ಬೆಂಗಳೂರು: ಸುಧಾ ಗೋಪಾಲಕೃಷ್ಣನ್ ಅವರು ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್‌ನ ಅತಿದೊಡ್ಡ ಪ್ರವರ್ತಕ ಷೇರುದಾರರು ಎಂದು ಕಂಪನಿ ತಿಳಿಸಿದೆ.
ಕಂಪನಿಯ ಸಹಸ್ಥಾಪಕ ಎಸ್.ಗೋಪಾಲಕೃಷ್ಣನ್ ಅವರ ಪತ್ನಿ ಸುಧಾ ಅವರು ಅಕ್ಟೋಬರ್-ಡಿಸೆಂಬರ್ 2014ರ ತ್ರೈಮಾಸಿಕದಲ್ಲಿ ಶೇ.2.14 ಷೇರುಗಳನ್ನು ಹೊಂದಿದ್ದರು.
ಅವರಲ್ಲಿರುವ ಒಟ್ಟು ಷೇರುಗಳ ಸಂಖ್ಯೆ 2,45,89,250. ಸ್ಥಾಪಕರು, ಅವರ ಕುಟುಂಬ ಸದಸ್ಯರು ಸೇರಿದಂತೆ ಇನ್ಫೋಸಿಸ್‌ನ ಪ್ರವರ್ತಕರು ಶೇ.13.08 ಷೇರುಗಳನ್ನು ಹೊಂದಿದ್ದಾರೆ ಎಂದು ಕಂಪನಿ ತಿಳಿಸಿದೆ.
ಸುಧಾ ಅವರ ಬಳಿಕ ಎನ್.ಆರ್.ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಎರಡನೇ ಸ್ಥಾನದಲ್ಲಿದ್ದು, ಶೇ.1.38 ಷೇರುಗಳನ್ನು ಹೊಂದಿದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ.