ಭಟ್ಕಳದಲ್ಲಿ ಶಂಕಿತ ಉಗ್ರರ ಬಂಧನ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಐಎಂ ಸಾರಥಿಯಾಗಿದ್ದ ಅಫಕ್

ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಬಂಧಿತ ನಾಲ್ವರು ಉಗ್ರರ ಪೈಕಿ ಹೋಮಿಯೋಪಥಿ..

ಬೆಂಗಳೂರು: ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಬಂಧಿತ ನಾಲ್ವರು ಉಗ್ರರ ಪೈಕಿ ಹೋಮಿಯೋಪಥಿ ವೈದ್ಯ ಸೈಯದ್ ಇಸ್ಮಾಯಿಲ್ ಅಫಕ್ ಭಾರತದಲ್ಲಿ ಉಗ್ರರ ನಾಯಕಗಾಗಿ ಬೆಳೆಯುತ್ತಿದ್ದ.

2013 ಆಗಸ್ಟ್ 29ರಂದು ಭಾರತ-ನೇಪಾಳ ಗಡಿಯ ಬಿಹಾರದಲ್ಲಿ ಐಎಂ ಸಂಘಟನೆಯ ಅಂತಾರಾಷ್ಟ್ರೀಯ ಮಟ್ಟದಲ್ಲಿ 2ನೇ ಪ್ರಮುಖ ನಾಯಕ ಯಾಸಿನ್ ಭಟ್ಕಳ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಬಂಧಿಸಿದ್ದರು. ಬಂಧಿತನಾಗುವ ದಿನದವರೆಗೂ ಭಾರತದಲ್ಲಿ ಐಎಂಗೆ ಯಾಸಿನ್ ಭಟ್ಕಳನೇ ನಾಯಕನಾಗಿದ್ದ. ಆದರೆ ಅವನ ಬಂಧನದ ಬಳಿಕ 'ನಾವಿಕನಿಲ್ಲದ ಹಡಗು' ಆಗಿದ್ದ ಐಎಂಗೆ ಮರುಜೀವ ತುಂಬಿ 2ನೇ ಹಂತದ ನಾಯಕನಾಗಿ ಡಾ.ಅಫಕ್ ಬೆಳೆಯುತ್ತಿದ್ದ.

ಪಾಕಿಸ್ತಾನಕ್ಕೆ ಹೋಗಿ ಬರುತ್ತಿದ್ದರಿಂದ ಸ್ಫೋಟಕ ತಯಾರಿಕೆ, ಕಚ್ಛಾವಸ್ತುಗಳ ಸಂಗ್ರಹ, ಹಣ ಪಾವತಿ ವಿಚಾರವಾಗಿ ಎಲ್ಲದಕ್ಕೂ ಡಾ. ಅಫಕ್ ಮುಂದಾಳತ್ವ ವಹಿಸಿಕೊಂಡಿದ್ದ. ಮಾತ್ರವಲ್ಲ ಉಳಿದವರನ್ನು ಸೇರಿಸಿಕೊಂಡು ತಂಡ ಕಟ್ಟಿದ್ದ. ಈ ಜಾಲದಲ್ಲಿ ಇನ್ನು ಹಲವರು ಸಕ್ರಿಯವಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆ ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಸಿಸಿಬಿ ಅಧಿಕಾರಿಗಳು.

ನಾಮ್‌ಕೇ ವಾಸ್ತೆ
ವೈದ್ಯನಾಗಿರುವ ಡಾ.ಅಫಕ್. ಎಲ್ಲಿಯೂ ಪ್ರ್ಯಾಕ್ಟಿಸ್ ಮಾಡುತ್ತಿರಲಿಲ್ಲ. ಕೇವಲ ದೇಶದ್ರೋಹಿ ಚಟುವಟಿಕೆಗಳಿಗಾಗಿ ಓಡಾಟ ನಡೆಸುತ್ತಿದ್ದ. ವಿದೇಶಗಳಿಂದ ಈತನಿಗೆ ಹಣ ಹರಿದು ಬರುತ್ತಿದ್ದರಿಂದ ದುಡ್ಡಿನ ಸಮಸ್ಯೆಯೇ ಉಂಟಾಗುತ್ತಿರಲಿಲ್ಲ. ಗುಜರಿ ವ್ಯಾಪಾರಿ ಸದ್ದಾಂ ಹುಸೇನ್ ಹಾಗೂ ಎಂಬಿಎ ವಿದ್ಯಾರ್ಥಿ ಅಬ್ಬುಸ್ ಸಬೂರ್ ಕೂಡಾ ಶಿಕ್ಷಣಕ್ಕಿಂತ ಉಗ್ರ ಶಿಕ್ಷಣದ ಕಡೆಯೇ ಹೆಚ್ಚಿನ  ಆಸಕ್ತಿ ಹೊಂದಿದ್ದರು.

ಸತ್ಯ ಮುಚ್ಚಿಡುತ್ತಿದ್ದಾರೆ
ಬಂಧಿತರು ಕೆಲ ಸ್ಫೋಟಗಳಿಗೆ ಸ್ಫೋಟಕಗಳ ಪೂರೈಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಹಲವು ವಿಚಾರಗಳನ್ನು ಮುಚ್ಚಿಡುತ್ತಿದ್ದಾರೆ. ಎಲ್ಲ ವಿಚಾರಗಳನ್ನು ಹೇಳಲಾಗದು ಎಂದು ವಿಚಾರಣಾಧಿಕಾರಿಗಳಿಗೆ ಬಂಧಿತರು ಹೇಳುತ್ತಿದ್ದಾರೆ. ಆದರೆ ಮುಂದಿನ ದಿನಗಳ ಅವರು ಎಸಗಿರುವ ಎಲ್ಲ ಕೃತ್ಯಗಳು ಹಾಗೂ ಭವಿಷ್ಯದ ಯೋಜನೆಗಳನ್ನು ಹೊರಗೆಳೆಯುವ ವಿಶ್ವಾಸ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಸ್ಯಾಟಲೈಟ್ ಫೋನ್ ಬಳಕೆ?
ಭಟ್ಕಳ ಮನೆ ಮೇಲೆ ದಾಳಿ ವೇಳೆ, ಸೇನೆ, ಪ್ರಮುಖ ಭದ್ರತಾ ಸಂಸ್ಥೆಗಳು, ಅನುಮತಿ ಪಡೆದು ಖಾಸಗಿ ಸಂಸ್ಥೆಗಳು ಬಳಸುವ ವೈರ್‌ಲೆಸ್ ಸಾಧನ ದೊರಕಿದೆ. ಅದನ್ನು ಸ್ಯಾಟಲೈಟ್ ಫೋನ್ ಆಗಿ ಬಳಸುತ್ತಿದ್ದರಾಯ? ಎನ್ನುವ ಅನುಮಾನವಿದ್ದು ಇನ್ನು ಖಚಿತವಾಗಿಲ್ಲ.

ಟ್ರಯಲ್ ನೋಡಿದ್ದರು!

ಬಾಂಬ್ ಇಟ್ಟರೆ ಕನಿಷ್ಟ ಹಾಗೂ ಗರಿಷ್ಟ ಪ್ರಮಾಣದ ಜೀವ ಹಾನಿ ಉಂಟು ಮಾಡಲೇಬೇಕು, ತಾವು ಮಾಡಿದ ಕೆಲಸ ಪರ್ಫೆಕ್ಟ್ ಆಗಿರಬೇಕು. ಅದಕ್ಕಾಗಿ ಡಾ. ಅಫಕ್ ತಯಾರಿಸಿದ ಬಾಂಬ್ ಅನ್ನು ಮರಳಿನಲ್ಲಿ ಇಟ್ಟು ಸ್ಫೋಟಿಸಿ ಟ್ರಯಲ್ ನೋಡುತ್ತಿದ್ದ. ಸ್ಫೋಟಗೊಳ್ಳುತ್ತಾ? ಸ್ಫೋಟಗೊಂಡರೆ ಅದರ ತೀವ್ರತೆ ಎಷ್ಟು? ವಿಫಲವಾಗದಂತೆ ಇರಲು ಕ್ರಮಗಳನ್ನು ಕೈಗೊಳ್ಳುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದ್ವಿಪಕ್ಷೀಯ ಸಂಬಂಧ ವೃದ್ಧಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿ. 5–6 ರಂದು ಭಾರತಕ್ಕೆ ಭೇಟಿ ನಿರೀಕ್ಷೆ

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

1st Test: Mohammed Siraj ದಾಳಿಗೆ ಪತರುಗುಟ್ಟಿದ West Indies, ಭೋಜನ ವಿರಾಮದ ವೇಳೆಗೆ 90/5

ಸರ್ಕಾರ ವಿರುದ್ಧ ಸೋನಮ್ ವಾಂಗ್‌ಚುಕ್ ಪತ್ನಿಯಿಂದ ಕಿರುಕುಳದ ಆರೋಪ: ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ, ಪತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

SCROLL FOR NEXT