ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ 
ಜಿಲ್ಲಾ ಸುದ್ದಿ

ಮಹಾಮಜ್ಜನಕ್ಕೆ ಕಾರ್ಕಳ ಸಜ್ಜು

ಮಹಾಮಸ್ತಕಾಭಿಷೇಕ ನೋಡುವುದಕ್ಕೆ ಕಳೆದ 12 ವರ್ಷಗಳಿಂದ ಕಾಯುತ್ತಿದ್ದಾರೆ...

ಕಾರ್ಕಳ: ದೇಶಾದ್ಯಂತ ಇರುವ ಜೈನ ಧರ್ಮೀಯರು ಬಹಳ ಕಾತರದಿಂದ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳದತ್ತ ನೋಡುತ್ತಿದ್ದಾರೆ. ಇಲ್ಲಿನ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನೋಡುವುದಕ್ಕೆ ಕಳೆದ 12 ವರ್ಷಗಳಿಂದ ಕಾಯುತ್ತಿದ್ದಾರೆ.

ಹೌದು, ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಜ.21ರಿಂದ 31ರವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ. ಈಗಾಗಲೇ ಈ ಮಹೋತ್ಸವದಲ್ಲಿ ಭಾಗವಹಿಸುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜೈನ ಭಕ್ತರು ಕಾರ್ಕಳದತ್ತ ಹೊರಟಿದ್ದಾರೆ. 10 ದಿನಗಳ ಕಾಲ ಕಾರ್ಕಳ ಜೈನರ ಆಡುಂಬೊಲವಾಗಲಿದೆ. ಇಲ್ಲಿ ಜೈನರ ಭಕ್ತಿ, ಸಂಭ್ರಮ ಪರಾಕಾಷ್ಠೆಗೇರಲಿದೆ.

ಈ ಅಭಿಷೇಕ ಪೂರ್ವಕ ಬಾಹುಬಲಿ ಆರಾಧನೆಯ ಹಿಂದೆ ಜೈನ ಧಾರ್ಮಿಕ ಪ್ರಭಾವನೆ, ಈ ಮಾಹಮೂರ್ತಿಯ ಪ್ರಾರ್ಥನೆಗಳ ಉದ್ದೇಶ ಇದೆ. ಆದ್ದರಿಂದ ಈ ಮಹೋತ್ಸವಕ್ಕೆ ಧಾರ್ಮಿಕವಾಗಿಯೂ, ಸಾಮಾಜಿಕವಾಗಿಯೂ ವಿಶೇಷ ಮಹತ್ವ ಇದೆ.

ಹಾಗೆ ನೋಡಿದರೆ ಜೈನ ಧರ್ಮದಲ್ಲಿ ಇತರ ಧರ್ಮಗಳಂತೆ ಹೆಜ್ಜೆಗೊಂದು ಉತ್ಸವ ಆಚರಣೆಗಳಿಲ್ಲ. ಆದ್ದರಿಂದ ಬಹು ಅಪರೂಪಕ್ಕೆ ಅದೂ 12 ವರ್ಷಗಳ ನಂತರ ನಡೆಯುವ ಉತ್ಸವ ಎಂದರೆ ಅದರ ನಿರೀಕ್ಷೆ ಅಷ್ಟಿಷ್ಟಲ್ಲ.

ವಾಸ್ತವದಲ್ಲಿ ಈ ಮಹೋತ್ಸವ ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ, ಕಳೆದ ವರ್ಷ ನಡೆದ ಚುನಾವಣೆಗಳಿಂದಾಗಿ ಸರ್ಕಾರದಿಂದ ಸರಿಯಾದ ಸಮಯದಲ್ಲಿ ನಿರೀಕ್ಷಿತ ಸಹಕಾರ ದೊರೆಯದ ಕಾರಣ ಮಹಾಮಸ್ಕಕಾಭಿಷೇಕ ಒಂದು ವರ್ಷ ಮುಂದೂಡಲ್ಪಟ್ಟಿತು. ಇದೀಗ ಕಾಲ ಕೂಡಿ ಬಂದಿದೆ.

ಶ್ರವಣಬೆಳಗೊಳದ ಶ್ರೀಚಾರುಕೀರ್ತಿ ಭಟ್ಟಾರಕ ಪಟ್ಟಾವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಕಾರ್ಕಳದ ಶ್ರೀಲಲಿತ ಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ, ಧರ್ಮಸ್ಥಳದ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಉತ್ಸವ ಸಮಿತಿ ಈಗಾಗಲೇ ಮಹೋತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸಹಕಾರಿ ಧುರೀಣ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಈ ಸಮಿತಿ ಕಾರ್ಯಾಧ್ಯಕ್ಷರಾಗಿರುವುದರಿಂದ, ಸಹಜವಾಗಿಯೇ ಈ ಮಹೋತ್ಸವವನ್ನು ಅತ್ಯಂತ ವೈಭವಯುತವಾಗಿ ನಡೆಯಲಿದೆ.

ಈ 10 ದಿನಗಳಲ್ಲಿ ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವೈರಾಗ್ಯ ಮೂರ್ತಿ ಬಾಹುಬಲಿಗೆ ವೈವಿಧ್ಯಮಯ ದ್ರವ್ಯಗಳಿಂದ ಮಹಾಭಿಷೇಕ ನಡೆಯಲಿದೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲರು ಈ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಗಳು, ರಾಜ್ಯ-ಕೇಂದ್ರ ಸಚಿವರು, ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

-ಸುಭಾಶ್ಚಂದ್ರ ಎಸ್.ವಾಗ್ಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!