ಪೋಲೀಸ್ ಕ್ಯಾಪ್ 
ಜಿಲ್ಲಾ ಸುದ್ದಿ

ಓಂ ಪ್ರಕಾಶ್ ಹೊಸ ಡಿಜಿಪಿ?

ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ಗೊಂದಲದಲ್ಲಿ ಮುಳುಗಿದೆ...

ಬೆಂಗಳೂರು: ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ಗೊಂದಲದಲ್ಲಿ ಮುಳುಗಿದೆ. ಹಾಲಿ ಡಿಜಿಪಿ ಲಾಲ್ ರುಕಾಮ್ ಪಚಾವೋ ಅವರ ಅಧಿಕಾರಾವಧಿ ಶುಕ್ರವಾರ ಮುಕ್ತಾಯಗೊಳ್ಳಲಿದ್ದು, ಆರ್.ಕೆ.ದತ್ತಾ ಮತ್ತು ಓಂ ಪ್ರಕಾಶ್ ಅವರ ಪೈಕಿ ಯಾರನ್ನು ಆಯ್ಕೆ  ಮಾಡಿಕೊಳ್ಳಬೇಕೆಂಬ ವಿಚಾರದಲ್ಲಿ ಇನ್ನೂ ಗೊಂದಲ ಪರಿಹಾರವಾಗಿಲ್ಲ. ಹೀಗಾಗಿ ಗುರುವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಸರ್ಕಾರದ ವಿವಿಧ ಹಂತದಲ್ಲಿ ಈ ಸಂಬಂಧ ಸಭೆ  ನಡೆದಿವೆಯಾದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಪದ್ಧತಿ  ಪ್ರಕಾರ ನಿವೃತ್ತಿಗೆ ಸಜ್ಜಾಗಿರುವ ಹಾಲಿ ಡಿಜಿಪಿ ಪಚಾವೋ ಅವರಿಗೆ ನಿರ್ಗಮನ ಪಥ ಸಂಚಲನ ನೀಡಲು ಪೊಲೀಸ್ ಇಲಾಖೆ ಪದ್ದತಿ ಪ್ರಕಾರ ಸಿದ್ದವಾಗಿದೆ. ಆದರೆ ಸಾಯಂಕಾಲ ಪಚಾವೋ ಯಾರಿಗೆ ಅಧಿಕಾರ ದಂಡ ಹಸ್ತಾಂತರಿಸಲಿದ್ದಾರೆ ಎಂಬುದು ಮಾತ್ರ ಇನ್ನೂ ಬಗೆಹರಿದಿಲ್ಲ. ಸೇವಾ ಜೇಷ್ಠತೆ ಪ್ರಕಾರ ಸುಶಾಂತ್ ಮಹಾಪಾತ್ರ, ಓಂಪ್ರಕಾಶ್, ಆರ್. ಕೆ.ದತ್ತಾ ಹಾಗೂ ಬಿಪಿನ್ ಗೋಪಾಲ್ ಕೃಷ್ಣ ಸರ್ಕಾರ ಕೇಂದ್ರ ಲೋಕಸೇವಾ ಆಯೋ ಗಕ್ಕೆ ಕಳುಹಿಸಿದ ಅರ್ಹತಾ ಪಟ್ಟಿಯಲ್ಲಿದ್ದಾರೆ. ಆದರೆ ಸೇವಾ ದಕ್ಷತೆ ಆಧಾರದ ಮೇಲೆ ದತ್ತಾ ಮತ್ತು ಓಂ ಪ್ರಕಾಶ್ ಅವರತ್ತ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ. ಗುರುವಾರ ನಡೆದ ಸಭೆಯಲ್ಲಿ ಯಾವುದೇ ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳು ಮತ್ತು ಗೃಹ ಸಚಿವರ ಜತೆ ಸಭೆ ನಡೆಸಿ ಅಧಿಕೃತವಾಗಿ ಪೋಲೀಸ್ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ಎಂಬುದನ್ನು ಪ್ರಕಟಿಸಲಿದ್ದಾರೆ. ಆದರೆ ಪೊಲೀಸ್ ವಲಯದಲ್ಲಿ ಓಂಪ್ರಕಾಶ್ ಅವರು ಪೋಲೀಸ್ ಮಹಾನಿರ್ದೇಶಕರಾಗಿ ಆಯ್ಕೆಗೊಳ್ಳುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ, ಖಚಿತಗೊಂಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!