಬಿವಿಜಿ) ಪ್ರತಿ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರಿಗೆ ಹಣ ನೀಡದಿರುವುದೇ ಈಗಿನ ಸಮಸ್ಯೆಗೆ ಮೂಲ. ಮೊದಲೇ ನಗರದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಇದೆ. ಎಚ್1ಎನ್1 ಹಾವಳಿ ವ್ಯಾಪಕವಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಇದು ತನಗೆ ಸಂಬಂಧವಿಲ್ಲದೇ ಇರುವ ವಿಚಾರ ಎಂಬಂತೆ ವರ್ತಿಸುತ್ತಿದೆ.

ಸಮಸ್ಯೆ ಏಕೆ ?: ಈಗ ಸೃಷ್ಟಿಯಾಗಿರುವ ಕಸದ ಸಮಸ್ಯೆ ವಿಚಾರದಲ್ಲಿ ಬಿಬಿಎಂಪಿ ರಾಜಕಾರಣ ನಡೆಸುತ್ತಿದೆ. ಏಕೆಂದರೆ ಬಿವಿಜಿ ಗ್ರೂಪ್ ಗೆ ನಗರದ 198 ವಾರ್ಡ್ ಗಳ ಪೈಕಿ ಶೇ.50ರಷ್ಟನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಟೆಂಡರ್ ನೀಡಲಾಗಿತ್ತು. ಈಗ ಬಿಜೆಪಿ ಶಾಸಕರು ಇರುವ ಎಲ್ಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಕಡೆ ಬಿವಿಜಿ ಗ್ರೂಪ್ ನವರೇ ಕಸ ವಿಲೇವಾರಿ ಜವಾಬ್ದಾರಿ ಹೊತ್ತಿದ್ದಾರೆ.

ಬಿಬಿಎಂಪಿಯ 100 ಪ್ಯಾಕೇಜ್ ಗಳಿಗೆ ಇನ್ನೂ ಹಳೆ ಟೆಂಡರ್ನಲ್ಲಿ ನಡೆಸಲಾಗುತ್ತಿದೆ. ಬಿವಿಜಿ ಸರಿಯಾಗಿ ನಿರ್ವಹಿಸುತ್ತಿಲ್ಲ. ಅಗತ್ಯ ಯಂತ್ರೋಪಕರಣ ಮತ್ತು ಸಿಬ್ಬಂದಿ ಇಲ್ಲ.  ಆದರೂ ಬಿಲ್ ಮಾತ್ರ ಕಾಲಕಾಲಕ್ಕೆ ಪಾವತಿಯಾಗುತ್ತಿದೆ. ಈಗಿರುವ ಟೆಂಡರ್ ಮೊತ್ತ ಹೆಚ್ಚಿಸಬೇಕೆಂಬ ಉದ್ದೇಶದಿಂದ ಈ ಸಂಸ್ಥೆಗೆ ಕಳೆದ ಕೆಲ ತಿಂಗಳಿಂದ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಹೀಗಾಗಿ ರೊಚ್ಚಿಗೆದ್ದಿರುವ ಸಿಬ್ಬಂದಿ ಐದು ದಿನ ಗಳಿಂದ ಈ ಸಂಸ್ಥೆ ಗುತ್ತಿಗೆ ಪಡೆದಿರುವ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುತ್ತಿಲ್ಲ.

ಬೆಂಗಳೂರು ದಕ್ಷಿಣ ಭಾಗದ ಪ್ರತಿ ಮನೆ ಮುಂದೆ ಕಸ ಗುಡ್ಡೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನಗರ ಸಾಂಕ್ರಾಮಿಕ ರೋಗಗಳ ಭಾದೆಗೆ ತುತ್ತಾಗುವ ಆತಂಕ ಎದುರಾಗಿದೆ. ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಈ ಬಗ್ಗೆ ಹೆಚ್ಚಿನ ಗಮನ ನೀಡುತ್ತಿಲ್ಲ. ಏಕೆಂದರೆ ಸಮಸ್ಯೆ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಉಲ್ಭಣವಾಗಿದೆ. ಇನ್ನು ಬಿಜೆಪಿ ಶಾಸಕರಿಗೆ ತಮ್ಮ ಕಾಲದಲ್ಲಿ ಗುತ್ತಿಗೆ ನೀಡಿದ್ದು ಎಂಬ ಕಾರಣಕ್ಕೆ ಕಸ ವಿಲೇವಾರಿ ಕಂಪನಿ ಮೇಲೆ ವಿಶೇಷ ಪ್ರೀತಿ. ಜತೆಗೆ ಬೆಂಗಳೂರು ನಗರವನ್ನು ಪ್ರತಿನಿಧಿಸುವ ಬಿಜೆಪಿಯ ಪ್ರಭಾವಿ ಮುಖಂಡ ರೊಬ್ಬರು `ಶೋಕ' ವ್ಯಕ್ತಪಡಿಸಬಹುದೆಂಬ ಭೀತಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!