ಹಿಂದೂ ಸೇರಿದಂತೆ ಇಬ್ಬರ ಬ್ರೈನ್ ವಾಷ್ ಮಾಡಿದ್ದ ಮೆಹ್ದಿ!
ಇಸಿಸ್ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಟ್ವಿಟರ್ ಖಾತೆ ನಿರ್ವಹಿಸಿದ ಆರೋಪದ ಮೇಲೆ ಬಂಧಿತನಾಗಿರುವ ಉಗ್ರ ಮೆಹ್ದಿ...
ಬೆಂಗಳೂರು: ಇಸಿಸ್ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಟ್ವಿಟರ್ ಖಾತೆ ನಿರ್ವಹಿಸಿದ ಆರೋಪದ ಮೇಲೆ ಬಂಧಿತನಾಗಿರುವ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್, ಒಬ್ಬ ಹಿಂದೂ ಸೇರಿದಂತೆ ಇಬ್ಬರನ್ನು ಇಸಿಸ್ ಬಗ್ಗೆ `ಬ್ರೈನ್ ವಾಷ್' ಮಾಡಿದ್ದ ಎನ್ನುವ ಸ್ಫೋಟಕ ಮಾಹಿತಿ ಸಿಸಿಬಿ ಪೋಲೀಸರ ತನಿಖೆ ವೇಳೆ ಬಯಲಾಗಿದೆ. ಚೆನ್ನೈ ಹಾಗೂ ಬೆಂಗಳೂರಿನ ಇಬ್ಬರ ಹೇಳಿಕೆಗಳನ್ನು ಪೋಲೀಸರು ಸಿಆರ್ಪಿಸಿ ಕಲಂ 164 ಅನ್ವಯ ನ್ಯಾಯಾಲಯದ ಮುಂದೆ ರೆಕಾರ್ಡ್ ಮಾಡಿದ್ದಾರೆ. ಆದರೆ, ಇಬ್ಬರ ಹೆಸರನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಇಸಿಸ್ ಚಟುವಟಿಕೆಗಳ ಪರ ಶಮ್ಮಿ ವಿಟ್ನೆಸ್ ಹೆಸರಿನಲ್ಲಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿಯನ್ನು ಬಂಧಿಸಿದ ಬಳಿಕ ಖಾತೆಯಲ್ಲಿದ್ದ 1 ಲಕ್ಷ 20 ಸಾವಿರಕ್ಕೂ ಅಧಿಕ ಟ್ವೀಟ್ಗಳನ್ನು ಸಿಸಿಬಿ ಪೋಲೀಸರು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಇಬ್ಬರೊಂದಿಗೆ ಮೆಹ್ದಿ ಹೆಚ್ಚು ಚಾಟಿಂಗ್ ಮಾಡುತ್ತಿದ್ದ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.